Last Updated:
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಸಂಚಿತ್ ಇಂಡಸ್ಟ್ರಿಗೂ ಕಾಲಿಡುತ್ತಿದ್ದಾರೆ. ಮನೆಮಂದಿ ಸೇರಿ ಇಂಡಸ್ಟ್ರಿಯ ಎಲ್ಲರೂ ಗುಡ್ ಲಕ್ ಹೇಳಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮ್ಯಾಂಗೋ ಪಚ್ಚ ರಿಲೀಸ್ (Mango Pachcha Movie) ಆಗುತ್ತಿದೆ. ಸಂಚಿತ್ ಸಂಜೀವ್ (Sanchith Sanjeev) ನಾಯಕರಾಗಿ ಎಂಟ್ರಿ ಕೊಡ್ತಿದ್ದಾರೆ. ಮೊದಲ ಚಿತ್ರದ ಟೀಸರ್ ಹಾಗೂ ಟ್ರೈಲರ್ ಮತ್ತು ಹಾಡುಗಳಲ್ಲಿಯೂ ಹೊಸ ಭರವಸೆ ಮೂಡಿಸಿದ್ದಾರೆ. ಕಿಚ್ಚ ಸುದೀಪ್ (Kichcha Sudeepa) ಮನೆಯಲ್ಲಿ ಈ ಚಿತ್ರದ ಶೋ ಕೂಡ ರಿಲೀಸ್ ಹಿಂದಿನ ದಿನ ನಡೆದಿದೆ. ಸೆಲೆಬ್ರಿಟಿಗಳು ಚಿತ್ರ ನೋಡಿ ಕೊಂಡಾಡಿದ್ದಾರೆ. ಜನರ ಜೊತೆಗೆ ಚಿತ್ರ ನೋಡೋಕೆ ಕಿಚ್ಚ ಸುದೀಪ್ (Kichcha Sudeepa) ಬೆಳಗ್ಗೆ 8.15 ಕ್ಕೆ ಸಂತೋಷ್ ಥಿಯೇಟ್ಗೂ ಬರ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ.
ಕಿಚ್ಚನ ಅಕ್ಕನ ಮಗ
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)
ಮ್ಯಾಂಗೋ ಪಚ್ಚ ಚಿತ್ರದಲ್ಲಿ ಮೈಸೂರು ಹುಡುಗನ ಕತೆ ಇದೆ. ಮ್ಯಾಂಗೋ ಪಚ್ಚ ಆಗಿಯೇ ಬದಲಾಗುವ ಪ್ರಶಾಂತ್ನ ಕತೆ ಇಲ್ಲಿದೆ. ಮೈಸೂರಿನಲ್ಲಿ ಗಾಂಜಾ ದಂಧೆ ಹೇಗೆಲ್ಲ ನಡೀತಿತ್ತು ಅನ್ನೋದು ಇದರಲ್ಲಿದೆ. ಕಿಚ್ಚನ ನಿರೂಪಣೆಯಲ್ಲಿ ಪಚ್ಚನ ಪರಿಚಯ ಕೂಡ ಆಗುತ್ತದೆ.
ಸಂಚಿತ್ ಸಂಜೀವ್ ಬೆರೆ ಯಾರೋ ಅಲ್ಲ. ಸುದೀಪ್ ಅವರ ಅಕ್ಕನ ಮಗ ಈ ಸಂಚಿತ್ ಸಂಜೀವ್. ಸಿನಿಮಾ ಆಸಕ್ತಿ ತುಂಬಾನೆ ಇದೆ. ಮಾವನ ಪ್ರಭಾವವು ಇದೆ.
ಬಾಲ್ಯದಿಂದಲೂ ಅಟ್ಯಾಚ್ ಆಗಿರೋದು ಇದೆ. ಸುದೀಪ್ ತರವೇ ಮ್ಯಾನರಿಸಂ ಇದೆ. ಕಿಚ್ಚ ಜೂನಿಯರ್ ಅಂತಲೂ ಕರೀತಾರೆ. ಜಿಮ್ಮಿ ಚಿತ್ರದ ಟೀಸರ್ ಬಂದಾಗಲೆ ಕಿಚ್ಚ ಜೂನಿಯರ್ ಅಂತ ಹೇಳಿರೋರೇ ಹೆಚ್ಚು ನೋಡಿ. ಅದೇ ಹೆಸರು ಮ್ಯಾಂಗೋ ಪಚ್ಚ ಚಿತ್ರಕ್ಕೂ ಮುಂದುವರೆದಿದೆ.
ಮ್ಯಾಂಗೋ ಪಚ್ಚ ಜೂನ್-5 ರಂದು ತೆರೆಗೆ ಬರ್ತಿದೆ. ರಾಜ್ಯದೆಲ್ಲೆಡೆ ಈ ಚಿತ್ರ ಬಿಡುಗಡೆ ಆಗುತ್ತಿದೆ. ಕಿಚ್ಚನ ಅಭಿಮಾನಿಗಳು ಈ ನಾಯಕನನ್ನ ಸ್ವಾಗತಿಸಲು ಸಜ್ಜಾಗಿದ್ದಾರೆ.
ಚಿತ್ರ ರಿಲೀಸ್ ಮುಂಚೇನೆ ಸಂಚಿತ್ ಸಂಜೀವ್ ಉತ್ತರ ಕರ್ನಾಟ ಸೇರಿ ಎಲ್ಲೆಡೆ ಚಿತ್ರ ಪ್ರಚಾರ ಮಾಡಿದ್ದಾರೆ. ಜನರ ಪ್ರೀತಿಯನ್ನು ಸ್ವೀಕರಿಸಿದ್ದಾರೆ. ಕಿಚ್ಚನ ಮಗ ಅಂತಲೂ ಎಲ್ಲರಿಗೂ ಪರಿಚಯ ಆಗಿದ್ದಾರೆ.
ಮ್ಯಾಂಗೋ ಪಚ್ಚ…
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)
ನವ ನಿರ್ದೇಶಕ ವಿವೇಕ್ ಈ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. ಬಾಲಿವುಡ್ ಅಲ್ಲೂ ಇವರು ರೈಟಿಂಗ್ ವಿಭಾಗದಲ್ಲಿಯೇ ಹೆಚ್ಚು ಕೆಲಸ ಮಾಡಿದ್ದಾರೆ.
ಮೊದಲ ಅವಕಾಶವನ್ನು ಇವರು ಚೆನ್ನಾಗಿ ಬಳಕೆ ಮಾಡಿದ್ದಾರೆ. ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್ ಮತ್ತು ಟೀಸರ್ ಈ ವಿಷಯ ಹೇಳುತ್ತವೆ. ಶೇಖರ್ ಚಂದ್ರ ಮತ್ತು ಸ್ವಾಮಿ ಅವರ ಕ್ಯಾಮರಾವರ್ಕ್ ಕೂಡ ಚೆನ್ನಾಗಿದೆ.
ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಈ ಚಿತ್ರದಲ್ಲೂ ಹಾಡಿದ್ದಾರೆ. ಮಾರ್ಕ್ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮಸ್ತ್ ಮಲೈಕಾ ಹಾಡಿದರು. ಇದು ಹಿಟ್ ಆಗಿತ್ತು. ವೈರಲ್ ಕೂಡ ಆಗಿತ್ತು. ಚಂದನವನ ಕ್ರಿಟಿಕ್ಸ್ ಅವಾರ್ಡ್ ಕೂಡ ತಂದು ಕೊಡ್ತು
ಈ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿ ಆಗಿದ್ದಾರೆ. ಸಂಚಿತ್ ಸಂಜೀವ್ ಜೋಡಿ ಆಗಿದ್ದಾರೆ. ವಿಜಯ್ ರಾಘವೇಂದ್ರ ಅಳಿಯ ಜೈ ಇಲ್ಲಿ ಸಂಚಿತ್ ಸಹೋದರ ರೋಲ್ ಮಾಡಿದ್ದಾರೆ.
ಭಾವನಾ ರಾಮಣ್ಣ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ನಟಿ ಹರಿಣಿ, ಮಯೂರ್ ಪಟೇಲ್, ಮ್ಯಾಕ್ಸ್ ಮಂಜು ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರದ ರಿವ್ಯೂ ಮತ್ತು ಫಸ್ಟ್ ಡೇ ರಿಪೋರ್ಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ ಅಂತ ಹೇಳಹುದು.
Bangalore [Bangalore],Bangalore,Karnataka













