Last Updated:
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಝಿಕ್ಕೋಡ್‌ಗೆ ಹೊಸ ನೇರ ಬಸ್ ಸೇವೆ ಆರಂಭವಾಗಿದೆ. ಮೈಸೂರು, ಗೋಣಿಕೊಪ್ಪ, ಮಾನಂತವಾಡಿ, ಕಲ್ಪೆಟ್ಟ ಮಾರ್ಗ, ಸಮಯ, ಪ್ರಯಾಣ ದರ ಹಾಗೂ ಸಂಪೂರ್ಣ ರೂಟ್ ಮಾಹಿತಿ ಇಲ್ಲಿದೆ.
ಬೆಂಗಳೂರು: ನೀವು ದೇಶ-ವಿದೇಶಗಳಿಂದ ವಿಮಾನದ (Plane) ಮೂಲಕ ಬೆಂಗಳೂರಿಗೆ ಬಂದು, ಅಲ್ಲಿಂದ ಮೈಸೂರು, ಕೊಡಗು ಅಥವಾ ಕೇರಳದ ವಯನಾಡ್‌ಗೆ ಟ್ರಿಪ್ ಪ್ಲಾನ್ (Trip Plan) ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ. ಪ್ರವಾಸಿಗರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು ಕೆಎಸ್‌ಆರ್‌ಟಿಸಿ ಆಗಸ್ಟ್ 15 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ (KIA) ನೇರವಾಗಿ ಅತ್ಯಾಧುನಿಕ ವೋಲ್ವೋ ‘ಫ್ಲೈಬಸ್’ (Flybus) ಸೇವೆಯನ್ನು ಆರಂಭಿಸುತ್ತಿದೆ.
ದುಬಾರಿ ಕ್ಯಾಬ್ ಬೇಡ, ಲಗೇಜ್ ಹೊರುವ ಕಿರಿಕಿರಿ ಇಲ್ಲ! ಈವರೆಗೆ ಏರ್‌ಪೋರ್ಟ್‌ಗೆ ಬಂದಿಳಿಯುವ ಪ್ರವಾಸಿಗರು ಮೈಸೂರು ಅಥವಾ ಕೊಡಗಿಗೆ ಹೋಗಬೇಕಾದರೆ, ಸಾವಿರಾರು ರೂಪಾಯಿ ತೆತ್ತು ಕ್ಯಾಬ್ ಮೂಲಕ ಮೆಜೆಸ್ಟಿಕ್ ಅಥವಾ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬರಬೇಕಿತ್ತು. ಭಾರಿ ಲಗೇಜ್‌ಗಳನ್ನು ಹೊತ್ತುಕೊಂಡು ಬಸ್ ಬದಲಾಯಿಸುವಷ್ಟರಲ್ಲಿ ಸುಸ್ತಾಗುತ್ತಿತ್ತು. ಆದರೆ ಈಗ, ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಹೊರಬರುತ್ತಿದ್ದಂತೆಯೇ ನೇರವಾಗಿ ಈ ಐಷಾರಾಮಿ ಫ್ಲೈಬಸ್ ಹತ್ತಿದರೆ, ಯಾವುದೇ ಟೆನ್ಷನ್ ಇಲ್ಲದೆ ಬೆಳಗಾಗುವಷ್ಟರಲ್ಲಿ ನಿಮ್ಮ ನೆಚ್ಚಿನ ಪ್ರವಾಸಿ ತಾಣದಲ್ಲಿರುತ್ತೀರಿ!
ಪ್ರವಾಸಿಗರ ಸ್ವರ್ಗಗಳನ್ನೇ ಬೆಸೆಯುವ ‘ಟೂರಿಸ್ಟ್ ಸರ್ಕ್ಯೂಟ್’ ಮಾರ್ಗ ಈ ಬಸ್ ಕೇವಲ ಒಂದು ಊರಿಗೆ ಸೀಮಿತವಾಗಿಲ್ಲ; ದಕ್ಷಿಣ ಭಾರತದ ಪ್ರಮುಖ ಟೂರಿಸ್ಟ್ ಸರ್ಕ್ಯೂಟ್ ಅನ್ನೇ ಇದು ಸಂಪರ್ಕಿಸುತ್ತಿದೆ. ವಿಮಾನ ನಿಲ್ದಾಣದಿಂದ ಹೊರಡುವ ಬಸ್ ಯಲಹಂಕ, ನಾಯಂಡಹಳ್ಳಿ ಮಾರ್ಗವಾಗಿ ಸಾಂಸ್ಕೃತಿಕ ನಗರಿ ಮೈಸೂರು, ಹುಣಸೂರು, ಕೊಡಗಿನ ಪ್ರಮುಖ ಕೇಂದ್ರಗಳಾದ ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ (ನಾಗರಹೊಳೆ ಸಫಾರಿಗೆ ಅತಿ ಸಮೀಪ), ಹಾಗೂ ಕೇರಳದ ಪ್ರಸಿದ್ಧ ಗಿರಿಧಾಮ ವಯನಾಡ್‌ನ ಮಾನಂತವಾಡಿ, ಕಲ್ಪೆಟ್ಟ ಮಾರ್ಗವಾಗಿ ಕಡಲತೀರದ ಕೋಝಿಕ್ಕೋಡ್ ತಲುಪಲಿದೆ.
ವಿಮಾನದಂತಹುದೇ ಸೌಕರ್ಯ, ದರವೂ ಪಾಕೆಟ್ ಫ್ರೆಂಡ್ಲಿ! ಪ್ರವಾಸಿಗರ ಆಯಾಸ ತಗ್ಗಿಸಲು ವೋಲ್ವೋ ಮಲ್ಟಿ-ಆಕ್ಸಲ್ ಬಸ್‌ನಲ್ಲಿ ವಿಮಾನದ ಮಾದರಿಯಲ್ಲೇ ಆರಾಮದಾಯಕ ರಿಕ್ಲೈನಿಂಗ್ ಸೀಟ್‌ಗಳು, ಎಸಿ, ಹಾಗೂ ಒಳಭಾಗದಲ್ಲೇ ಶೌಚಾಲಯ (ರೆಸ್ಟ್‌ರೂಮ್) ವ್ಯವಸ್ಥೆ ಇರಲಿದೆ. ಇದರೊಂದಿಗೆ ಉಚಿತವಾಗಿ ಕುಡಿಯುವ ನೀರು ಹಾಗೂ ಸ್ನ್ಯಾಕ್ ಕಿಟ್ ಒದಗಿಸಲಾಗುತ್ತದೆ. ಏರ್‌ಪೋರ್ಟ್‌ನಿಂದ ಮೆಜೆಸ್ಟಿಕ್‌ಗೆ ಬರುವ ಕ್ಯಾಬ್ ದರದಲ್ಲೇ, ನೀವು ಮೈಸೂರು ಅಥವಾ ಕೊಡಗು ತಲುಪಬಹುದು!
- ಮೈಸೂರಿಗೆ: ₹960
- ಗೋಣಿಕೊಪ್ಪ (ಕೊಡಗು): ₹1,200
- ಮಾನಂತವಾಡಿ (ವಯನಾಡ್): ₹1,350
- ಕಲ್ಪೆಟ್ಟ: ₹1,400
- ಕೋಝಿಕ್ಕೋಡ್: ₹1,500
ಟೂರ್ ಪ್ಲಾನ್ ಮಾಡುವವರು ಗಮನಿಸಬೇಕಾದ ಟೈಮ್‌ಟೇಬಲ್ ರಾತ್ರಿ ವಿಮಾನದಲ್ಲಿ ಬಂದು, ಹಗಲಿನಲ್ಲಿ ಊರು ಸುತ್ತಲು ಬಯಸುವ ಪ್ರವಾಸಿಗರಿಗೆ ಇದು ಹೇಳಿಮಾಡಿಸಿದ ಸೇವೆ.
ಏರ್‌ಪೋರ್ಟ್‌ಗೆ ವಾಪಸ್: ನಿಮ್ಮ ಟ್ರಿಪ್ ಮುಗಿಸಿ ವಾಪಸ್ ಹೋಗುವಾಗ, ಕೋಝಿಕ್ಕೋಡ್‌ನಿಂದ ಸಂಜೆ 7.30ಕ್ಕೆ ಹೊರಟು, ಕಲ್ಪೆಟ್ಟ (ರಾತ್ರಿ 8.40), ಮಾನಂತವಾಡಿ (ರಾತ್ರಿ 9.15), ಗೋಣಿಕೊಪ್ಪ (ರಾತ್ರಿ 10.50), ಮೈಸೂರು (ರಾತ್ರಿ 12.30) ಮಾರ್ಗವಾಗಿ ಮರುದಿನ ಮುಂಜಾನೆ 4.15ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲಿದೆ.
ಪ್ರವಾಸಿಗರಿಗೆ ವಿಶೇಷ ಮನವಿ
Bangalore [Bangalore],Bangalore,Karnataka














