Last Updated:
ಕೋಮಲ್ ಕುಮಾರ್ ಆ ಒಂದು ಚಿತ್ರಕ್ಕೆ ಕೇವಲ 5 ಸಾವಿರ ರೂಪಾಯಿ ಪಡೆದಿದ್ದಾರೆ. 45 ದಿನದ ಕೆಲಸಕ್ಕೆ ಇಷ್ಟೇ ದುಡ್ಡು ಪಡೆದಿದ್ದಾರೆ. ಇದನ್ನ ಸ್ವತಃ ಕೋಮಲ್ ಹೇಳಿಕೊಂಡಿದ್ದಾರೆ. ಇವರ ಮಾತಿನ ವಿವರ ಇಲ್ಲಿದೆ ಓದಿ.
ಶ್ರೀರಾಮಪುರ ಮಾರ್ಕೆಟ್ಗೆ ಮಟನ್ ತರೋಕೆ ಹೋಗಿದ್ದರು. ದಾರಿಯಲ್ಲಿ ಕತೆಗಾರ ಅಜಯ್ ಕುಮಾರ್ (Ajay Kumar) ಸಿಕ್ಕರು. ಏನ್ ಕೋಮಲ್ (Komal) ಏನ್ ನಡೀತಾ ಇದೆ. ಯಾವುದೇ ಸಿನಿಮಾ ಮಾಡ್ತೀಲ್ವಾ ಅಂತ ಕೇಳಿದರು. ಸದ್ಯಕ್ಕೆ ಏನೂ ಮಾಡ್ತಿಲ್ಲ. ಯಾವುದಾದರು ಇದ್ದರೆ ಹೇಳಿ ಅಂತ ಕೋಮಲ್ (Komal) ಹೇಳಿದರು. ತವರಿಗೆ ಬಾ ತಂಗಿ (Thavarige Baa Thangi) ಅಂತ ಚಿತ್ರ ಇದೆ. ಹೇಳ್ತೀನಿ ಹೋಗು ಅಂತ ಹೇಳಿದರು. ಚಿತ್ರದ ನಿರ್ಮಾಪಕರಾದ ರಾಮಸ್ವಾಮಿ ಗೌಡ್ರು ಕೂಡ ಕೋಮಲ್ ಅವರಿಗೆ ಪರಿಚಯ ಇದ್ದರು. ಏನಪ್ಪ ನಮ್ಮ ಚಿತ್ರದಲ್ಲಿ ಮಾಡ್ತೀಯಾ ಅಂತ ಕೇಳಿದರು. ಹಾ ಮಾಡ್ತೀನಿ ಅಂತ ಹೇಳಿದರು. 45 ದಿನಕ್ಕೆ ಎಷ್ಟು ದುಡ್ಡು ಕೊಡ್ಬೇಕು ಅಂತ ಕೇಳಿದರು. 5 ಸಾವಿರ ರೂಪಾಯಿ ಅಂತ ಕೋಮಲ್ ಹೇಳಿದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.
5 ಸಾವಿರ ಅಷ್ಟೆ ತೆಗೆದುಕೊಂಡಿದ್ಯಾಕೆ
(ಚಿತ್ರ ಕೃಪೆ: ಕೋಮಲ್ ಕುಮಾರ್ ಇನ್ಸ್ಟಾಗ್ರಾಮ್)
ನಿರ್ಮಾಪಕ ರಾಮಸ್ವಾಮಿ ಗೌಡ್ರು 5 ಸಾವಿರ ಅಂದಾಕ್ಷಣ ಆ ಕೂಡಲೇ ಕೊಟ್ಟೇ ಬಿಟ್ಟರು. ಕೊಟ್ಟಿದ್ದಿನಿ ನೋಡಪ್ಪ ಅಂತ ಹೇಳಿದರು. ಕೆಲಸವೇ ಇಲ್ಲದೆ ಕುಳಿತವನಿಗೆ ಇದಾದ್ರೂ ಇದೆಯಲ್ಲ ಅಂತ ಕೋಮಲ್ ದುಡ್ಡು ಪಡೆದುಕೊಂಡಿದ್ದರು.
ತವರಿಗೆ ಬಾ ತಂಗಿ ಚಿತ್ರದ ತಂಗಿ ಗಂಡನ ಪಾತ್ರವನ್ನ ಕೋಮಲ್ ಮಾಡಬೇಕಿತ್ತು. ಆದರೆ, ಮನೆಯಲ್ಲಿ ಕೆಲಸ ಮಾಡುವ ನಂದೀಶ ಅನ್ನುವ ರೋಲ್ ಇವರಿಗೆ ಸಿಕ್ತು. ಅದನ್ನೆ ಮಾಡಿದರು.
ಈ ಒಂದು ಪಾತ್ರ ಕೋಮಲ್ ಅವರಿಗೆ ದೊಡ್ಡ ಹೆಸರು ತಂದುಕೊಡ್ತು. ರಾಜ್ಯ ಪ್ರಶಸ್ತಿ ಕೂಡ ಬಂದಿದೆ. ಈ ವಿಷಯವನ್ನ ನಟ ಕೋಮಲ್ ಅವರು ಕರ್ನಾಟಕ ಪ್ಲಸ್ ಯುಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತವರಿಗೆ ಬಾ ತಂಗಿ ಚಿತ್ರದ ನಂದೀಶ ಪಾತ್ರಕ್ಕೆ ಕೋಮಲ್ ಐದೇ ಸಾವಿರ ಪಡೆದಿರೋದಕ್ಕೆ ಕಾರಣವೂ ಇತ್ತು. ಒಂದನ್ನ ಪಡೆಯೋಕೆ ಇನ್ನೊಂದನ್ನ ಕಳೆದುಕೊಳ್ಳಬೇಕಂತೆ. ಹಾಗಾಗಿಯೇ ಕಡಿಮೆ ದುಡ್ಡಿನಲ್ಲಿಯೇ ನಂದೀಶ ಪಾತ್ರವನ್ನ ಕೋಮಲ್ ಮಾಡಿದ್ದಾರೆ.
ತಂಗಿಯ ಗಂಡನ ಕ್ಯಾರೆಕ್ಟರ್
ಈ ವಿಷಯವನ್ನ ಅಷ್ಟೆ ಹೆಮ್ಮೆಯಿಂದಲೇ ಕೋಮಲ್ ಹೇಳಿಕೊಳ್ಳುತ್ತಾರೆ. ಕೋಮಲ್ ಅವರು ಈಗ ರೋಲೆಕ್ಸ್ ಅನ್ನುವ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಹೊಸ ಮಾಹಿತಿನೂ ಹೊರ ಬಂದಿದೆ.
ಕೋಮಲ್ ಕುಮಾರ್ ಅವರು ರೋಲೆಕ್ಸ್ ಚಿತ್ರದಲ್ಲಿ ಡಿಫರಂಟ್ ಲುಕ್ ಅಲ್ಲಿಯೇ ಇದ್ದಾರೆ. ಸೋನಲ್ ಮೊಂಥೆರೋ ಜೋಡಿ ಆಗಿದ್ದಾರೆ. ವಿನೋದ್ ಪ್ರಭಾಕರ್ ಅವರೂ ಈ ಚಿತ್ರದಲ್ಲಿದ್ದಾರೆ.
ಬಿಲ್ ಗೇಟ್ಸ್ ಚಿತ್ರವನ್ನ ಡೈರೆಕ್ಷನ್ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಜಸ್ಸಿ ಗಿಫ್ಟ್ ಸಂಗೀತ ಕೊಟ್ಟಿದ್ದಾರೆ. ರಾಕೇಶ್ ಸಿ.ತಿಲಕ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ.
ರೋಲೆಕ್ಸ್ ಅಲ್ಲಿ ಡಿಫರಂಟ್ ಲುಕ್
ಕೋಮಲ್ ಕುಮಾರ್ ಸದ್ಯ ಒಂದಷ್ಟು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ. ತೆಲಾ ಡಿ.ಎ.ಎಲ್ಎಲ್ಬಿ ಚಿತ್ರದಲ್ಲಿ ವಕೀಲ್ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇನ್ನು ನಡೀತಾ ಇದೆ.
ಸಂಗೀತಾ ಬಾರ್ ಆ್ಯಂಡ್ ರೆಸ್ಟೋರಂಟ್ ಚಿತ್ರದ ಶೂಟಿಂಗ್ ಪೂರ್ಣ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಈಗ ನಡೀತಾ ಇದೆ. ಅಶೋಕವನ ಅನ್ನುವ ಚಿತ್ರವೂ ಇದೆ. ಇದರ ಶೂಟಿಂಗ್ ಕಂಪ್ಲೀಟ್ ಆಗಿದೆ ಅನ್ನುವ ಮಾಹಿತಿ ಸಿಗುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka













