Maharaja Trophy: ಬೆಂಗಳೂರು ಬ್ಲಾಸ್ಟರ್ಸ್ ಮಣಿಸಿ ಚೊಚ್ಚಲ ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ ಯೋಧಾಸ್ | ಕ್ರೀಡಾ ಸುದ್ದಿ | ACTPnews

ಮಹಾರಾಜ ಟ್ರೋಫಿ ಗೆದ್ದ  ಶಿವಮೊಗ್ಗ ಯೋಧಾಸ್


Last Updated:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಈ ಸವಾಲಿನ ಗುರಿಯನ್ನು ದಿಟ್ಟವಾಗಿ ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ 19.4 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಮಹಾರಾಜ ಟ್ರೋಫಿ ಗೆದ್ದ  ಶಿವಮೊಗ್ಗ ಯೋಧಾಸ್
ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ ಯೋಧಾಸ್

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2026ರ ರೋಚಕ ಫೈನಲ್ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಶಿವಮೊಗ್ಗ ಯೋಧಾಸ್ ಅದ್ಭುತ ಪ್ರದರ್ಶನ ನೀಡಿ 4 ವಿಕೆಟ್​ಗಳ ರೋಚಕ ಜಯ ಸಾಧಿಸಿ ಚಾಂಪಿಯನ್​ ಪಟ್ಟ ಪಡೆದುಕೊಂಢಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈ-ವೋಲ್ಟೇಜ್ ಫೈನಲ್ ಕದನದಲ್ಲಿ ಸಾಂಘಿಕ ಹೋರಾಟ ಪ್ರದರ್ಶಿಸಿದ ಶಿವಮೊಗ್ಗ ಯೋಧಾಸ್ ಐತಿಹಾಸಿಕ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಈ ಸವಾಲಿನ ಗುರಿಯನ್ನು ದಿಟ್ಟವಾಗಿ ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ 19.4 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಬೆಂಗಳೂರು ಪರ ನಾಯಕ ಲುವನೀತ್ ಸಿಸೋಡಿಯಾ 9 ಬೌಂಡರಿ, 4 ಸಿಕ್ಸರ್​ಗಳ ಸಹಿತ 87 ರನ್​ಗಳಿಸಿ ತಂಡ ಚಾಂಪಿಯನ್ ಪಟ್ಟಕ್ಕೇರಲು ನೆರವಾದರು. ಇವರಿಗೆ ಸಾಥ್ ನೀಡಿದ ಎಂ ಜ್ಞಾನೇಶ್ವರ್ ನವೀನ್ 24, ಅನೀಶ್ ಕೆವಿ 19 ಎಸೆತಗಳಲ್ಲಿ 38, ಹರ್ಷಿಲ್ ಧರ್ಮಾನಿ 10 ಎಸೆತಗಳಲ್ಲಿ 17 ರನ್​ಗಳಿಸಿ ತಂಡ ಚಾಂಪಿಯನ್ ಆಗಲು ನೆರವಾದರು.

ಬೆಂಗಳೂರು ಕಳಪೆ ಆರಂಭ

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 36 ರನ್​ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭಬಿಸಿತು. ಆರಂಭಿಕ ಬ್ಯಾಟರ್ ಭುವನ್ ರಾಜು ಕೇವಲ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನಿಂದ 23 ರನ್ ಸಿಡಿಸಿ ತಂಡಕ್ಕೆ ಬಿರುಸಿನ ಆರಂಭ ನೀಡುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹನ್ ಪಟೇಲ್ 11, ಅನುಭವಿ ಕೆ. ಶ್ರೀಜಿತ್ (0) ಡಕ್ ಔಟ್ ಆದರು.

ಜವಾಬ್ದಾರಿಯುತ ಜತೆಯಾಟ

ಮಧ್ಯಮ ಕ್ರಮಾಂಕದಲ್ಲಿ ಸಮಿತ್ ದ್ರಾವಿಡ್ (37 ರನ್, 37 ಎಸೆತ, 1 ಸಿಕ್ಸರ್, 4 ಬೌಂಡರಿ) ಹಾಗೂ ನಾಯಕ ಶುಭಾಂಗ್ ಹೆಗ್ಡೆ (31 ರನ್, 31 ಎಸೆತ, 1 ಬೌಂಡರಿ, 1 ಸಿಕ್ಸರ್) ಇಬ್ಬರು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಧೂಳೆಬ್ಬಿಸಿದ ವಾಹಿದ್ ಖಾನ್, ನವೀನ್

ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ವಾಹಿದ್ ಫೈಜಾನ್ ಖಾನ್ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸೇರಿದಂತೆ ಬರೋಬ್ಬರಿ 29 ರನ್ ಚಚ್ಚಿ ರನ್ ಹಾಗೂ ರೋಹನ್ ನವೀನ್ ಕೇವಲ 8 ಎಸೆತಗಳಲ್ಲಿ 4 ಮನಮೋಹಕ ಸಿಕ್ಸರರ್ ಸಿಡಿಸಿ ಅಜೇಯ 25 ನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.

ಶಿವಮೊಗ್ಗ ಯೋಧಾಸ್ ಪರ ಬೌಲಿಂಗ್‌ನಲ್ಲಿ ಧನುಷ್ ಗೌಡ 2 ವಿಕೆಟ್, ಪಡೆದರೆ, ಯಶೋವರ್ದನ್ ಪ್ರಥಾಪ್, ಅಭಿಲಾಷ್ ಶೆಟ್ಟಿ, ನವೀನ್ ಎಂಜಿ,ಶ್ರೀಕಾರ್ ಆಚಾರ್ ತಲಾ ಒಂದು ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed