Last Updated:
ಸೆಮಿಫೈನಲ್ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ಗಳಿಸಿತ್ತು. 135 ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 17 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಬಾಂಗ್ಲಾದೇಶ ವಿರುದ್ಧದ (India vs Bangladesh) ನಿರ್ಣಾಯಕ ಪಂದ್ಯದಲ್ಲಿ ಭಾರತ ಮಹಿಳಾ ತಂಡ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್ (Semifinal) ಪ್ರವೇಶಿಸುವ ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯ ಎರಡೂ ತಂಡಗಳಿಗೂ ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ಗಳಿಸಿತ್ತು. 135 ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 16.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
137 ರನ್ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಶಫಾಲಿ ಅಬ್ಬರದಿಂದ ಮೊದಲ ವಿಕೆಟ್ ಜೊತೆಯಾಟದಲ್ಲಿ 31 ರನ್ ಸೇರಿಸಿತು. ಆದರೆ 3ನೇ ಓವರ್ನಲ್ಲೇ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (8) ಇಂದೂ ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಯಾಸ್ತಿಕಾ ಭಾಟಿಯಾ ಹಾಗೂ ಶಫಾಲಿ ವರ್ಮಾ 45 ರನ್ ಸೇರಿಸಿದರು. ಶಫಾಲಿ ವರ್ಮಾ 34 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 53 ರನ್ಗಳಿಸಿ ನಹಿದಾ ಅಖ್ತರ್ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು.
ಶಫಾಲಿ ವಿಕೆಟ್ ಬಳಿಕ ಭಾರತದ ರನ್ಗತಿಗೆ ಕಡಿವಾಣ ಬಿದ್ದಿತು. 12ನೇ ಓವರ್ನಲ್ಲಿ ಯಾಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ 23 ರನ್ಗಳಸಿ ರೀತು ಮೋನಿ ಬೌಲಿಂಗ್ನಲ್ಲಿ ರಬಾಯಾ ಖಾನ್ಗೆ ಕ್ಯಾಚ್ ನೀಡಿ ಔಟ್ ಆದರು. ಸ್ಫೋಟಕ ಆಟಕ್ಕೆ ಹೆಸರಾದ ರಿಚಾ ಕೂಡ ಇಂದೂ ರನ್ಗಳಿಸಲು ಪರದಾಟಿ 12 ಎಸೆತಗಳಲ್ಲಿ ಕೇವಲ 10 ರನ್ಗಳಿಸಿ ರಬಾಯಾ ಖಾನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆದರು.
ನಂತರ ಒಂದಾದ ಜಮೀಮಾ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ 5ನೇ ವಿಕೆಟ್ಗೆ 30 ರನ್ಗಳ ಜೊತೆಯಾಟ ನಡೆಸಿ ತಂಡವನ್ನ ಗೆಲುವಿನ ಸನಿಹ ತಂದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಜೆಮೀಮಾ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 26 ರನ್ಗಳಿಸಿ ಗೆಲುವಿಗೆ 9 ರನ್ಗಳ ಅಗತ್ಯವಿದ್ದಾಗ ಔಟ್ ಆದರು. ಹರ್ಮನ್ ಎಸೆತಗಳಲ್ಲಿ ರನ್ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ಗಳಿಸಿತ್ತು. ಜುವೇರಿಯಾ ಫಿರ್ದೌಸ್ 31 ಎಸೆತಗಳಲ್ಲಿ 33, ಶೋಭನಾ ಮೊಸ್ಟರಿ 26 ಎಸೆತಗಳಲ್ಲಿ 22, ನಿಗರ್ ಸುಲ್ತಾನ 27 ಎಸೆತಗಳಲ್ಲಿ 32, ಶರ್ಮಿನ್ ಅಖ್ತರ್ 10, ಶೋರ್ನಾ ಅಖ್ತರ್ 13 ರನ್ಗಳಿಸಿದ್ದರು.
ಭಾರತದ ಪರ ರಾಧಾ ಯಾದವ 28ಕ್ಕೆ3, ಶ್ರೀಚರಣಿ 21ಕ್ಕೆ2, ನಂದನಿ ಶರ್ಮಾ 32ಕ್ಕೆ1 ಹಾಗೂ ರೇಣುಕಾ ಸಿಂಗ್ ಠಾಕೂರ್ 21ಕ್ಕೆ1 ವಿಕೆಟ್ ಪಡೆದು ಮಿಂಚಿದ್ದರು.
Jun 25, 2026 10:20 PM IST













