Last Updated:
ಜನ ನಾಯಗನ್ ಚಿತ್ರ ಎರಡನೇ ವಾರಕ್ಕೆ ಭಾರೀ ಕಲೆಕ್ಷನ್ ಮಾಡಿದೆ. ಇದನ್ನ ಚಿತ್ರ ತಂಡವೇ ಹೇಳಿಕೊಂಡಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜನ ನಾಯಗನ್ ಚಿತ್ರ (Jana Nayagan Movie) ರಿಲೀಸ್ ಆಗಿ ಒಂದು ವಾರ ಆಗಿದೆ. ಆದರೆ, ಒಂದು ವಾರದಲ್ಲಿ ಈ ಚಿತ್ರ ಭಾರೀ ಕಲೆಕ್ಷನ್ ಮಾಡಿದೆ. ನೂರಾರು ಕೋಟಿ ಕಲೆಕ್ಷನ್ ಮಾಡಿರೋ ಈ ಚಿತ್ರದ ಕಲೆಕ್ಷನ್ (Movie Collection) ಮಾಹಿತಿಯನ್ನ ಚಿತ್ರ ತಂಡವೇ ಅಧಿಕೃತವಾಗಿ ಕೊಟ್ಟಿದೆ. ಜುಲೈ-23 ರಂದು ಈ ಚಿತ್ರ ಎಲ್ಲೆಡೆ ರಿಲೀಸ್ ಆಗಿದೆ. ಎಚ್.ವಿನೋದ್ ಡೈರೆಕ್ಷನ್ (H. Vinoth Direction) ಮಾಡಿರೋ ಈ ಚಿತ್ರದ ಸದ್ಯದ ಕಲೆಕ್ಷನ್ (Collection) ವಿವರ ಇಲ್ಲಿದೆ ಓದಿ.
2 ನೇ ವಾರ ಅದೆಷ್ಟು ಕೋಟಿ ಗೊತ್ತಾ?
ಈ ಕಲೆಕ್ಷನ್ ಲೆಕ್ಕ ಎಷ್ಟು ಕೋಟಿ ಇದೆ ಗೊತ್ತಾ? 2.50 ಕೋಟಿಗೂ ಹೆಚ್ಚು ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಫಸ್ಟ್ ಡೇ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ಒಂದು ವಾರದಲ್ಲಿ ಇದರ ಕಲೆಕ್ಷನ್ ಭಾರೀ ಜೋರಾಗಿಯೇ ಆಗಿದೆ.
ಇಳಯದಪತಿ ವಿಜಯ್ ಅಭಿನಯದ ಈ ಚಿತ್ರವನ್ನ ಎಚ್.ವಿನೋದ್ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ. ಬಾಬಿ ಡಿಯೋಲ್ ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.
ಜನ ನಾಯಗನ್ ಕೊನೆ ಎರಡು ನಿಮಿಷದ ದೃಶ್ಯ ಎಲ್ಲರನ್ನು ಎಮೋಷನಲ್ ಮಾಡಿದೆ. ಈ ಚಿತ್ರವನ್ನ ನೋಡಿದ್ಮೇಲೆ ಇನ್ನೇನು ಮೇಲೆ ಹೇಳ್ಬೇಕು ನೋಡಿ, ಅಷ್ಟರಲ್ಲಿಯೇ ವಿಜಯ್ ಅಭಿನಯದ ಸಿನಿಮಾಗಳ ಪಾತ್ರಗಳ ದೃಶ್ಯ ಬರೋಕೆ ಶರು ಆಗುತ್ತದೆ.
ಬಾಕ್ಸ್ ಆಫೀಸ್ ಅಲ್ಲಿ ಜನ ನಾಯಗನ್ ಅಬ್ಬರ
(ಚಿತ್ರ ಕೃಪೆ: ಕೆ.ವಿ.ಎನ್. ಇನ್ಸ್ಟಾಗ್ರಾಮ್)
ಇದರಿಂದ ವಿಜಯ್ ಫ್ಯಾನ್ಸ್ ನೋಡ್ತಾನೇ ಎಮೋಷನಲ್ ಆಗಿದ್ದಾರೆ. ಈ ಒಂದು ದೃಶ್ಯ ಬಹುತೇಕ ಥಿಯೇಟರ್ ಅಲ್ಲಿ ಕಾಣಿಸಿಕೊಂಡಿದೆ. ಈ ಕ್ಷಣದ ವಿಡಿಯೋ ಕೂಡ ವೈರಲ್ ಆಗಿವೆ.
ಚಿತ್ರದಲ್ಲಿ ಬರುವ ದಳಪತಿ ಕಚೇರಿ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡು ಥಿಯೇಟರ್ ಅಲ್ಲಿ ಬೆಳ್ಳಿ ತೆರೆ ಮೇಲೆ ಬರ್ತಾ ಇದ್ದಂತೇನೆ ಅನೇಕ ಫ್ಯಾನ್ಸ್ ಸ್ಕ್ರೀನ್ ಮುಂದೆ ಹೋಗಿ ಕುಣಿದಿರೋದು ಇದೆ.
ಇನ್ನೇನು ಮೂರನೇ ವಾರಕ್ಕೂ ಕಾಲಿಡುತ್ತಿದೆ. ಅಷ್ಟರಲ್ಲಿಯೇ ಈ ಚಿತ್ರ 250 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka














