John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews

ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್!


Last Updated:

ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ.

ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್!
ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್!

ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie) ಬರ್ತಿದೆ. ಪ್ರಮೋದ್ ಪಂಜು (Pramod Panju) ಈ ಚಿತ್ರದ ನಾಯಕರಾಗಿದ್ದಾರೆ. ಸಾಯಿ ಕುಮಾರ್ (Sai Kumar) ಕೂಡ ಈ ಚಿತ್ರದಲ್ಲಿದ್ದಾರೆ. ಆದರೆ, ಇವರದ್ದು ಇಲ್ಲಿ ಅತಿಥಿ ಪಾತ್ರ ಅನ್ನೋದು ಗೊತ್ತಾಗಿದೆ. ಆದರೆ, ಇದೀಗ ಈ ಚಿತ್ರಕ್ಕೆ ಬಹು ಭಾಷಾ ನಟ ಜಾನ್ ವಿಜಯ್ (John Vijay) ಎಂಟ್ರಿ ಆಗಿದೆ. ಸಿನಿಮಾ ತಂಡವೇ ಇದನ್ನ ಅಧಿಕೃತವಾಗಿ ಹೇಳಿಕೊಂಡಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಜಾನ್ ವಿಜಯ್ ಮತ್ತೆ ಬಂದ್ರು..

ಜಾನ್ ವಿಜಯ್ ಕನ್ನಡಕ್ಕೆ ಹೊಸಬರೇನು ಅಲ್ಲ. ಈ ಹಿಂದೆ ಪುನೀತ್ ಅವರ ಪೃಥ್ವಿ ಚಿತ್ರದಲ್ಲಿ ನಟಿಸಿದ್ದಾರೆ. ಇಲ್ಲೂ ಇವರು ವಿಲನ್ ರೋಲ್ ಮಾಡಿದ್ದಾರೆ.

multi language actor john vijay kannada halka don movie latest updates

ಜಾನ್ ವಿಜಯ್ ಮತ್ತೆ ಬಂದ್ರು..

(ಚಿತ್ರ ಕೃಪೆ: ಜಾನ್ ವಿಜಯ್ ಇನ್‌ಸ್ಟಾಗ್ರಾಮ್)

ರಾಕಿಂಗ್ ಸ್ಟಾರ್ ಯಶ್ ಅವರ ಗಜಕೇಸರಿ ಚಿತ್ರದಲ್ಲೂ ಜಾನ್ ವಿಜಯ್ ನಟಿಸಿದ್ದಾರೆ. ಇಲ್ಲಂತೂ ಭಯಂಕರವಾದ ವಿಲನ್ ರೋಲ್ ಅನ್ನೆ ಮಾಡಿದ್ದಾರೆ. ಇದನ್ನ ನೋಡಿದರೆ ಯಾರಪ್ಪ ಇದು ಇಷ್ಟು ಕೆಟ್ಟ ವಿಲನ್ ಅನಿಸುವಷ್ಟು ಅದ್ಭುತವಾಗಿಯೆ ಜಾನ್ ವಿಜಯ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಹಲ್ಕಾ ಡಾನ್ ಚಿತ್ರದಲ್ಲಿ ಏನು

ಹಲ್ಕಾ ಡಾನ್ ಅನ್ನೋದು ಈ ಚಿತ್ರದ ಹೆಸರಾಗಿದೆ. ಸಾಯಿ ಕುಮಾರ್ ಫ್ಯಾನ್ ಅನ್ನೋದು ಈ ಚಿತ್ರದ ಉಪಶೀರ್ಷಿಕೆನೆ ಆಗಿದೆ. ಈ ಟೈಟಲ್‌ಗೆ ತಕ್ಕನಾಗಿಯೇ ಇಲ್ಲಿ ಸಾಯಿ ಕುಮಾರ್ ಕೂಡ ಇದ್ದಾರೆ.

ಆದರೆ, ಇವರದ್ದು ಇಲ್ಲಿ ಗೆಸ್ಟ್ ರೋಲ್ ಆಗಿದೆ. ಇದರ ನಡುವೆ ಇದೀಗ ಜಾನ್ ವಿಜಯ್ ಪಾತ್ರದ ಸುದ್ದಿ ಹೊರ ಬಂದಿದೆ. ಪಾತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ.

ಈ ಪೋಸ್ಟರ್ ಅಲ್ಲಿ ಏನಿದೆ

ಹಲ್ಕಾ ಡಾನ್ ಚಿತ್ರದ ಪೋಸ್ಟರ್ ಅಲ್ಲಿ ಜಾನ್ ವಿಜಯ್ ಇದ್ದಾರೆ. ಬಾಯ್ ಅಲ್ಲಿ ಸಿಗಾರ್ ಇದೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ್ದಾರೆ. ಬೆರುಗಳಲ್ಲಿ ಚಿನ್ನದ ಉಂಗುರಗಳು ಇವೆ.

ಕೊರಳಲ್ಲಿ ಚಿನ್ನದ ದಪ್ಪ ಚೈನ್ ಇದೆ. ಕೈಯಲ್ಲಿ ದುಬಾರಿ ವಾಚ್ ಇದೆ. ಮೀಸೆ ಬಿಟ್ಟಿರೋದು ಇಡೀ ಲುಕ್‌ಗೆ ಖಳತ್ವ ತಂದುಕೊಟ್ಟಿದೆ. ಆದರೆ, ಈ ಪಾತ್ರದ ಹೆಸರೇನು ಅನ್ನೋದು ಮಾತ್ರ ಇನ್ನು ರಿವೀಲ್ ಆಗಿಲ್ಲ ನೋಡಿ.

ಹಲ್ಕಾ ಡಾನ್ ಡೈರೆಕ್ಟರ್ ಯಾರು

ಹಲ್ಕಾ ಡಾನ್ ಚಿತ್ರವನ್ನ ಚಲ ಡೈರೆಕ್ಷನ್ ಮಾಡುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ಏಕಕಾಲಕ್ಕೆ ತಯಾರಾಗುತ್ತಿದೆ. ಸತ್ಯ ಹೆಗಡೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ.

multi language actor john vijay kannada halka don movie latest updates

ಈ ಪೋಸ್ಟರ್ ಅಲ್ಲಿ ಏನಿದೆ

ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಕೊಡುತ್ತಿದ್ದಾರೆ. ಕೆ.ಪಿ.ಶ್ರೀಕಾಂತ್ ಅವರು ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಇವರು ಟಗರು ಚಿತ್ರ ನಿರ್ಮಿಸಿದ್ದರು.

ದುನಿಯಾ ವಿಜಯ್ ಅವರ ಸಲಗ ಚಿತ್ರವನ್ನು ಇವರೇ ನಿರ್ಮಿಸಿದರು. ಯುಐ ಚಿತ್ರಕ್ಕೆ ಇವರೂ ನಿರ್ಮಾಪಕರು. ಈಗ ಹಲ್ಕಾ ಡಾನ್ ಸಿನಿಮಾ ಮಾಡುತ್ತಿದ್ದಾರೆ.

ಅಮೃತಾ ಅಯ್ಯಂಗಾರ್ ನಾಯಕಿ

ಹಲ್ಕಾ ಡಾನ್ ಚಿತ್ರಕ್ಕೆ ಪ್ರಮೋದ್ ಪಂಜು ನಾಯಕ ಅನ್ನೋದು ಗೊತ್ತೇ ಇದೆ. ಆದರೆ, ನಾಯಕಿ ಯಾರು ಅನ್ನುವುದನ್ನು ಚಿತ್ರ ತಂಡ ರಿವಿಲ್ ಮಾಡಿದೆ.

ಕನ್ನಡದ ನಟಿ ಅಮೃತಾ ಅಯ್ಯಂಗಾರ್ ಇಲ್ಲಿ ಪ್ರಮೋದ್ ಪಂಜು ಅವರಿಗೆ ಜೋಡಿ ಆಗಿದ್ದಾರೆ. ಇವರ ಈ ಜೋಡಿಯ ಹಲ್ಕಾ ಡಾನ್ ಸಿನಿಮಾ ತನ್ನ ಟೈಟಲ್ ನಿಂದಲೇ ಗಮನ ಸೆಳೆದಿದೆ.

ಹಲ್ಕಾ ಡಾನ್ ಶೀರ್ಷಿಕೆ ಕೇಳಿ ಗೀತಾ ಶಿವರಾಜ್ ಕುಮಾರ್ ಅವರು ಸ್ಮೈಲ್ ಮಾಡಿದ್ದರು. ಚಿತ್ರದ ಮುಹೂರ್ತದ ದಿನ ಈ ಟೈಟಲ್ ಹೇಳಿದ ವಿಶ್ ಮಾಡಿದ್ದರು. ಆದರೆ, ಹೇಳೋದು ಹೇಗೆ ಅನ್ನೋ ಅರ್ಥದಲ್ಲಿ ಮಂದಹಾಸ ಕೂಡ ಬೀರಿದ್ದರು ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed