Kollur Temple: ಮೂಕಾಂಬಿಕೆಗೆ ಅಂದು ಚಿನ್ನದ ಖಡ್ಗ ಕೊಟ್ಟಿದ್ದ MGR, ಎಷ್ಟು ಕೆಜಿ? ಇಂದಿನ ಬೆಲೆ ಎಷ್ಟು ಗೊತ್ತಾ? | | ACTPnews

Kollur Temple: ಮೂಕಾಂಬಿಕೆಗೆ ಅಂದು ಚಿನ್ನದ ಖಡ್ಗ ಕೊಟ್ಟಿದ್ದ MGR, ಎಷ್ಟು ಕೆಜಿ? ಇಂದಿನ ಬೆಲೆ ಎಷ್ಟು ಗೊತ್ತಾ? |


ದೇವಿಯ ವಿಗ್ರಹವನ್ನು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮತ್ತು ಸೀಸ ಬಳಸಿ ನಿರ್ಮಾಣ ಮಾಡಲಾಗಿದೆ.. ಆದಿ ಶಂಕರಾಚಾರ್ಯ ಪ್ರತಿಷ್ಠಾಪಿತ ದೇಗುಲ ಎಂಬ ನಂಬಿಕೆ ಇದೆ.. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಸುಮಾರು 1200 ವರ್ಷಗಳ ಇತಿಹಾಸ ಇದೆ.

ಕೊಲ್ಲೂರು ಮೂಕಾಂಬಿಕೆ ದೇವಿ ಮೇಲೆ ತಮಿಳುನಾಡಿನ ರಾಜಕಾರಣಿಗಳಿಗೆ ವಿಶೇಷವಾದ ನಂಟಿದೆ. ವಿಜಯ್​ಗೂ ಮೊದಲು ಎಂ. ಜಿ. ರಾಮಚಂದ್ರನ್, ಜಾನಕಿ ರಾಮಚಂದ್ರನ್​, ಜಯಲಲಿತಾ ಈ ಮೂವರು ತಾವು ಸಿಎಂ ಆಗಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು.

1 ಕೆಜಿ ತೂಕದ ಚಿನ್ನದ ಖಡ್ಗ ಕೊಟ್ಟಿದ್ದ ಎಂಜಿಆರ್

1980ರಲ್ಲಿ ಕೊಲ್ಲೂರಿಗೆ ಬಂದಿದ್ದ ಎಂಜಿಆರ್, 1 ಕೆಜಿ ತೂಕದ ಚಿನ್ನದ ಖಡ್ಗ ಸಮರ್ಪಿಸಿದ್ದರು. ಈಗಲೂ ದೇವಿಯ ಕೈಯಲ್ಲಿ ಈ ಖಡ್ಗ ಇದೆ. ಇನ್ನು, 2004ರಲ್ಲಿ ಜಯಲಲಿತಾ ಕೂಡ ಕೊಲ್ಲೂರಿಗೆ ಬಂದು ಚಂಡಿಕಾ ಯಾಗ ಮಾಡಿಸಿದ್ದರು. ಈ ವೇಳೆ ಮೂಕಾಂಬಿಕೆ ದೇವಿಗೆ ಚಿನ್ನದ ಕವಚ ಸಮರ್ಪಿಸಿದ್ದರು. ಅನ್ನದಾನ ಸೇವೆಗೆ ನಗದು ದೇಣಿಕೆಯನ್ನೂ ನೀಡಿದ್ದರು.

1980ರಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 1330 ರೂಪಾಯಿಯ ಆಸುಪಾಸಿನಲ್ಲಿತ್ತು. ಅಂದು ಈ ಖಡ್ಗದ ಬೆಲೆ ಅಂದಾಜು 13,30,000 ರೂಪಾಯಿ ಆಗಿರುವ ಸಾಧ್ಯತೆ ಇದೆ. ಇಂದಿನ ಬೆಲೆ ನೋಡುವುದಾದರೆ,

ಸದ್ಯ ಭಾರತದಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನಕ್ಕೆ 14,858 ರೂಪಾಯಿ ಬೆಲೆ ಇದ್ದು, 1 ಕೆಜಿಯಲ್ಲಿ ಚಿನ್ನದ ಖಡ್ಗ ಮಾಡಿಸುವುದಾದರೆ 1,50,43,400 ರೂಪಾಯಿ ಖರ್ಚಾಗಬಹುದು. ಇದು ಅಂದಾಜು ಲೆಕ್ಕವೇ ಹೊರತು, ನಿಖರವಲ್ಲ.

ಚಿನ್ನದ ಕವಚ ನೀಡಿದ್ದ ಜಯಾ

2004ರಲ್ಲಿ ಕೊಲ್ಲೂರಿಗೆ ಜಯಲಲಿತಾ ಭೇಟಿ ನೀಡಿ ದೇವಿಗೆ ಚಿನ್ನದ ಕವಚ ಸಮರ್ಪಿಸಿದ್ದರು. ಕೊಲ್ಲೂರಿನಲ್ಲಿ ಚಂಡಿಕಾ ಯಾಗ ಮಾಡಿಸಿದ್ದ ಜಯಲಲಿತಾ ಅವರು ಅನ್ನದಾನ ಸೇವೆಗೆ ನಗದು ದೇಣಿಗೆ ನೀಡಿದ್ದರು. ಅಷ್ಟೇ ಅಲ್ಲದೆ ತಮಿಳುನಾಡಿನ ವಿವಿಧೆಡೆಯಿಂದ ಕೊಲ್ಲೂರಿಗೆ ಬಸ್ ವ್ಯವಸ್ಥೆಗಳನ್ನೂ ಮಾಡಿದ್ದರು.

ದೇವಿಗೆ ವಿಶೇಷ ಕಾಣಿಕೆ ಸಮರ್ಪಣೆ ಮಾಡಿದ್ದಾರೆ. ದೇವಿಗೆ ರೇಷ್ಮೆ ಸೀರೆ, ಹಣ್ಣು-ಹಂಪಲು ಅರ್ಪಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed