Last Updated:
ಐಪಿಎಲ್ 2011 ರಲ್ಲಿ ಪ್ಲೇಆಫ್ಗಳನ್ನು ಪರಿಚಯಿಸಲಾಯಿತು. ಅಂದಿನಿಂದ 16 ಎಲಿಮಿನೇಟರ್ಗಳನ್ನು ಆಡಲಾಗಿದೆ. ಎಲಿಮಿನೇಟರ್ ಪಂದ್ಯಗಳನ್ನು ಪಾಯಿಂಟ್ಗಳ ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಆಡುತ್ತವೆ. ಅದಕ್ಕಾಗಿಯೇ ಎಲ್ಲರ ಗಮನ ಈ ಪಂದ್ಯದ ಮೇಲೆ ಇರುತ್ತದೆ.
ಐಪಿಎಲ್ (IPL) 2026 ರಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ ರಾಯಲ್ಸ್ (RR) ತಂಡಗಳು (Teams) ಎಲಿಮಿನೇಟರ್ (Eliminator) ನಲ್ಲಿ ಮುಖಾಮುಖಿಯಾಗಿದ್ದವು. ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು (Victory) ಸಾಧಿಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಹೊರ ಹಾಕಿತು. ಈ ಹಿಂದೆಯೂ ಹಲವು ತಂಡಗಳು ಎಲಿಮಿನೇಟರ್ನಲ್ಲಿ ತಮ್ಮ ಕನಸುಗಳನ್ನು ಭಗ್ನಗೊಳಿಸಿಕೊಂಡಿವೆ. ಐಪಿಎಲ್ ಇತಿಹಾಸ (History) ದಲ್ಲಿ ಇದುವರೆಗೆ ಅತಿ ಹೆಚ್ಚು ಎಲಿಮಿನೇಟರ್ ಪಂದ್ಯಗಳನ್ನು ಸೋತಿರುವ ತಂಡಗಳು ಆರು.
ಐಪಿಎಲ್ 2011 ರಲ್ಲಿ ಪ್ಲೇಆಫ್ಗಳನ್ನು ಪರಿಚಯಿಸಲಾಯಿತು. ಅಂದಿನಿಂದ 16 ಎಲಿಮಿನೇಟರ್ಗಳನ್ನು ಆಡಲಾಗಿದೆ. ಎಲಿಮಿನೇಟರ್ ಪಂದ್ಯಗಳನ್ನು ಪಾಯಿಂಟ್ಗಳ ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಆಡುತ್ತವೆ. ಅದಕ್ಕಾಗಿಯೇ ಎಲ್ಲರ ಗಮನ ಈ ಪಂದ್ಯದ ಮೇಲೆ ಇರುತ್ತದೆ. ಇದುವರೆಗೆ ಅತಿ ಹೆಚ್ಚು ಎಲಿಮಿನೇಟರ್ ಪಂದ್ಯಗಳನ್ನು ಸೋತಿರುವ ತಂಡಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಸ್ಟೋರಿ ಓದಿ.
ಐಪಿಎಲ್ 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ಆಗಿತ್ತು. ಇಲ್ಲಿವರೆಗೆ ಸನ್ರೈಸರ್ಸ್ ಹೈದರಾಬಾದ್ ಆರು ಬಾರಿ ಎಲಿಮಿನೇಟರ್ಗೆ ತಲುಪಿದೆ. ಹೈದರಾಬಾದ್ ಎರಡರಲ್ಲಿ ಮಾತ್ರ ಗೆದ್ದು, ನಾಲ್ಕು ಹೀನಾಯ ಸೋಲನ್ನು ಅನುಭವಿಸಿದೆ.
ಐಪಿಎಲ್ನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ. ಹಾಲಿ ಚಾಂಪಿಯನ್ಸ್ ಆರ್ಸಿಬಿ ಫೈನಲ್ ತಲುಪಿದೆ. ಆರ್ಸಿಬಿ ಐದು ಬಾರಿ ಎಲಿಮಿನೇಟರ್ನಲ್ಲಿ ಆಡಿದ್ದು, ಅವುಗಳಲ್ಲಿ ಮೂರರಲ್ಲಿ ಸೋತಿದೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್ಸಿಬಿ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಅತಿ ಹೆಚ್ಚು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡ ಕೋಲ್ಕತಾ ನೈಟ್ ರೈಡರ್ಸ್. ಮೂರು ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ಕೆಕೆಆರ್ ಕೂಡ ಐದು ಬಾರಿ ಎಲಿಮಿನೇಟರ್ ಪಂದ್ಯವನ್ನು ಆಡಿದ್ದು, ಎರಡು ಬಾರಿ ಸೋತಿದೆ.
ಕಳಪೆ ನಾಲ್ಕು ಆವೃತ್ತಿಗಳಿಂದ ಲಖನೌ ಸೂಪರ್ ಜೈಂಟ್ಸ್ ತನ್ನ ಚೊಚ್ಚಲ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಲಖನೌ ತಂಡವು ಎರಡು ಬಾರಿ ಎಲಿಮಿನೇಟರ್ ತಲುಪಿದ್ದು, ಎರಡೂ ಬಾರಿ ಸೋತಿದೆ. ಈ ಬಾರಿ 2026 ರಲ್ಲಿ ಲಖನೌ ತಂಡ ಲೀಗ್ ಹಂತದಲ್ಲೇ ಹೊರಗುಳಿದಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ತಂಡವಾಗಿರುವ ಮುಂಬೈ ಕೂಡ ಅತಿ ಹೆಚ್ಚು ಎಲಿಮಿನೇಟರ್ ಪಂದ್ಯಗಳನ್ನು ಸೋತಿದೆ. ಮುಂಬೈ ತಂಡವು ಐದು ಬಾರಿ ಐಪಿಎಲ್ ಎಲಿಮಿನೇಟರ್ನಲ್ಲಿ ಆಡಿದ್ದು, ಎರಡು ಬಾರಿ ಸೋತಿದೆ.
ಐಪಿಎಲ್ ಉದ್ಘಾಟನಾ ಆವೃತ್ತಿ 2008 ರಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿತ್ತು. ಇದಾದ ಬಳಿಕ ಇನ್ನೂ ರಾಜಸ್ಥಾನ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ರಾಜಸ್ಥಾನ ಎರಡು ಬಾರಿ ಎಲಿಮಿನೇಟರ್ನಲ್ಲಿ ಸೋತಿದೆ. ಆದಾಗ್ಯೂ, ರಾಜಸ್ಥಾನ ಐಪಿಎಲ್ 2026 ರಲ್ಲಿ ಎಲಿಮಿನೇಟರ್ ಗೆದ್ದು ದಾಖಲೆಯನ್ನು ಸರಿ ಮಾಡಿಕೊಂಡಿದೆ.
IPL 2026: ಐಪಿಎಲ್ ಎಲಿಮಿನೇಟರ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡಗಳಿವು! ಹಾಲಿ ಚಾಂಪಿಯನ್ ಆರ್ಸಿಬಿ ಎಷ್ಟು ಮ್ಯಾಚ್ ಸೋತಿದೆ ಗೊತ್ತಾ?













