Ketan Agarwal: ಕೇತನ್ ಕುಟುಂಬಕ್ಕೆ ಮತ್ತೊಂದು ಸಾವಿನ ಶಾಕ್! ಮೊಮ್ಮಗನಿಗಾಗಿ ಕಣ್ಣೀರಿಡುತ್ತಲೇ ಅಜ್ಜ ಕೊನೆಯುಸಿರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕೇತನ್ ಅಜ್ಜ ಸಾವು


Last Updated:

Ketan Agarwal: ಕೇತನ್ ಅಗರ್ವಾಲ್ ಹತ್ಯಾ ಪ್ರಕರಣದಲ್ಲಿ ಕುಟುಂಬಕ್ಕೆ ಮತ್ತೊಂದು ದುಃಖದ ಸುದ್ದಿ ಬಂದಿದೆ. ಈಗಿನ್ನೂ ಕೇತನ್ ಹತ್ಯೆಯ ಶಾಕ್ ಹಾಗೂ ದುಃಖದಿಂದ ಇನ್ನೂ ಚೇತರಿಸಿಕೊಂಡಿಲ್ಲ, ಆಗಲೇ ಈ ಕುಟುಂಬಕ್ಕೆ ಮತ್ತೊಂದು ಸಾವಿನ ಆಘಾತ ಎದುರಾಗಿದೆ.

ಕೇತನ್ ಅಜ್ಜ ಸಾವು
ಕೇತನ್ ಅಜ್ಜ ಸಾವು

ಮಹಾರಾಷ್ಟ್ರ: ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯಾ (Ketan Agarwal murder case) ಪ್ರಕರಣದಲ್ಲಿ ಕುಟುಂಬಕ್ಕೆ ಮತ್ತೊಂದು ದುಃಖದ ಸುದ್ದಿ ಬಂದಿದೆ. ಈಗಿನ್ನೂ ಕೇತನ್ ಹತ್ಯೆಯ ಶಾಕ್ ಹಾಗೂ ದುಃಖದಿಂದ ಇನ್ನೂ ಚೇತರಿಸಿಕೊಂಡಿಲ್ಲ, ಆಗಲೇ ಈ ಕುಟುಂಬಕ್ಕೆ ಮತ್ತೊಂದು ಸಾವಿನ ಆಘಾತ ಎದುರಾಗಿದೆ. ಕೇತನ್ ಅಜ್ಜ (Ketan’s grandfather) ದೇವೀಚಂದ್ ಅಗರ್ವಾಲ್ (Devi Chand Agarwal) ಕೊನೆಯುಸಿರಳೆದಿದ್ದಾರೆ. ಮೊಮ್ಮಗನ ಸಾವಿನ ಆಘಾತವನ್ನು ತಡೆಯಲಾರದೆ ಆತನ ಅಜ್ಜ ಇದೀಗ ನಿಧನರಾಗಿದ್ದಾರೆ.

ಮೊಮ್ಮಗನ ಹತ್ಯೆಯಿಂದ ಅಜ್ಜನಿಗೆ ಆಘಾತ

ಜೂನ್ 18ರಂದು ಕೇತನ್ ಅಗರ್ವಾಲ್ ಹತ್ಯೆಯಾಗಿತ್ತು. ಈ ಆಘಾತವು ಕೇತನ್‌ನ ಅಜ್ಜ ದೇವೀಚಂದ್ ಅಗರ್ವಾಲ್ ಅವರಿಗೆ ತೀವ್ರವಾಗಿ ಕಾಡುತ್ತಿತ್ತು. ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿತು. ಪುಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ರಾತ್ರಿ 9.45ಕ್ಕೆ ನಿಧನರಾದರು.

ಸಾಯೋ ಮುನ್ನ ಅಜ್ಜನ ಕೊನೆಯ ಆಸೆ

ಕುಟುಂಬದವರ ಪ್ರಕಾರ, ಮೊಮ್ಮಗನ ಮರಣದ ದುಃಖವನ್ನು ಅವರು ಎದುರಿಸಲಾರದೆ ತುಂಬಾ ನೊಂದಿದ್ದರು. ನಿಧನಕ್ಕೂ ಮುಂಚೆ ದೇವೀಚಂದ್ ಅವರು “ನಮ್ಮನ್ನು ನಮ್ಮವರೇ ವಂಚಿಸಿದ್ದಾರೆ. ಸಿಯಾ ಮತ್ತು ಚೇತನ್‌ಗೆ ಗಲ್ಲು ಶಿಕ್ಷೆ ಆಗಬೇಕು” ಎಂದು ಹೇಳಿದ್ದರು. ಇನ್ನು ತೀರಾ ಅನಾರೋಗ್ಯ ಕಾಡುತ್ತಿದ್ದರೂ  ಕ್ಯಾಂಡಲ್ ಮಾರ್ಚ್ ನಡೆಸಿ ಮೊಮ್ಮಗನಿಗಾಗಿ ದುಃಖಿಸಿದ್ದರು.

ಅಗರ್ವಾಲ್ ಕುಟುಂಬಕ್ಕೆ ಮತ್ತೆ ಸಾವಿನ ಸೂತಕ

ಕೇತನ್‌ನ ತಾಯಿಯೂ ಆರೋಪಿಗಳಿಗೆ ಮರಣದಂಡನೆಯ ಮಾತು ಹೇಳಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕುಟುಂಬಕ್ಕೆ ಕೇತನ್ ಹತ್ಯೆ ಕೇಸ್‌ ಬಗ್ಗೆ ಫಾಸ್ಟ್ ಟ್ರ್ಯಾಕ್ ತನಿಖೆ ಮತ್ತು ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಪುಣೆ ಗ್ರಾಮೀಣ ಪೊಲೀಸರು ಆರೋಪಿಗಳ ಕುಟುಂಬದವರನ್ನು ವಿಚಾರಣೆ ಮಾಡುತ್ತಿದ್ದಾರೆ.ಈ ದುಃಖದ ಸರಪಳಿಯಲ್ಲಿ ಅಗರ್ವಾಲ್ ಕುಟುಂಬ ಇನ್ನೂ ಹೊರಬಂದಿಲ್ಲ. ಇದೀಗ ಮತ್ತೆ ಸಾವಿನ ಸೂತಕ ಮನೆಮಾಡಿದೆ.

ಜೂನ್ 18ರಂದು ಕೇತನ್ ಅಗರ್ವಾಲ್ ಹತ್ಯೆ

ಜೂನ್ 18 ರಂದು ಪುಣೆ ಬಳಿಯ ಲೋಹಗಢ ಕೋಟೆಯಲ್ಲಿ 26 ವರ್ಷದ ಕೇತನ್ ಅಗರ್ವಾಲ್ ಅವರನ್ನು ಕೊಲೆ ಮಾಡಲಾಯಿತು. ಕೋಟೆಯ ಮೇಲಿನಿಂದ ತಳ್ಳಿ, ಅವರು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಈ ಸಂದರ್ಭದಲ್ಲಿ ಆತನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಿಯಾ ಗೋಯಲ್ ತನ್ನ ಗೆಳೆಯ ಚೇತನ್ ಚೌಧರಿ ಜೊತೆ ಸೇರಿ ಕೇತನ್ ಕೊಲೆ ಮಾಡಲು ಸಂಚು ರೂಪಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಈ ಜೋಡಿಯ ಜಾತಕದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ಆರಂಭವಾಗಿವೆ.

ನ್ಯೂಸ್ 18 ಹಿಂದಿ ವರದಿಯ ಪ್ರಕಾರ, ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಮೊದಲು ಇಬ್ಬರ ಜಾತಕವನ್ನು ಪರಿಶೀಲಿಸಿದ್ದರಂತೆ. ವಿವಾಹಕ್ಕೆ ಬೇಕಾಗಿದ್ದ ಒಟ್ಟು 36 ಗುಣಗಳಲ್ಲಿ 27 ಗುಣಗಳು ಹೊಂದಿಕೆಯಾಗಿದ್ದವು. ಜ್ಯೋತಿಷ್ಯದ ಪ್ರಕಾರ, ಇದನ್ನು ಉತ್ತಮ ಹೊಂದಾಣಿಕೆ ಎಂದು ಪರಿಗಣಿಸಲಾಗಿದೆ. ಮದುವೆಗೆ ಮೊದಲು ಅವರು ಜ್ಯೋತಿಷಿಗಳ ಸಲಹೆಯನ್ನು ಸಹ ಪಡೆದರು. ಆ ಸಮಯದಲ್ಲಿ ಯಾವುದೇ ಪ್ರಮುಖ ದೋಷಗಳಿರಲಿಲ್ಲ. ಆದಾಗ್ಯೂ, ಜಾತಕದಲ್ಲಿ ಎಲ್ಲವೂ ಸರಿಯಾಗಿದ್ದರೂ ಅಂತಹ ಅಪರಾಧ ಹೇಗೆ ಸಂಭವಿಸಿರಬಹುದು ಎಂಬ ಪ್ರಶ್ನೆ ಉಳಿದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed