Malashree: ಕಿಚ್ಚನ ‘ಬಿಲ್ಲ ರಂಗ ಬಾಷಾ’ ಚಿತ್ರದಲ್ಲಿ ಮಾಲಾಶ್ರೀ; ಪಾತ್ರ ಹೇಗಿರುತ್ತೆ ಗೊತ್ತಾ? | | ACTPnews

ಕಿಚ್ಚನ 'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಮಾಲಾಶ್ರೀ; ಪಾತ್ರ ಹೇಗಿರುತ್ತೆ ಗೊತ್ತಾ?


Last Updated:

ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಮಾಲಾಶ್ರೀ ಅಭಿನಯಿಸ್ತಿದ್ದಾರೆ. ಈ ಸುದ್ದಿ ಪಕ್ಕಾನೇ ಬಿಡಿ. ಆದರೆ, ಏನ್ ರೋಲ್ ಮಾಡ್ತಿದ್ದಾರೆ? ಯಾವ ರೀತಿ ಇದು ಇರುತ್ತದೆ ಅನ್ನೋದೆಲ್ಲ ಅಧಿಕೃತವಾಗಿಯೇ ಹೊರ ಬರಬೇಕಿದೆ. ಇದರ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕಿಚ್ಚನ 'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಮಾಲಾಶ್ರೀ; ಪಾತ್ರ ಹೇಗಿರುತ್ತೆ ಗೊತ್ತಾ?
ಕಿಚ್ಚನ ‘ಬಿಲ್ಲ ರಂಗ ಬಾಷಾ’ ಚಿತ್ರದಲ್ಲಿ ಮಾಲಾಶ್ರೀ; ಪಾತ್ರ ಹೇಗಿರುತ್ತೆ ಗೊತ್ತಾ?

ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baasha Movie) ಹೊಸ ಸುದ್ದಿ ಒಂದು ಹೊರ ಬಂದಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ (Kichcha Sudeepa) ಹಲವು ರೂಪದಲ್ಲಿಯೇ ಕಾಣಿಸುತ್ತಿದ್ದಾರೆ. ಈ ಪ್ರತಿ ರೂಪದ ಜೊತೆಗೂ ಇನ್ನೂ ಒಂದು ರೋಲ್ ಇರುತ್ತದೆ. ಆ ಒಂದು ಮಹತ್ವದ ಪಾತ್ರನ್ನ ಮಾಲಾಶ್ರೀ ಅವರು ಮಾಡುತ್ತಿದ್ದಾರೆ. ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಅದಕ್ಕೂ ಮೊದಲೇ ಮಾಲಾಶ್ರೀ (Malashree) ಅವರು ಈ ಚಿತ್ರದಲ್ಲಿ ನಟಿಸ್ತಿದ್ದಾರೆ ಅನ್ನೋ ನ್ಯೂಸ್ ಹೊರ ಬಂದಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮಾಲಾಶ್ರೀ ಮಹತ್ವದ ರೋಲ್

ಮಾಲಾಶ್ರೀ ಅವರು ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ನಟಿಸ್ತಿರೋದು ಪಕ್ಕಾ ಆಗಿದೆ. ಕಿಚ್ಚ ಸುದೀಪ್ ಅವರ ಪಾತ್ರದ ಜೊತೆ ಜೊತೆಗೇನೆ ಈ ರೋಲ್ ಹೋಗ್ತದೆ ಅನ್ನೋ ಸುದ್ದಿನೂ ಇದೆ.
Malashree working with kichcha sudeepa on Billa Ranga Baasha Movie News Got Viral

ಮಾಲಾಶ್ರೀ ಮಹತ್ವದ ರೋಲ್

(ಚಿತ್ರ ಕೃಪೆ: ಮಾಲಾಶ್ರೀ ಇನ್‌ಸ್ಟಾಗ್ರಾಮ್)

ಆದರೆ, ಇವರ ಯಾವ ರೀತಿ ಪಾತ್ರ ಮಾಡ್ತಿದ್ದಾರೆ ಅನ್ನೋದು ಇನ್ನು ಗೊತ್ತಾಗಿಲ್ಲ. ಇವರ ಪಾತ್ರಕ್ಕೆ ತುಂಬಾನೆ ಮಹತ್ವ ಇದೆ. ಈ ಮಹತ್ವದ ಪಾತ್ರ ಮಾಲಾಶ್ರೀ ಅವರ ಚಿತ್ರ ಜೀವನದಲ್ಲಿ ದೊಡ್ಡ ಹೆಸರು ತಂದು ಕೊಡುತ್ತದೆ ಅನ್ನುವ ಸುದ್ದಿನೂ ಇದೆ.

ಅಧಿಕೃತ ಮಾಹಿತಿ ರಿವೀಲ್ ಆಗ್ಬೇಕಿದೆ

ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಮಾಲಾಶ್ರೀ ಅವರು ನಟಿಸುತ್ತಿದ್ದಾರೆ ಅನ್ನುವ ಸುದ್ದಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಇದು ಹೆಚ್ಚು ಗಮನ ಸೆಳೆಯುತ್ತಿದೆ.

ಹಾಗೆ ಬಲ್ಲ ಮೂಲಗಳ ಪ್ರಕಾರ ಇವರು ಅಭಿನಯಿಸ್ತಿರೋದು ನಿಜವೇ ಆಗಿದೆ. ಪಾತ್ರ ಹೇಗೆ ಇರುತ್ತದೆ? ಇವರ ಪಾತ್ರ ಸುದೀಪ್ ಅವರ ಜೊತೆಗೇನೆ ಸಾಗುತ್ತದೆಯೇ? ಈ ಎಲ್ಲ ವಿಷಯಗಳನ್ನ ಚಿತ್ರ ತಂಡವೇ ರಿವೀಲ್ ಮಾಡ್ಬೇಕಿದೆ ಅಂತಲೆ ಹೇಳಬಹುದು.

ಚಿತ್ರೀಕರಣ ಶುರು ಆಗಿ ಒಂದು ತಿಂಗಳು

ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗಿ ಒಂದು ತಿಂಗಳಾಗಿದೆ. ಕಳೆದ ತಿಂಗಳು ಜುಲೈ-26 ರಂದು ಚಿತ್ರದ ಮತ್ತೊಂದು ಹಂತದ ಶೂಟಿಂಗ್ ಶುರು ಆಗಿದೆ.

Malashree working with kichcha sudeepa on Billa Ranga Baasha Movie News Got Viral

ಅಧಿಕೃತ ಮಾಹಿತಿ ರಿವೀಲ್ ಆಗ್ಬೇಕಿದೆ

(ಚಿತ್ರ ಕೃಪೆ: ಅನೂಪ್ ಭಂಡಾರಿ ಇನ್‌ಸ್ಟಾಗ್ರಾಮ್)

ಈ ಜುಲೈ-26 ಕ್ಕೆ ಶೂಟಿಂಗ್ ಶುರು ಆಗಿ ಒಂದು ತಿಂಗಳಾಗುತ್ತದೆ. ಈ ಒಂದು ವಿಷಯವನ್ನ ಚಿತ್ರದ ಡೈರೆಕ್ಟರ್ ಅನೂಪ್ ಭಂಡಾರಿ ಹೇಳಿಕೊಂಡಿದ್ದಾರೆ. ಸೆಟ್ ಅಲ್ಲಿ ತೆಗೆ ಒಂದು ಫೋಟೋ ಹಂಚಿಕೊಂಡು ನಮ್ಮ ಚಿತ್ರದ ಶೂಟಿಂಗ್ ಶುರು ಆಗಿ ಒಂದು ತಿಂಗಳಾಯಿತು ಅಂತಲೇ ಹೇಳಿಕೊಂದ್ದಾರೆ.

ಎರಡು ರೋಲಾ, ಮೂರು ರೋಲಾ

ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಎಷ್ಟು ರೋಲ್ ಮಾಡುತ್ತಿದ್ದಾರೆ ಅನ್ನುವ ಕುತೂಹಲ ಜಾಸ್ತಿದೆ. ಕಾರಣ, ಚಿತ್ರದ ಟೈಟಲ್ ಅಲ್ಲಿ ಬಿಲ್ಲ ರಂಗ ಬಾಷಾ ಅಂತ ಮೂರು ಹೆಸರುಗಳೂ ಇವೆ.

ಹಾಗಾಗಿಯೇ ಮೂರು ರೋಲ್ ಇರಬೇಕು ಅನ್ನುವ ಗೆಸ್‌ವರ್ಕ್ ಕೂಡ ಶುರು ಆಗಿದೆ. ಇದಕ್ಕೆ ಪೂರಕ ಅನ್ನುವ ಹಾಗೆ ಸುದೀಪ್ ಒಂದು ಮಾತು ಹೇಳಿದ್ದರು. ಒಂದು ಗೆಟಪ್‌ಗೆ ಎರಡು ಗಂಟೆ ಕೂಡ್ಬೇಕು ಅಂತಲೇ ಹೇಳಿಕೊಂಡಿದ್ದರು. ಆ ಲೆಕ್ಕದಂತೆ ಇಲ್ಲಿ ಮೂರು ರೋಲ್ ಮಾಡ್ತಿದ್ದಾರೆ ಅಂತ ಸದ್ಯ ಅಂದಾಜು ಮಾಡಿಕೊಳ್ಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports