Iran US War: 5 ದಿನಗಳ ನಂತರ ಮತ್ತೆ ಬಾಂಬ್​ ದಾಳಿ ಪುನಾರಂಭಿಸಿದ ಅಮೆರಿಕಾ! ಟ್ರಂಪ್​​ ಬಿಗ್​ ವಾರ್ನಿಂಗ್​ / Iran–US War Escalates: US Resumes Bombing After 5 Days | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮತ್ತೆ ಬಾಂಬ್​ ದಾಳಿ ಪುನಾರಂಭಿಸಿದ ಅಮೆರಿಕಾ!


Last Updated:

ಐದು ದಿನಗಳ ವಿರಾಮದ ನಂತರ, ಅಮೆರಿಕಾ ಮತ್ತೆ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ಗೆ ಸಂಬಂಧಿಸಿದ ಗುರಿಗಳ ವಿರುದ್ಧ ಅಮೆರಿಕ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಈಗ ನಮ್ಮ ಸರದಿ’ ಎಂದು ಘರ್ಜಿಸಿದ್ದಾರೆ.

ಮತ್ತೆ ಬಾಂಬ್​ ದಾಳಿ ಪುನಾರಂಭಿಸಿದ ಅಮೆರಿಕಾ!
ಮತ್ತೆ ಬಾಂಬ್​ ದಾಳಿ ಪುನಾರಂಭಿಸಿದ ಅಮೆರಿಕಾ!

ಅಮೆರಿಕ ಇರಾನ್ (Iran US War) ಮೇಲೆ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಿದೆ. ಈ ಘಟನೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕಳೆದ ವಾರ ಬಾಂಬ್ ದಾಳಿಯನ್ನು ನಿಲ್ಲಿಸಿ ಮಾತುಕತೆಗೆ ಅವಕಾಶ ನೀಡಿದ್ದರು. ಆದರೆ ಜೋರ್ಡಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ (Missile Attack) ನಡೆಸಿದ ನಂತರ ಅಮೆರಿಕವು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ ಎಂದು ವರದಿಯಾಗಿದೆ.

ಆಕ್ಸಿಯೋಸ್ ವರದಿಯ ಪ್ರಕಾರ, ಇರಾನ್ ಒಂದು ದಿನದ ಹಿಂದೆ ಜೋರ್ಡಾನ್‌ನ ಅಮೆರಿಕದ ನೆಲೆಯನ್ನು ಗುರಿಯಾಗಿಸಿ ಕ್ಷಿಪಣಿಗಳನ್ನು ಹಾರಿಸಿತ್ತು. ಆದರೆ ಎಲ್ಲಾ ಕ್ಷಿಪಣಿಗಳನ್ನು ಮಧ್ಯ ಗಾಳಿಯಲ್ಲೇ ತಡೆಹಿಡಿಯಲಾಗಿದೆ ಎಂದು ಅಮೆರಿಕದ ಮಿಲಿಟರಿ ಹೇಳಿದೆ. ಬುಧವಾರ ನಡೆದ ಅಮೆರಿಕದ ದಾಳಿಯಲ್ಲಿ ನಾಲ್ವರು ಇರಾನಿನ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ತಿಳಿಸಿದೆ.

ಇದು ನಮ್ಮ ಸರದಿ ಎಂದ ಟ್ರಂಪ್​!

ಈ ಬೆನ್ನಲ್ಲೇ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಅಮೆರಿಕ ಇರಾನ್ ಮೇಲೆ ‘ಅತ್ಯಂತ ಬಲವಾದ’ ದಾಳಿ ನಡೆಸುವುದಾಗಿ ಹೇಳಿದರು. ‘ಈಗ ನಮ್ಮ ಸರದಿ’ ಎಂದು ಅವರು ಒತ್ತಿ ಹೇಳಿದ್ದಾರೆ. ಇರಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಮತ್ತು ಅಮೆರಿಕ ಪ್ರತೀಕಾರ ತೀರಿಸಬಾರದು ಎಂದು ಸುಮ್ಮನಾಗಿದ್ವಿ ಎಂದು ಟ್ರಂಪ್​ ಹೇಳಿದ್ದಾರೆ. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ, ಇದು ನಮ್ಮ ಸರದಿ ಎಂದು ಟ್ರಂಪ್​ ಹೇಳಿದ್ದಾರೆ.

ಇರಾನ್​ ಮೇಲೆ ಕಠಿಣವಾಗಿ ದಾಳಿ ಮಾಡುತ್ತೇವೆ ಎಂದ ಅಮೆರಿಕಾ!

ಟ್ರಂಪ್ ಹೇಳಿದಂತೆ, ‘ನಾವು ಅವರ ಮೇಲೆ ತುಂಬಾ ಕಠಿಣವಾಗಿ ದಾಳಿ ಮಾಡುತ್ತೇವೆ. ನಮಗೆ 8,500 ಮೈಲಿ ಪ್ರತಿ ಗಂಟೆ ವೇಗದಲ್ಲಿ ಐದು ರಾಕೆಟ್‌ಗಳನ್ನು ಹಾರಿಸಲಾಗಿತ್ತು. ಎಲ್ಲಾ ಐದು ರಾಕೆಟ್‌ಗಳು ನೆಲಕ್ಕೆ ಬಿದ್ದವು. ಆದರೆ ಅವರು ಗುಂಡು ಹಾರಿಸಿದ್ದಾರೆ, ಆದ್ದರಿಂದ ಇದು ನಮ್ಮ ಸರದಿ’ ಎಂದಿದ್ದಾರೆ.

ಇರಾನ್‌ನ ಅರೆ-ಅಧಿಕೃತ ತಸ್ನಿಮ್ ಸುದ್ದಿ ಸಂಸ್ಥೆಯ ಪ್ರಕಾರ, ಅಮೆರಿಕದ ಪಡೆಗಳು ಇರಾನ್‌ನ ನೈಋತ್ಯ ಫಾರ್ಸ್ ಪ್ರಾಂತ್ಯ ಮತ್ತು ಕೊಲ್ಲಿಯ ಕಿಶ್ ದ್ವೀಪವನ್ನು ಗುರಿಯಾಗಿಸಿಕೊಂಡಿವೆ. ಫಾರ್ಸ್ ಪ್ರಾಂತ್ಯದ ಕಜೆರುನ್ ನಗರದ ಹೊರವಲಯದಲ್ಲಿ ದಾಳಿಗಳು ನಡೆದಿವೆ. ಕಿಶ್ ದ್ವೀಪದಲ್ಲಿ ಕ್ಷಿಪಣಿ ದಾಳಿಯ ನಂತರ ಎರಡು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ವರದಿಯಾಗಿದೆ. ಆದರೆ ದ್ವೀಪದ ವಿಮಾನ ನಿಲ್ದಾಣ ಮತ್ತು ಪ್ರಯಾಣಿಕರ ದೋಣಿ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಆರ್ಥಿಕ ನಿರ್ಬಂಧಗಳು!

ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿದ ನಂತರ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾತನಾಡಿದ್ದಾರೆ. ಇರಾನ್ ಆಡಳಿತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಅದಕ್ಕೆ ಹಣದ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಒತ್ತಡದ ನಡುವೆ ಇರಾನ್ ಜಾಗತಿಕ ವ್ಯಾಪಾರವನ್ನು ಒತ್ತೆಯಾಳುಗಳಾಗಿ ಬಳಸಿಕೊಳ್ಳುವುದನ್ನು ಅಮೆರಿಕ ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಆರೋಪಿಸಿರುವ ಭಯೋತ್ಪಾದಕ ಚಟುವಟಿಕೆಗಳು, ಆಕ್ರಮಣಶೀಲತೆ ಮತ್ತು ದಮನಕ್ಕೆ ಹಣಕಾಸು ಒದಗಿಸಲು ಅಂತರರಾಷ್ಟ್ರೀಯ ಸಾಗಣೆಯನ್ನು ಬಳಸುವುದನ್ನು ಅಮೆರಿಕ ಇರಾನ್‌ಗೆ ಅನುಮತಿಸುವುದಿಲ್ಲ ಎಂದು ಸ್ಕಾಟ್ ಬೆಸೆಂಟ್ X ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಇದಕ್ಕೂ ಮೊದಲು ಅಮೆರಿಕದ ಖಜಾನೆ ಇಲಾಖೆ ಎರಡು ಕಂಪನಿಗಳ ಮೇಲೆ ನಿರ್ಬಂಧಗಳನ್ನು ಘೋಷಿಸಿತು. ಈ ಕಂಪನಿಗಳು IRGC ಬೆಂಬಲಿಸುವ ಆಪಾದಿತ ಸುಲಿಗೆ ಜಾಲದ ಭಾಗವಾಗಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಸುವ ಹಡಗುಗಳು ಕಡ್ಡಾಯ ಸಮುದ್ರ ವಿಮೆ ಖರೀದಿಸುವಂತೆ ಒತ್ತಾಯಿಸಿವೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಸವಾಲು ಒಡ್ಡುತ್ತಿವೆ. ಎರಡು ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದು ಜಾಗತಿಕ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed