Job Alert: ಪಿಯುಸಿ ಪಾಸಾಗಿದ್ದೀರಾ? ನೀವು ಈ ಪರೀಕ್ಷೆ ಬರೆದರೆ ನಿಮಗೆ ಸಿಗಲಿದೆ 1.77 ಲಕ್ಷ ಸಂಬಳದ ಉದ್ಯೋಗ! | ಉದ್ಯೋಗ ಸುದ್ದಿ | ACTPnews

ಉದ್ಯೋಗ ಮಾಹಿತಿ


Last Updated:

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ವಿದ್ಯಾರ್ಹತೆ, ವಯೋಮಿತಿ ಮತ್ತು ಇತರೆ ಅರ್ಹತಾ ಷರತ್ತುಗಳನ್ನು ಪರಿಶೀಲಿಸಿ ನಂತರವೇ ಅರ್ಜಿ ಸಲ್ಲಿಸುವುದು ಸೂಕ್ತ.

ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ

ಬೆಂಗಳೂರು: ನೀವು ಕೇಂದ್ರ ಸರ್ಕಾರದ ಪ್ರತಿಷ್ಠಿತ ಉದ್ಯೋಗದ (Job) ಕನಸು ಕಾಣುತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ! ಆಯುಷ್ ಸಚಿವಾಲಯದ ಅಧೀನದಲ್ಲಿರುವ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಮಿಯೋಪಥಿ (CCRH) ಬರೋಬ್ಬರಿ 48 ಗ್ರೂಪ್ ‘A’, ‘B’ ಮತ್ತು ‘C’ ಹುದ್ದೆಗಳಿಗೆ ನೇಮಕಾತಿಯನ್ನು (Recruitment)  ಘೋಷಿಸಿದೆ. LDC ಇಂದ ಹಿಡಿದು ರಿಸರ್ಚ್ ಆಫೀಸರ್ ವರೆಗೆ ಹಲವು ಬಗೆಯ ಹುದ್ದೆಗಳಿದ್ದು, ಬರೋಬ್ಬರಿ ₹1.77 ಲಕ್ಷದವರೆಗೆ ವೇತನ ಸಿಗಲಿದೆ! ಜಾಹೀರಾತು ಸಂಖ್ಯೆ 179/2025-26 ರ ಅಡಿಯಲ್ಲಿ ಈ ಬೃಹತ್ ನೇಮಕಾತಿ ನಡೆಯುತ್ತಿದ್ದು, ನವೆಂಬರ್ 5, 2025 ರ ಬೆಳಗ್ಗೆ 10:00 ಗಂಟೆಯಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಶುರುವಾಗಲಿದೆ. ನವೆಂಬರ್ 26, 2025 ರ ಸಂಜೆ 6:00 ಗಂಟೆಯೊಳಗೆ ಅರ್ಜಿ ಹಾಗೂ ಶುಲ್ಕ ಸಲ್ಲಿಸಲು ಕೊನೆಯ ಅವಕಾಶವಿದ್ದು (ವಯೋಮಿತಿ ಲೆಕ್ಕಾಚಾರವೂ ಇದೇ ದಿನಾಂಕಕ್ಕೆ ಅನ್ವಯ), ತಡ ಮಾಡದೇ ಈಗಲೇ ಸಿದ್ಧರಾಗಿ!

ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

ಒಟ್ಟು 48 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಗ್ರೂಪ್ ‘A’ ವಿಭಾಗದಲ್ಲಿ 14 ಹುದ್ದೆಗಳಿವೆ. ಈ ಪೈಕಿ 12 ಸಂಶೋಧನಾ ಅಧಿಕಾರಿ (ಹೋಮಿಯೋಪಥಿ), 1 ಸಂಶೋಧನಾ ಅಧಿಕಾರಿ (ಎಂಡೋಕ್ರೈನಾಲಜಿ) ಹಾಗೂ 1 ಸಂಶೋಧನಾ ಅಧಿಕಾರಿ (ಪ್ಯಾಥಾಲಜಿ) ಹುದ್ದೆ ಖಾಲಿ ಇದೆ. ಇನ್ನು ಗ್ರೂಪ್ ‘B’ ವಿಭಾಗದಲ್ಲಿ 1 ಜೂನಿಯರ್ ಲೈಬ್ರರಿಯನ್ ಹುದ್ದೆ ಇದ್ದರೆ, ಗ್ರೂಪ್ ‘C’ ವಿಭಾಗದಲ್ಲಿ ಬರೋಬ್ಬರಿ 33 ಹುದ್ದೆಗಳಿವೆ! ಇದರಲ್ಲಿ ಅತಿ ಹೆಚ್ಚು ಅಂದರೆ 27 ಲೋವರ್ ಡಿವಿಷನ್ ಕ್ಲರ್ಕ್ (LDC), 3 ಫಾರ್ಮಸಿಸ್ಟ್, 1 ಎಕ್ಸ್-ರೇ ಟೆಕ್ನಿಷಿಯನ್ ಮತ್ತು 2 ಡ್ರೈವರ್ ಹುದ್ದೆಗಳು ಸೇರಿವೆ.

ಯಾರೆಲ್ಲಾ ಅರ್ಜಿ ಹಾಕಬಹುದು? ನಿಮ್ಮ ವಿದ್ಯಾರ್ಹತೆ ಮತ್ತು ವಯಸ್ಸು ಎಷ್ಟಿರಬೇಕು?

ಕೇವಲ 8ನೇ ತರಗತಿ ಪಾಸ್ ಆದವರಿಂದ ಹಿಡಿದು ಸ್ನಾತಕೋತ್ತರ ಪದವೀಧರರಿಗೂ ಇಲ್ಲಿದೆ ಉದ್ಯೋಗ! ಸಂಶೋಧನಾ ಅಧಿಕಾರಿ (Research Officer) ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಅಥವಾ MD ಆಗಿರಬೇಕು (ಗರಿಷ್ಠ ವಯಸ್ಸು 40 ವರ್ಷ). ಜೂನಿಯರ್ ಲೈಬ್ರರಿಯನ್ ಹುದ್ದೆಗೆ ಲೈಬ್ರರಿ ಸೈನ್ಸ್ ಪದವಿ ಬೇಕಿದ್ದು, ಗರಿಷ್ಠ 25 ವರ್ಷ ಮೀರಿರಬಾರದು. ಫಾರ್ಮಸಿಸ್ಟ್ ಆಗಲು 12ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣ ಹಾಗೂ ಹೋಮಿಯೋಪಥಿ ಫಾರ್ಮಸಿ ಡಿಪ್ಲೊಮಾ ಹೊಂದಿರಬೇಕು (18 ರಿಂದ 25 ವರ್ಷ). ಎಕ್ಸ್-ರೇ ಟೆಕ್ನಿಷಿಯನ್ ಹುದ್ದೆಗೆ ಸರ್ಟಿಫಿಕೇಟ್ ಹಾಗೂ ಕಾರ್ಯಾನುಭವ ಕಡ್ಡಾಯ (ಗರಿಷ್ಠ 25 ವರ್ಷ). ಇನ್ನು ಹೆಚ್ಚು ಬೇಡಿಕೆಯಿರುವ 27 LDC ಹುದ್ದೆಗಳಿಗೆ 12ನೇ ತರಗತಿ ಪಾಸ್ ಜೊತೆಗೆ ಉತ್ತಮ ಟೈಪಿಂಗ್ ಕೌಶಲ್ಯವಿದ್ದರೆ ಸಾಕು (18 ರಿಂದ 27 ವರ್ಷ). ಡ್ರೈವರ್ ಹುದ್ದೆಗೆ ಕೇವಲ 8ನೇ ತರಗತಿ, ಮಾನ್ಯ ಚಾಲನಾ ಪರವಾನಗಿ (DL) ಮತ್ತು ಅನುಭವವಿದ್ದರೆ ಸಾಕು (ಗರಿಷ್ಠ 25 ವರ್ಷ). ಇದಲ್ಲದೆ SC/ST ಅಭ್ಯರ್ಥಿಗಳಿಗೆ 5 ವರ್ಷ, OBC (NCL) ಗೆ 3 ವರ್ಷ, PwD ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳ ವಯೋಮಿತಿ ಸಡಿಲಿಕೆಯ ಬಂಪರ್ ಅವಕಾಶವಿದೆ! ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೂ ನಿಯಮಾನುಸಾರ ಸಡಿಲಿಕೆ ಸಿಗಲಿದೆ.

ವೇತನ ಮತ್ತು ಅರ್ಜಿ ಶುಲ್ಕದ ವಿವರ ಕೇಳಿದರೆ ನೀವು ಈಗಲೇ ಅರ್ಜಿ ಹಾಕ್ತೀರಾ!

ರಿಸರ್ಚ್ ಆಫೀಸರ್ ಹುದ್ದೆಗೆ ಲೆವೆಲ್-10 ರ ಅಡಿಯಲ್ಲಿ ಕನಿಷ್ಠ ₹56,100 ರಿಂದ ಗರಿಷ್ಠ ₹1,77,500 ವರೆಗೆ ಕೈತುಂಬಾ ಸಂಬಳ ಸಿಗಲಿದೆ. ಜೂನಿಯರ್ ಲೈಬ್ರರಿಯನ್ ಗೆ ₹35,400 ರಿಂದ ₹1,12,400 (ಲೆವೆಲ್-6), ಫಾರ್ಮಸಿಸ್ಟ್ ಮತ್ತು ಎಕ್ಸ್-ರೇ ಟೆಕ್ನಿಷಿಯನ್ ಗೆ ₹29,200 ರಿಂದ ₹92,300 (ಲೆವೆಲ್-5), ಹಾಗೂ LDC ಮತ್ತು ಡ್ರೈವರ್ ಹುದ್ದೆಗಳಿಗೆ ₹19,900 ರಿಂದ ₹63,200 (ಲೆವೆಲ್-2) ವೇತನ ನಿಗದಿಯಾಗಿದೆ. ಇನ್ನು ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೆ, ಗ್ರೂಪ್ ‘A’ ಹುದ್ದೆಗಳಿಗೆ UR, OBC, EWS ವರ್ಗದವರು ₹1000, ಹಾಗೂ ಗ್ರೂಪ್ ‘B’, ‘C’ ಹುದ್ದೆಗಳಿಗೆ ₹500 ಪಾವತಿಸಬೇಕು. ಆದರೆ, ಮಹಿಳೆಯರು, SC, ST, ಮತ್ತು PwD ಅಭ್ಯರ್ಥಿಗಳಿಗೆ ಒಂದು ರೂಪಾಯಿ ಕೂಡ ಅರ್ಜಿ ಶುಲ್ಕವಿಲ್ಲ, ಇದು ಸಂಪೂರ್ಣ ಉಚಿತ!

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಕೇಂದ್ರಗಳ ಸಂಪೂರ್ಣ ವಿವರ!

ಗ್ರೂಪ್ ‘A’ ಹುದ್ದೆಗಳಿಗೆ 150 ಅಂಕಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು 30 ಅಂಕಗಳ ಸಂದರ್ಶನ ಇರುತ್ತದೆ. ಆದರೆ, ಗ್ರೂಪ್ ‘B’ ಮತ್ತು ‘C’ ಗೆ ಕೇವಲ 100 ಅಂಕಗಳ CBT ಪರೀಕ್ಷೆ ಮಾತ್ರ ಇರುತ್ತದೆ. ವಿಶೇಷವಾಗಿ LDC ಹುದ್ದೆಗೆ CBT ನಂತರ ಕಡ್ಡಾಯವಾಗಿ ಟೈಪಿಂಗ್ ಪರೀಕ್ಷೆ ಇರಲಿದ್ದು, ಇಂಗ್ಲಿಷ್ ನಲ್ಲಿ ನಿಮಿಷಕ್ಕೆ 35 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗ ಹೊಂದಿರಬೇಕು. ಅಭ್ಯರ್ಥಿಗಳು ಗಮನಿಸಲೇಬೇಕಾದ ಅಂಶವೆಂದರೆ, ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಮಾರ್ಕಿಂಗ್ ಇರಲಿದೆ! ಈ ಪರೀಕ್ಷೆಗಳು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಗುವಾಹಟಿ ನಗರಗಳ ಕೇಂದ್ರಗಳಲ್ಲಿ ನಡೆಯಲಿವೆ.  ಅಧಿಕೃತ ಅಧಿಸೂಚನೆ ಇಲ್ಲಿದೆ ಗಮನಿಸಿ: https://drive.google.com/file/d/1pzUbx1V_xbnT5mxP2PbB-1sOvtP8BuGm/view?usp=sharing

ತಡ ಮಾಡಬೇಡಿ, ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ!

ಇದನ್ನೂ ಓದಿ: Ramanagara Jobs: ಸರ್ಕಾರಿ ಉದ್ಯೋಗದ ಕನಸು ಕಾಣುವವರಿಗೆ ಸಿಹಿಸುದ್ದಿ, ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ 55 ಭರ್ಜರಿ ಹುದ್ದೆಗಳ ನೇಮಕಾತಿ!

ಇದು ನಿಮ್ಮ ಬದುಕನ್ನೇ ಬದಲಾಯಿಸುವ ಕೇಂದ್ರ ಸರ್ಕಾರಿ ನೌಕರಿ, ಈ ಅವಕಾಶ ಕೈತಪ್ಪದಿರಲಿ! ಅಧಿಕೃತ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ https://eapplynow.com/ ಮೊದಲು ನಿಮ್ಮ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ. ಬಳಿಕ ಅರ್ಜಿ ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ, ನಿಮ್ಮ ಅಗತ್ಯ ದಾಖಲೆಗಳು, ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ. ಆನ್‌ಲೈನ್ ಮೂಲಕವೇ ನಿಗದಿತ ಶುಲ್ಕ ಪಾವತಿಸಿ ಅಂತಿಮ ಅರ್ಜಿಯನ್ನು ಸಲ್ಲಿಸಿ. ಮುಂದಿನ ರೆಫರೆನ್ಸ್‌ಗಾಗಿ ಆ ಅರ್ಜಿಯ ಪ್ರಿಂಟ್‌ಔಟ್ ಇಟ್ಟುಕೊಳ್ಳಲು ಮರೆಯದಿರಿ. ನೆನಪಿರಲಿ, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ವಿದ್ಯಾರ್ಹತೆ ಮತ್ತು ಷರತ್ತುಗಳನ್ನು ಪರಿಶೀಲಿಸಿಕೊಳ್ಳುವುದು ಕಡ್ಡಾಯ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed