Janhvi Kapoor: ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? | | ACTPnews

ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ?


Last Updated:

ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಕೆಲವು ಸಾಲುಗಳನ್ನ ಕಲಿತುಕೊಂಡು ಅದನ್ನ ಹಾಗೆ ಹೇಳಿದರು. ಆದರೆ, ಜಾನಿ ಕಪೂರ್ ನಿಜಕ್ಕೂ ಕನ್ನಡ ಸಿನಿಮಾ ಆಫರ್ ಬಂದ್ರೆ ಒಪ್ಪಿಕೊಳ್ತಾರಾ? ಕನ್ನಡ ಸಿನಿಮಾರಂಗದ ಬಗ್ಗೆ ಇವರ ಅಭಿಪ್ರಾಯವೇನು? ಈ ಪ್ರಶ್ನೆಗಳಿಗೆ ಸ್ವತಃ ಜಾನ್ವಿ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ?
ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ?

ಜಾನ್ವಿ ಕಪೂರ್ (Janhvi Kapoor) ಕನ್ನಡ ಕಲಿತುಕೊಂಡಿದ್ದಾರೆ. ನಮಸ್ಕಾರ ಬೆಂಗಳೂರು, ಚೆನ್ನಾಗಿದ್ದೀರಾ? ನಿಮ್ಮನ್ನ ನೋಡಿ ನನಗೆ ಸಂತೋಷವಾಯಿತು. ಕನ್ನಡದ ಈ ಮಾತುಗಳನ್ನ ಶಿವಣ್ಣ (Shivanna) ಹೇಳಿಕೊಟ್ಟಿದ್ದಾರೆ. ಅದನ್ನೆ ಕಂಠ ಪಾಠ ಮಾಡಿಯೇ ಜಾನ್ವಿ ಕಪೂರ್ (Janhvi Kapoor) ಪೆದ್ದಿ ಚಿತ್ರದ (Peddi Movie) ಪ್ರಚಾರದ ವೇಳೆ ಹೇಳಿದ್ದಾರೆ. ಆದರೆ, ಇದರಲ್ಲಿಯೆ ಕೆಲವು ತಪ್ಪುಗಳು ಆದವು. ಅದನ್ನೆ ಆ್ಯಂಕರ್ ಅನುಶ್ರೀ ಸರಿ ಮಾಡಿದ್ದಾರೆ. ಅದು ಬಿಟ್ಟರೆ, ಕನ್ನಡ ಸಿನಿಮಾದಲ್ಲಿ ನಟಿಸೋ ಆಸಕ್ತಿ ಬಗ್ಗೆ ಕೇಳುವ ಪ್ರಶ್ನೆಗೆ ಜಾನ್ವಿ ಉತ್ತರ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.

ಜಾನ್ವಿ ಕನ್ನಡ ಸಿನಿಮಾ ಮಾಡ್ತಾರಾ

ಜಾನ್ವಿ ಕಪೂರ್ ಅವರಿಗೆ ಕನ್ನಡ ಫಿಲ್ಮ ಇಂಡಸ್ಟ್ರಿ ಬಗ್ಗೆ ಗೊತ್ತಿದೆ. ಅಮ್ಮ ಶ್ರೀದೇವಿ ಅವರಿಂದಲೇ ಇದನ್ನ ತಿಳಿದುಕೊಂಡಿದ್ದಾರೆ. ಕನ್ನಡದಲ್ಲಿ ಒಳ್ಳೆ ಚಿತ್ರಗಳು ಬರ್ತಿವೆ. ಅಲ್ಲಿ ಒಳ್ಳೆ ಬೆಳವಣಿಗೆ ಆಗುತ್ತಿದೆ ಅಂತಲೂ ಹೇಳಿದ್ದಾರೆ.
Will Janhvi Kapoor act in a Kannada movie Will she accept if she gets an offer

ಜಾನ್ವಿ ಕನ್ನಡ ಸಿನಿಮಾ ಮಾಡ್ತಾರಾ?

ಅಮ್ಮ ಹೇಳಿದ ಈ ಮಾತುಗನ್ನ ಜಾನ್ವಿ ಕಪೂರ್ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಕನ್ನಡದಲ್ಲಿ ಒಳ್ಳೆ ಅವಕಾಶಗಳು, ಒಳ್ಳೆ ಡೈರೆಕ್ಟರ್ ಬಂದು ನಿಮ್ಮನ್ನ ಅಪ್ರೋಚ್ ಮಾಡಿದ್ರೆ ನಟಸ್ತೀರಾ? ಈ ಒಂದು ಪ್ರಶ್ನೆಯನ್ನ ಆ್ಯಂಕರ್ ಅನುಶ್ರೀ ಕೇಳ್ತಾರೆ. ಇದಕ್ಕೆ ಜಾನ್ವಿ ಇದಕ್ಕೆ ಉತ್ತರ ಕೊಟ್ಟಿದ್ದಾರೆ.

ನಾನು ಕನ್ನಡ ಸಿನಿಮಾ ಮಾಡುವೆ

ಜಾನ್ವಿ ಕಪೂರ್ ಈ ಒಂದು ಮಾತು ಹೇಳಿದ್ದಾರೆ. ಕನ್ನಡ ಸಿನಿಮಾಗಳ ಆಫರ್ಸ್ ಬಂದ್ರೆ ಮಾಡುವೆ. ಶಿವಣ್ಣನಂತಹ ಕಲಾವಿದರು ಇರೋ ಈ ಇಂಡಸ್ಟ್ರಿಯಲ್ಲಿ ಚಿತ್ರ ಮಾಡೋಕೆ ಇಷ್ಟಪಡ್ತೀನಿ ಅಂತಲೇ ಹೇಳಿದ್ದಾರೆ.

ಇದನ್ನ ಹೇಳಿದ್ಮೇಲೆ ಜಾನ್ವಿ ಕಪೂರ್ ಅವರಿಗೆ ಇನ್ನೂ ಒಂದು ವಿಷಯ ನೆನಪಾಗಿದೆ. ಪೆದ್ದಿ ಚಿತ್ರದ ಶಿವಣ್ಣನ ಜೊತೆಗೆ ನಟಿಸುವಾಗಿನ ಅನುಭವವೇ ಅದಾಗಿದೆ.

ಪೆದ್ದಿಯನ್ನ ಡಿಸ್ಟ್ರ್ಯಾಕ್ಟ್ ಮಾಡುವ ದೃಶ್ಯ

ಪೆದ್ದಿ ಈ ಚಿತ್ರದಲ್ಲಿ ಪೈಲ್ವಾನ್ ಅನ್ನೋದು ಗೊತ್ತೇ ಇದೆ. ಈ ಪೆದ್ದಿಯನ್ನ ಡಿಸ್ಟ್ರ್ಯಾಕ್ಟ್ ಮಾಡುವ ದೃಶ್ಯ ಒಂದಿದೆ. ಆಗ ಗುರು ಗೌರ್ ನಾಯ್ಡು ಇಲ್ಲಿ ಅಚ್ಚಯಮ್ಮ ಪಾತ್ರಧಾರಿ ಜಾನ್ವಿ ಕಪೂರ್ ಅವರನ್ನ ಸಿಟ್ಟಿನಿಂದಲೇ ನೋಡು ದೃಶ್ಯ ಒಂದಿದೆ. ಇದರ ಚಿತ್ರೀಕರಣದ ವೇಳೆ ಜಾನ್ವಿ ನಿಜಕ್ಕೂ ಭಯಪಟಿದ್ದರು.

ಇದನ್ನೂ ಜಾನ್ವಿ ಕಪೂರ್ ಇಲ್ಲಿ ಹೇಳಿಕೊಂಡಿದ್ದಾರೆ. ಇಡೀ ಚಿತ್ರದಲ್ಲಿ ಶಿವಣ್ಣನ ಜೊತೆಗೆ ಜಾನ್ವಿ ಒಂದೇ ಸೀನ್ ಏನೋ ಬರುತ್ತದೆ. ಆದರೆ, ಅದು ಅಷ್ಟೆ ಎಫೆಕ್ಟಿವ್ ಆಗಿದೆ. ಅದನ್ನ ಕಂಡೇ ಶಿವಣ್ಣನ ಕಣ್ಣು ಪವರ್‌ಫುಲ್ ಅಂತಲೇ ಜಾನ್ವಿ ಕಪೂರ್ ಹೇಳಿದ್ದಾರೆ.

Will Janhvi Kapoor act in a Kannada movie Will she accept if she gets an offer

ಜಾನ್ವಿ ಕಪೂರ್ ಜೀವನದಲ್ಲಿ ಪೆದ್ದಿ ಯಾರು
ಜಾನ್ವಿ ಕಪೂರ್ ಜೀವನದಲ್ಲಿ ಪೆದ್ದಿ ಯಾರು

ಪೆದ್ದಿ ಚಿತ್ರದ ಪೆದ್ದಿ ಒಂದು ಸ್ಪೂರ್ತಿದಾಯಕ ಪಾತ್ರವೇ ಆಗಿದೆ. ಐಡೆಂಟಿಟಿ ಇಲ್ಲದ ಊರಿನ ಯುವಕ ಅನ್ನೋದು ಅಷ್ಟೆ ಸತ್ಯ. ಆದರೆ, ಕ್ರೀಡೆಯಲ್ಲಿಯೇ ದೈತ್ಯವಾಗಿಯೇ ಬೆಳೆಯೋ ಕತೆ ಇಲ್ಲಿದೆ. ಇಂತಹ ಸಾಧನೆಯ ಈ ಸ್ಟೋರಿ ಇತರರಿಗೂ ಸ್ಪೂರ್ತಿ ಆಗುತ್ತದೆ ಅಂತ ರಾಮ್ ಚರಣ್ ಹೇಳಿಕೊಂಡಿದ್ದಾರೆ.

ಹಾಗೆ ಶಿವಣ್ಣನ ಜೀವನದಲ್ಲಿ ರಾಜಕುಮಾರ್ ಪದ್ದಿ ತರವೇ ಬೆಳೆದ ಸಾಧಕ ಆಗಿದ್ದಾರೆ. ಸ್ಪೂರ್ತಿ ನೀಡಿದ್ದಾರೆ. ರಾಮ್ ಚರಣ್ ಲೈಫ್ ಅಲ್ಲಿ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರು ಪೆದ್ದಿ ಆಗಿದ್ದಾರೆ.

ಜೂನ್-4 ರಂದು ಚಿತ್ರ ರಿಲೀಸ್

ಜೂನ್-4 ರಂದು ಪೆದ್ದಿ ಚಿತ್ರ ರಿಲೀಸ್ ಆಗುತ್ತಿದೆ. ಎ.ಆರ್.ರೆಹಮಾನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರತ್ನವೇಲು ಕ್ಯಾಮರಾವರ್ಕ್ ಈ ಚಿತ್ರಕ್ಕೆ ಇದೆ. ಬುಚಿ ಬಾಬು ಸನಾ ಈ ಸಿನಿಮಾವನ್ನ ಡೈರೆಕ್ಷನ್ ಮಾಡಿದ್ದಾರೆ.

ಈ ಚಿತ್ರದ ಪ್ರೀಮಿಯರ್ ಶೋ ಜೂನ್-3 ರಂದೇ ಪ್ಲಾನ್ ಆಗಿದೆ. ಇನ್ನುಳಿದಂತೆ ಈ ಚಿತ್ರ ವಿಶ್ವದಾದ್ಯಂತ ಬಹು ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed