ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ಜನ ನಾಯಗನ್ ಗುರುವಾರ (ಜುಲೈ 23) ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ವಿಜಯ್ ಅವರ ಪೂರ್ಣಾವಧಿಯ ರಾಜಕೀಯ ಜೀವನದ ಮುನ್ನ ಅವರ ಕೊನೆಯ ಚಿತ್ರ ಎಂದು ನಂಬಲಾದ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಸಿನಿಮಾ ರಿಲೀಸ್ ಹಿನ್ನೆಲೆ ಚಿತ್ರಮಂದಿರಗಳ ಮುಂದೆ ಭಾರೀ ಸೆಲೆಬ್ರೇಷನ್ ಕಂಡು ಬಂದಿದೆ.
ನಟಿ ತ್ರಿಶಾ ಕೃಷ್ಣನ್ ಚಿತ್ರವನ್ನು ವೀಕ್ಷಿಸಲು ಚೆನ್ನೈನ ಚಿತ್ರಮಂದಿರಕ್ಕೆ ಆಗಮಿಸಿದ್ದು ಅವರ ವಿಡಿಯೋ ತಕ್ಷಣ ಗಮನ ಸೆಳೆಯಿತು. ಚೆನ್ನೈನ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ಗೆ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ತ್ರಿಶಾ ಆಗಮಿಸಿದ್ದಾರೆ. ಅಭಿಮಾನಿಗಳ ಜೋರಾದ ಹರ್ಷೋದ್ಗಾರಗಳ ನಡುವೆ ನಟಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿರೋದು ಕಂಡುಬಂದಿತು.
ಜನ ನಾಯಗನ್ ಬಗ್ಗೆ ಕೇಳಿದಾಗ, ತ್ರಿಶಾ ನ್ಯೂಸ್ 18 ಗೆ ಪ್ರತಿಕ್ರಿಯಿಸಿದ ನಟಿ, ಆ ಚಿತ್ರವನ್ನು ನೋಡಲು ತಾನು ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ತ್ರಿಶಾ ಮತ್ತು ವಿಜಯ್ ನಡುವಿನ ಸಂಬಂಧದ ಬಗ್ಗೆ ವದಂತಿಗಳು ವರ್ಷಗಳಿಂದಲೂ ಮುಂದುವರೆದಿರುವುದರಿಂದ, ಅವರು ಸಿನಿಮಾ ಬಂದಿದ್ದು ತಕ್ಷಣವೇ ಪ್ರಮುಖ ವಿಷಯಗಳಲ್ಲಿ ಒಂದಾಯಿತು.
ತ್ರಿಶಾ ಜೊತೆಗೆ, ಚಲನಚಿತ್ರೋದ್ಯಮದ ಇತರ ಸೆಲೆಬ್ರಿಟಿಗಳು ಸಹ ಚಿತ್ರದ ಪ್ರದರ್ಶನಕ್ಕೆ ಹಾಜರಾಗಲು ಬಂದಿದ್ದರು. ನಟಿ ಕೀರ್ತಿ ಸುರೇಶ್ ಅವರು ವೆಟ್ರಿ ಥಿಯೇಟರ್ನಲ್ಲಿ ನಡೆದ ಪ್ರದರ್ಶನಕ್ಕೆ ಬಂದಿದ್ದರು.
ಜನ ನಾಯಗನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಸಂಯೋಜಕ ಅನಿರುದ್ಧ್ ರವಿಚಂದರ್ ಕೂಡ ಪ್ರದರ್ಶನಕ್ಕೆ ಬಂದರು. ಚಿತ್ರದ ನಿರ್ಣಾಯಕ ಭಾಗವಾಗಿರುವ ಮಮಿತಾ ಬೈಜು ಕೂಡ ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸಲು ಹಾಜರಿದ್ದರು.
ಚಿತ್ರ ಬಿಡುಗಡೆಯಾದಾಗಿನಿಂದ ಸೆಲೆಬ್ರಿಟಿಗಳ ಆಗಮನವು ಹಬ್ಬದ ವಾತಾವರಣವನ್ನು ಹೆಚ್ಚಿಸಿತು. ಚಲನಚಿತ್ರ ಪ್ರೇಕ್ಷಕರು ಅವರನ್ನು ಚಪ್ಪಾಳೆ ಮತ್ತು ಉತ್ಸಾಹದಿಂದ ಸ್ವಾಗತಿಸಿದರು. ಕರ್ನಾಟಕ ಮತ್ತು ಕೇರಳದಂತಹ ನೆರೆಯ ರಾಜ್ಯಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಪ್ರದರ್ಶನಗಳು ಪ್ರಾರಂಭವಾಗಿದ್ದರೂ, ರಾಜ್ಯ ಸರ್ಕಾರ ನಿಗದಿಪಡಿಸಿದ ನಿಯಮಗಳ ಪ್ರಕಾರ ತಮಿಳುನಾಡಿನ ಚಿತ್ರಮಂದಿರಗಳು ಬೆಳಿಗ್ಗೆ 9 ಗಂಟೆಯಿಂದಲೇ ಸಿನಿಮಾ ಪ್ರದರ್ಶಿಸಿದವು.
ತ್ರಿಶಾ ಮತ್ತು ವಿಜಯ್ ನಡುವಿನ ಸಂಬಂಧದ ಬಗ್ಗೆ ಬಹಳ ಹಿಂದಿನಿಂದಲೂ ವದಂತಿಗಳು ಹರಡುತ್ತಿರುವುದರಿಂದ, ಈ ಶೋನಲ್ಲಿ ನಟಿಯ ಉಪಸ್ಥಿತಿಯು ವಿಶೇಷ ಗಮನ ಸೆಳೆದಿದೆ.
ವಿಜಯ್ ಅವರ ಪತ್ನಿ ಸಂಗೀತಾ ಅವರಿಂದ ಬೇರ್ಪಟ್ಟಿದ್ದಾರೆ ಎಂಬ ವರದಿಗಳು ಹರಡಲು ಪ್ರಾರಂಭಿಸಿದ ನಂತರ ಊಹಾಪೋಹಗಳು ತೀವ್ರಗೊಂಡವು. ವಿಜಯ್ ಮತ್ತು ತ್ರಿಶಾ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾದ ನಂತರ ನಟಿ ವಿಜಯ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು ಆನ್ಲೈನ್ ಚರ್ಚೆಗಳಿಗೆ ಮತ್ತಷ್ಟು ಉತ್ತೇಜನ ನೀಡಿತು.













