ISRO Jobs: ಇಸ್ರೋದಲ್ಲಿ ಬೃಹತ್‌ ನೇಮಕಾತಿ; ಡಿಪ್ಲೋಮಾ ಆಗಿದ್ದರೂ ಸಾಕು, ಅರ್ಜಿ ಶುಲ್ಕವೂ ಇಲ್ಲ! ಅಪ್ಲೈ ಮಾಡುವುದು ಹೇಗೆ? | | ACTPnews

ಇಸ್ರೋ


Last Updated:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ UR Rao Satellite Centre (URSC) 2026ನೇ ಸಾಲಿನ 410 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ ಹಾಗೂ Commercial Practice ಅಭ್ಯರ್ಥಿಗಳು ಆಗಸ್ಟ್ 28, 2026ರವರೆಗೆ ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಇಸ್ರೋ
ಇಸ್ರೋ

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವ ಯುವಜನತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ! ಹೌದು, ಬೆಂಗಳೂರಿನಲ್ಲಿರುವ ಇಸ್ರೋದ ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್ (URSC) 2026ರ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಬರೋಬ್ಬರಿ 410 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ ಹೊಂದಿರುವವರು ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಜುಲೈ 29, 2026 ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಅಭ್ಯರ್ಥಿಗಳು ಆಗಸ್ಟ್ 28, 2026 ರೊಳಗೆ ಅರ್ಜಿ ಸಲ್ಲಿಸಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ.

ಇದು ಬೃಹತ್‌ ನೇಮಕಾತಿ

ಈ ಬೃಹತ್ ನೇಮಕಾತಿಯಲ್ಲಿ ಒಟ್ಟು 410 ಹುದ್ದೆಗಳಿದ್ದು, ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಅವಕಾಶಗಳನ್ನು ಹಂಚಿಕೆ ಮಾಡಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ ಅಥವಾ ಬಿ.ಟೆಕ್ (B.E. / B.Tech) ಪೂರ್ಣಗೊಳಿಸಿದವರಿಗೆ ಅತಿ ಹೆಚ್ಚು ಅಂದರೆ 220 ‘ಗ್ರಾಜುಯೇಟ್ ಅಪ್ರೆಂಟಿಸ್’ ಹುದ್ದೆಗಳನ್ನು ಮೀಸಲಿಡಲಾಗಿದೆ. ಅದೇ ರೀತಿ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಮುಗಿಸಿದವರಿಗೆ 120 ‘ಟೆಕ್ನಿಷಿಯನ್ ಅಪ್ರೆಂಟಿಸ್’ ಹುದ್ದೆಗಳಿದ್ದು, ಸೆಕ್ರೆಟೇರಿಯಲ್ ಅಥವಾ ಆಡಳಿತಾತ್ಮಕ ತರಬೇತಿ ಪಡೆದ ಕಮರ್ಷಿಯಲ್ ಪ್ರಾಕ್ಟೀಸ್ ಅಭ್ಯರ್ಥಿಗಳಿಗೆ 70 ‘ಕಮರ್ಷಿಯಲ್ ಪ್ರಾಕ್ಟೀಸ್ ಅಪ್ರೆಂಟಿಸ್’ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಯೋಮಿತಿ ಸಡಿಲಿಕೆಯು ಇಸ್ರೋ ಯುಆರ್‌ಎಸ್‌ಸಿ ಯ ಪ್ರಮಾಣಿತ ನಿಯಮಗಳ ಅನ್ವಯ ಇರಲಿದೆ.

ಅರ್ಜಿ ಶುಲ್ಕ ಸಂಪೂರ್ಣ ಉಚಿತ

ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಸ್ಟೈಪೆಂಡ್ (ವೇತನ) ಕೂಡ ಸಿಗಲಿದ್ದು, ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ ಪ್ರತಿ ತಿಂಗಳು ರೂ. 12,300 ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ ಮಾಸಿಕ ರೂ. 10,900 ನಿಗದಿಯಾಗಿದೆ. ಕಮರ್ಷಿಯಲ್ ಪ್ರಾಕ್ಟೀಸ್ ಹುದ್ದೆಗಳಿಗೆ ಇಸ್ರೋ ನಿಯಮಗಳ ಪ್ರಕಾರ ವೇತನ ಸಿಗಲಿದೆ. ಎಲ್ಲಕ್ಕಿಂತ ದೊಡ್ಡ ಖುಷಿಯ ವಿಚಾರವೆಂದರೆ, ಯಾವುದೇ ವರ್ಗದ ಅಭ್ಯರ್ಥಿಗಳಿಗೂ ಬಿಡಿಗಾಸಿನ ಅರ್ಜಿ ಶುಲ್ಕವಿಲ್ಲ! ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಇನ್ನು ಆಯ್ಕೆ ಪ್ರಕ್ರಿಯೆಯು ಯಾವುದೇ ಪರೀಕ್ಷೆಯಿಲ್ಲದೆ ಕೇವಲ ನಿಮ್ಮ ಶೈಕ್ಷಣಿಕ ಅಂಕಗಳ (ಶೇಕಡಾವಾರು) ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ನಂತರ ಶೈಕ್ಷಣಿಕ ಪ್ರಮಾಣಪತ್ರಗಳು, ಗುರುತಿನ ಪುರಾವೆ ಮತ್ತು ವರ್ಗ ಪ್ರಮಾಣಪತ್ರಗಳ ಪರಿಶೀಲನೆ (Document Verification) ಮೂಲಕ ನೇರವಾಗಿ ನಡೆಯಲಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಇದನ್ನೂ ಓದಿ: Indian Airforce: ಸಂಗೀತ ಗೊತ್ತಿದ್ರೆ ಸೇನೆಯಲ್ಲಿ ಕೆಲಸ ಪಕ್ಕಾ; ಇರೋದು ಇನ್ನೆರೆಡು ದಿನದ ಅವಕಾಶ, ಇಲ್ಲಿದೆ ಸಂಪೂರ್ಣ ವಿವರ

ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ? ತಕ್ಷಣವೇ ಇಸ್ರೋ/URSC careers ಪೋರ್ಟಲ್ ಅಥವಾ ಅಧಿಕೃತ ವೆಬ್‌ಸೈಟ್ https://nats.education.gov.in/ ಗೆ ಭೇಟಿ ನೀಡಿ Apply Online ಲಿಂಕ್ ಕ್ಲಿಕ್ ಮಾಡಿ. ಅದಕ್ಕೂ ಮುನ್ನ ಪಾಸ್‌ಪೋರ್ಟ್ ಸೈಜ್ ಫೋಟೋ, ಸಹಿ, ಗುರುತಿನ ಚೀಟಿ, ಜನ್ಮ ದಿನಾಂಕ ಪ್ರಮಾಣಪತ್ರ ಹಾಗೂ ಮಾರ್ಕ್ಸ್‌ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ. ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಬಳಸಿ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ ಸಬ್‌ಮಿಟ್ (Submit) ಮಾಡಿದರೆ ಕೆಲಸ ಮುಗಿಯಿತು. ಸಬ್‌ಮಿಟ್ ಮಾಡಿದ ನಂತರ ಬರುವ ಅಪ್ಲಿಕೇಶನ್ ರಿಕ್ವೆಸ್ಟ್ ನಂಬರ್ (Application Registration / Request Number) ಅನ್ನು ಕಡ್ಡಾಯವಾಗಿ ಸೇವ್ ಮಾಡಿಟ್ಟುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ https://pettige.in/en/7S4KTmEiAclt4Oz/preview ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಬಹುದು. ಇನ್ನೇಕೆ ತಡ, ಡೆಡ್‌ಲೈನ್ ಮುಗಿಯುವ ಮುನ್ನವೇ ಅರ್ಜಿ ಸಲ್ಲಿಸಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed