Last Updated:
ಸೂರ್ಯವಂಶ ಚಿತ್ರದ ಸೇವಂತಿಯೇ ಸಾಂಗ್ ರೀ-ಕ್ರಿಯೇಟ್ ಆಗಿದೆ. ಕಿಶನ್ ಬಿಳಗಲಿ ಮತ್ತು ಕೃಷಿ ತಾಪಂಡ ಇದನ್ನ ಕ್ರಿಯೇಟ್ ಮಾಡಿದ್ದಾರೆ. ಆದರೆ, ಇದಕ್ಕೆ ರೆಟ್ರೋ ಫೀಲ್ ಬಂದಿದೆ. ಇದರಲ್ಲೊಂದು ಹೊಸ ಕತೆನೂ ಇದೆ. ಇದರ ವಿವರ ಮುಂದೆ ಇದೆ ಓದಿ.
ಕಿಶನ್ ಬಿಳಗಲಿ (Kishen Bilagali) ಮತ್ತೊಂದು ಪ್ರಯೋಗ ಮಾಡಿದ್ದಾರೆ. ಸೂರ್ಯವಂಶ ಚಿತ್ರದ (Suryavamsha Movie) ಸೇವಂತಿಯೇ ಹಾಡಿಗೆ (Sevanthiye Song) ಹೊಸ ರೂಪ ಕೊಟ್ಟಿದ್ದಾರೆ. ಈ ಹಾಡಿನ ಹಿನ್ನೆಯಲ್ಲಿ ಒಂದು ಚೆಂದದ ಕತೆಯನ್ನ ಹೇಳಿದ್ದಾರೆ. ನವ ವಿವಾಹಿತ ಜೋಡಿಯ ದಾಂಪತ್ಯ ಗೀತೆಯಂತೆನೆ ಈ ವಿಡಿಯೋ ಇದೆ. ಆದರೆ, ಇಲ್ಲೊಂದು ದೂರ ಆಗುವ ತಿರುವು ಇದೆ. ಅದನ್ನ ಇಲ್ಲಿ ಅಷ್ಟೆ ಚೆನ್ನಾಗಿಯೇ ತೋರಿಸಿದ್ದಾರೆ. ಈ ಹಿಂದಿನ ನವಿಲೇ ಹಾಡಿಗೆ ನಿವೇದಿತಾ ಗೌಡ ಜೋಡಿ ಆಗಿದ್ದರು. ಇಲ್ಲಿ ಕೃಷಿ ತಾಪಂಡ (Krishi Thapanda) ಜೊತೆ ಆಗಿದ್ದಾರೆ.ಇವರ ಕೆಮೆಸ್ಟ್ರಿ ಇಲ್ಲಿ ತುಂಬಾನೆ ಚೆನ್ನಾಗಿ ವರ್ಕ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸಿನಿರಂಗವೇ ಬೇಡ ಎಂದಿದ್ದ ಕೃಷಿ
(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)
ಈ ಸಲ ಕಾನ್ಸೆಪ್ಟ್ ಬೇರೆ ಇದೆ. ಇದು ಸೂರ್ಯವಂಶ ಚಿತ್ರದ ಹಾಡಿಗೆ ಮಾಡಿರೋ ಪ್ಲಾನ್ ಆಗಿದೆ. ಈ ಚಿತ್ರದ ಸೇವಂತಿಯೇ ಹಾಡನ್ನ ರೆಟ್ರೋ ಫೀಲ್ ಅಲ್ಲಿ ರೀ-ಕ್ರಿಯೇಟ್ ಮಾಡಿದ್ದಾರೆ. ಇದರಲ್ಲಿ ಕೃಷಿ ತಾಪಂಡ ಇದ್ದಾರೆ.
ಈ ಒಂದು ಹಾಡಿನ ಡೈರೆಕ್ಷನ್ ಅನ್ನ ಸ್ವತಃ ಕಿಶನ್ ಬಿಳಗಲಿ ಮಾಡಿದ್ದಾರೆ. ಕೇವಲ ದಾಂಪತ್ಯ ಗೀತೆಯ ರೀತಿ ಕಾಣಿಸದೇ ಈ ವಿಡಿಯೋದಲ್ಲಿ ಒಂದು ಸ್ಟೋರಿನೂ ಇದೆ.
ಈ ಸ್ಟೋರಿ ಹಾಡಿನ ಕೊನೆ ಕೊನೆಯಲ್ಲಿಯೇ ಅರ್ಥ ಆಗುತ್ತದೆ. ಮಧುರ ಕ್ಷಣದಲ್ಲಿಯೇ ಇರೋ ಸಮಯದಲ್ಲಿ ಒಂದು ಕಾಲ್ ಬರುತ್ತದೆ. ಆ ಕಾಲ್ ಬಂದ್ಮೇಲೆ ಕಿಶನ್ ರೆಡಿ ಆಗುತ್ತಾರೆ.
ಇಲ್ಲಿ ಕಿಶನ್ ವೀರ ಯೋಧನ ಕತೆ ಹೇಳುತ್ತಿದ್ದಾರೆ. ಅದೆಂತಹದ್ದೆ ಪ್ರೀತಿ -ಪ್ರೇಮ ಇದ್ದರೂ ಅಷ್ಟೇನೆ, ದೇಶ ಪ್ರೇಮ ಅಂತ ಬಂದ್ರೆ ಏನೂ ಅಲ್ಲ ಅನ್ನೋದನ್ನು ಇಲ್ಲಿ ಅಷ್ಟೆ ಸೂಚ್ಯವಾಗಿಯೇ ಹೇಳಿದ್ದಾರೆ.
ಎಂದೂ ಮರೆಯಾಗದ ಯುವ
(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)
ಕಿಶನ್ ಮತ್ತು ಕೃಷಿ ತಾಪಂಡ ಅವರ ಕೆಮೆಸ್ಟ್ರಿ ಇಲ್ಲಿ ವರ್ಕ್ ಆಗಿದೆ. ಇವರು ಈ ಹಿಂದೆ ಕನ್ನಡ ಬಿಗ್ ಬಾಸ್ ಅಲ್ಲು ಕಂಟೆಸ್ಟಂಟ್ ಆಗಿದ್ದರು. ಆದರೆ, ಸೀಸನ್ ಬೇರೆ ಬೇರೆ ಅಂತ ಹೇಳಬಹುದು.
ಕೃಷಿ ತಾಪಂಡ ಲೈಫ್ ಅಲ್ಲಿ ಏನೇನೋ ಆಗಿದೆ. ಇದರಿಂದ ಕೃಷಿ ತುಂಬಾನೆ ಹರ್ಟ್ ಆಗಿದ್ದಾರೆ. ಆರ್.ಜೆ. ರಾಜೇಶ್ ಅವರ ಪಾಡ್ ಕಾಸ್ಟ್ ಅಲ್ಲಿ ಇದೇ ಕೃಷಿ ತಾಪಂಡ ಒಂದು ಮಾತು ಹೇಳಿದ್ದರು.
ಇದೇ ಕೊನೆಯ ಸಂದರ್ಶನವಾಗಿದೆ. ಇನ್ಮುಂದೆ ಯಾವುದೇ ಸಂದರ್ಶನ ಕೊಡುವುದಿಲ್ಲ. ಸಿನಿಮಾರಂಗವೇ ಸಾಕು ಅಂತ ಹೇಳಿದ್ದರು. ಆದರೂ ಹೊಸ ಉತ್ಸಾಹದೊಂದಿಗೆ ಕಿಶನ್ ಜೊತೆಗೆ ಈ ಒಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬಾನೆ ಚಿಕ್ಕ ವಿಡಿಯೋ ಆದರೂ ಅಷ್ಟೆ ಚೆನ್ನಾಗಿಯೇ ಮಾಡಿದ್ದಾರೆ.
ಕಿಶನ್ ಈ ಒಂದು ವಿಶೇಷ ವಿಡಿಯೋಗೆ ಒಂದು ಲೈನ್ ಬರೆದಿದ್ದಾರೆ. An era that never fades!!! ಅನ್ನೋದನ್ನ ಬರೆದುಕೊಂಡಿದ್ದಾರೆ. ಇದರ ಕನ್ನಡದ ಅರ್ಥ ತುಂಬಾನೆ ಚೆನ್ನಾಗಿದೆ.
ಎಂದೂ ಮರೆಯಾಗದ ಯುಗ ಅನ್ನೋದು ಈ ಸಾಲಿನ ಅರ್ಥವಾಗಿದೆ. ಕಿಶನ್ ಹಂಚಿಕೊಂಡ ವಿಡಿಯೋಗೆ ಈ ಲೈನ್ ಸೂಕ್ತವಾಗಿಯೇ ಇದೆ. ಇದನ್ನ ನೋಡಿದವರು ಒಳ್ಳೆ ಮಾತುಗಳನ್ನೆ ಬರೆದಿದ್ದಾರೆ. ಕೃಷಿ ಅವರೇ ನೀವು ಖುಷಿ ಆಗಿರೋದನ್ನ ನೋಡಿ ಖುಷಿ ಆಯಿತು ಅಂತಲೂ ಒಬ್ಬರು ಬರೆದಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 21, 2026 10:50 PM IST













