MI vs RR: ನಿರ್ಣಾಯಕ ಪಂದ್ಯದಲ್ಲಿ ಹಳಿ ತಪ್ಪಿದ ರಾಜಸ್ಥಾನಕ್ಕೆ ಜುರೆಲ್-ಆರ್ಚರ್ ಆಸರೆ! ಮುಂಬೈ ಗೆಲುವಿಗೆ ಸವಾಲಿನ ಗುರಿ ನೀಡಿದ ಆರ್​ಆರ್​ | ಕ್ರೀಡಾ ಸುದ್ದಿ | ACTPnews

ಜೋಫ್ರಾ ಆರ್ಚರ್


Last Updated:

ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿವೆ. ಈ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಬೌಲಿಂಗ್ ದಾಳಿಗೆ ರಾಜಸ್ಥಾನ ಬ್ಯಾಟಿಂಗ್ ಮಂಕಾಗಿದ್ದು, ಸಾಧಾರಣ ಮೊತ್ತ ಕಲೆ ಹಾಕಿದೆ.

ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್

ಐಪಿಎಲ್ (IPL) 2026 ರ 69ನೇ ಪಂದ್ಯ ಮುಂಬೈ ಇಂಡಿಯನ್ಸ್ (MI) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯುತ್ತಿದೆ. ಈ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ (Wankhede Stadium) ಆತಿಥ್ಯ ವಹಿಸಿದೆ. ಈಗಾಗಲೇ ಮುಂಬೈ ಪ್ಲೇಆಫ್ (Playoff) ರೇಸ್​​ನಿಂದ ಹೊರಬಿದ್ದಿದೆ. ಮತ್ತೊಂದೆಡೆ ಪಂದ್ಯದಲ್ಲಿ ರಾಜಸ್ಥಾನ ಗೆದ್ದರೆ, ಪ್ಲೇಆಫ್‌ಗೆ ಮುನ್ನಡೆಯಲಿದೆ. ಇಂತಹ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಟಾಸ್ (Toss) ಗೆದ್ದು ಮೊದಲು ಬೌಲಿಂಗ್ (Bowling) ಮಾಡಲು ಆಯ್ಕೆ ಮಾಡಿಕೊಂಡರು. ಹೀಗಾಗಿ ಬ್ಯಾಟಿಂಗ್ (Batting) ಆರಂಭಿಸಿದ ರಿಯಾನ್ ಪರಾಗ್ (Riyan Parag) ನೇತೃತ್ವದ ರಾಜಸ್ಥಾನ ತಂಡದ ಬ್ಯಾಟಿಂಗ್ ಲೈನ್ ಆಫ್ ಆರಂಭದಲ್ಲಿ ಹಳಿ ತಪ್ಪಿತ್ತು.

ಮುಂಬೈ ಬೌಲಿಂಗ್ ದಾಳಿಗೆ ಸಿಲುಕಿದ ರಾಜಸ್ಥಾನ ಆರಂಭದಲ್ಲೇ ತನ್ನ ಟಾಪ್ ಆರ್ಡರ್​ ಬ್ಯಾಟಿಂಗ್ ಲೈನ್ ಆಫ್ ಅನ್ನು ಕಳೆದುಕೊಂಡಿತ್ತು. ಆರಂಭಿಕರ ವಿಕೆಟ್ ಪತನದ ನಂತರ ಧ್ರುವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರೆ, ಕೊನೆಯಲ್ಲಿ ಅಬ್ಬರಿಸಿದ ವೇಗಿ ಜೋಫ್ರಾ ಆರ್ಚರ್ ರಾಜಸ್ಥಾನ ತಂಡದ ಮೊತ್ತ ಹೆಚ್ಚಿಸಿದರು.

ಮುಂಬೈ ವಿರುದ್ಧ ರಾಜಸ್ಥಾನ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು. ಮುಂಬೈ ಪರ ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರೆ, ವಿಲ್ ಜ್ಯಾಕ್ಸ್, ಎಎಮ್ ಗಜನ್‌ಫರ್,  ಮತ್ತು ಕಾರ್ಬಿನ್ ಬಾಷ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಆರಂಭದಲ್ಲೇ ಹಳಿ ತಪ್ಪಿದ ರಾಜಸ್ಥಾನ

ರಾಜಸ್ಥಾನ ರಾಯಲ್ಸ್ ತಂಡವು 33 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಪಡೆಯಿತು. ಯಶಸ್ವಿ ಜೈಸ್ವಾಲ್ ಅವರನ್ನು ವಿಲ್ ಜಾಕ್ಸ್ 27 ರನ್‌ಗಳಿಗೆ ಔಟ್ ಮಾಡಿದರು. ಈ ಮಧ್ಯೆ ವೈಭವ್ ಸೂರ್ಯವಂಶಿ ಆರು ಎಸೆತಗಳಲ್ಲಿ ನಾಲ್ಕು ರನ್ ಗಳಿಸಿದರು. ದೀಪಕ್ ಚಾಹರ್ ವೈಭವ್ ಅವರನ್ನು ಔಟ್ ಮಾಡಿದರು. ನಾಯಕ ರಿಯಾನ್ ಪರಾಗ್ (14) ಹೆಚ್ಚು ಪರಿಣಾಮ ಬೀರುವಲ್ಲಿ ವಿಫಲರಾದರು. ಸ್ಪಿನ್ನರ್ ಅಲ್ಲಾ ಗಜನ್‌ಫರ್ ಎಸೆತದಲ್ಲಿ ಪರಾಗ್ ವಿಕೆಟ್ ಕಳೆದುಕೊಂಡರು.

ಜೊತೆಯಾಟದ ಆಸರೆ

ಅಲ್ಲಿಂದ ದಾಸುನ್ ಶನಕ ಮತ್ತು ಧ್ರುವ್ ಜುರೆಲ್ ನಾಲ್ಕನೇ ವಿಕೆಟ್‌ಗೆ 45 ರನ್ ಸೇರಿಸಿದರು. ದಾಸುನ್ ಶನಕ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡರು. ಆದರೆ ನಿರ್ಣಾಯಕ ಹಂತದಲ್ಲಿ ಅವರು ರನೌಟ್ ಆದರು. ಶನಕ 15 ಎಸೆತಗಳಲ್ಲಿ ಮೂರು ಸಿಕ್ಸರ್‌ ನೆರವಿನಿಂದ 29 ರನ್ ಗಳಿಸಿದರು. ನಂತರ ಧ್ರುವ್ ಜುರೆಲ್ ಕಾರ್ಬಿನ್ ಬಾಷ್‌ಗೆ ವಿಕೆಟ್ ಒಪ್ಪಿಸಿದರು. ಜುರೆಲ್ 26 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಾಯದಿಂದ 38 ರನ್ ಗಳಿಸಿದರು. ಡೊನೊವನ್ ಫೆರೇರಾ (18) ಎರಡು ಸಿಕ್ಸರ್ ಬಾರಿಸಿದರು. ಆದರೆ ಅವರ ಇನ್ನಿಂಗ್ಸ್ ಅನ್ನು ದೀಪಕ್ ಚಹಾರ್ ಕೊನೆಗೊಳಿಸಿದರು.

ಕೊನೆಯ 12 ಎಸೆತಗಳಲ್ಲಿ 30 ರನ್

ಶುಭಂ ದುಬೆ ಕೇವಲ 5 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ವೇಗಿ ಜೋಫ್ರಾ ಆರ್ಚರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ರಾಜಸ್ಥಾನದ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್ಚರ್ 15 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 32 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ ಶುಭಂ ದುಬೆ ಮತ್ತು ಜೋಫ್ರಾ ಆರ್ಚರ್ ಅವರ ವಿಕೆಟ್ ಪಡೆದರು.

ಕೊನೆಯಲ್ಲಿ ಬಂದ ರವೀಂದ್ರ ಜಡೇಜಾ 11 ಎಸೆತಗಳಲ್ಲಿ 3 ಬೌಂಡರಿ ಮೂಲಕ ಅಜೇಯ 19 ರನ್ ಗಳಿಸಿದರು. ಮತ್ತೊಂದೆಡೆ ನಾಂಡ್ರೆ ಬರ್ಗರ್ 3 ಎಸೆತಗಳಲ್ಲಿ 10 ರನ್ ಚಚ್ಚಿದರು. ಜಡೇಜಾ ಮತ್ತು ಬರ್ಗರ್ ಕೊನೆಯ 12 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ರಾಜಸ್ಥಾನ ತಂಡವನ್ನು 200 ರ ಗಡಿ ದಾಟಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

MI vs RR: ನಿರ್ಣಾಯಕ ಪಂದ್ಯದಲ್ಲಿ ಹಳಿ ತಪ್ಪಿದ ರಾಜಸ್ಥಾನಕ್ಕೆ ಜುರೆಲ್-ಆರ್ಚರ್ ಆಸರೆ! ಮುಂಬೈ ಗೆಲುವಿಗೆ ಸವಾಲಿನ ಗುರಿ ನೀಡಿದ ಆರ್​ಆರ್​



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed