ISRO Recruitment: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದಲ್ಲಿ 92 ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಆಹ್ವಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಇಸ್ರೋ ನೇಮಕಾತಿ


Last Updated:

ಇಸ್ರೋದಲ್ಲಿ 92 ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಬೆಂಗಳೂರು, ಹಾಸನ ವಿಭಾಗಗಳಲ್ಲಿ ಅವಕಾಶ. B.E/B.Tech ಪದವೀಧರರಿಗೆ ₹56,100 ವೇತನ. ಗರಿಷ್ಠ ವಯಸ್ಸು 28 ವರ್ಷ.

ಇಸ್ರೋ ನೇಮಕಾತಿ
ಇಸ್ರೋ ನೇಮಕಾತಿ

ಬೆಂಗಳೂರು: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ (ISRO) ದಲ್ಲಿ ಪ್ರತಿಷ್ಠಿತ ಉದ್ಯೋಗ ಪಡೆದು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಸುವರ್ಣಾವಕಾಶ ಎದುರಾಗಿದೆ. ಬೆಂಗಳೂರು (Bengaluru) ಮತ್ತು ಹಾಸನ (Hassan) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 92 ವಿಜ್ಞಾನಿ/ಇಂಜಿನಿಯರ್ (Scientist/Engineer) ಹುದ್ದೆಗಳನ್ನು (Jobs) ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಾಣುವ ಯುವ ಪ್ರತಿಭೆಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ!

ಹುದ್ದೆಯ ವಿವರ ಹಾಗೂ ವಿದ್ಯಾರ್ಹತೆ

ಸಂಸ್ಥೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಹುದ್ದೆಯ ಹೆಸರು: ವಿಜ್ಞಾನಿ / ಇಂಜಿನಿಯರ್

ಒಟ್ಟು ಹುದ್ದೆಗಳು: 92

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.E ಅಥವಾ B.Tech ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು ಎಂದು udyogadeepa.prowebp  ವರದಿ ಮಾಡಿದೆ.

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನ ₹56,100 ದೊರೆಯಲಿದೆ.
ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 28 ವರ್ಷಗಳು ನಿಗದಿಪಡಿಸಲಾಗಿದೆ (ಅರ್ಹ ವರ್ಗದವರಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ). ಸಾಮಾನ್ಯ, OBC ಹಾಗೂ EWS ಅಭ್ಯರ್ಥಿಗಳಿಗೆ ₹250 ಅರ್ಜಿ ಶುಲ್ಕವಿದ್ದು, SC, ST ಹಾಗೂ PwD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಇಂಜಿನಿಯರಿಂಗ್ ಮುಗಿಸಿ ಉದ್ಯೋಗ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಕೂಡಲೇ ಅಧಿಕೃತ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ, ಭಾರತದ ಬಾಹ್ಯಾಕಾಶ ಯಶಸ್ಸಿನಲ್ಲಿ ಹೆಮ್ಮೆಯ ಪಾಲುದಾರರಾಗಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed