Indian Railways: ಈ ವಿಚಾರದಲ್ಲಿ ದಕ್ಷಿಣ ಭಾರತವೇ ಬೆಸ್ಟ್! ಯಾಕೆ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಾರತೀಯ ರೈಲ್ವೆ ಇಲಾಖೆ


Last Updated:

ಎಸಿ ಕೋಚ್​​ನಲ್ಲಿ ಪ್ರಯಾಣಿಸುತ್ತಿರುವ ವಿಚಿತ್ರ ಬುದ್ಧಿ ಬೆಳಕಿಗೆ ಬಂದಿದೆ. ಟಿಕೆಟ್ ಖರೀದಿ ಮಾಡಿದ ಮಾತ್ರಕ್ಕೆ ರೈಲು ಕೋಚ್ ಅನ್ನು ತಮ್ಮ ಮನೆಯಂತೆ ಹಲವು ಭಾವಿಸುತ್ತಾರೆ. ತಮ್ಮ ಜರ್ನಿ ಮುಗಿಯುತ್ತಿದ್ದಂತೆಯೇ ರೈಲ್ವೇ ನೀಡಿದ್ದ ಟವೆಲ ಹಾಗೂ ಬೆಡ್​​ಶೀಟ್ ಗಳನ್ನು ಬಿಡದೆ ಸೂಟ್​​ಕೇಸ್​ನಲ್ಲಿಟ್ಟುಕೊಂಡು ಎಸ್ಕೇಪ್ ಆಗ್ತಾರೆ.

ಭಾರತೀಯ ರೈಲ್ವೆ ಇಲಾಖೆ
ಭಾರತೀಯ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಇಲಾಖೆಯ ಎಸಿ ಕೋಚ್ಗಳಲ್ಲಿ (Indian Railways) ಪ್ರಯಾಣ ಮಾಡುವವರು ಅಂದರೆ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಇರುವವರು ಹಾಗೂ ವಿದ್ಯಾವಂತರು ಅಂತ ಅಂದುಕೊಳ್ಳುತ್ತೇವೆ. ಆದರೆ ಭಾರತ ರೈಲ್ವೆಯಲ್ಲಿ ನಡೆಯುತ್ತಿರುವ ಕಳ್ಳತನ ಪರಂಪರೆ ಹಲವರಿಗೆ ಶಾಕ್ (Theft Cases) ನೀಡುತ್ತಿದೆ. ಪ್ರಯಾಣ ಮುಗಿಯುತ್ತಿದ್ದಂತೆ ರೈಲ್ವೆ ಸಿಬ್ಬಂದಿ ನೀಡಿದ ಬೆಡ್​​ಶೀಟ್, ಟವೆಲ್, ತಲೆದಿಂಬುಗಳನ್ನು ವಾಪಸ್ ನೀಡದೆ ತಮ್ಮ ಬ್ಯಾಗ್​​​ಗಳಲ್ಲಿ ಪ್ಯಾಕ್ ಮಾಡಿಕೊಂಡು ಹೋಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಸರ್ವೆ ಅನ್ವಯ, ಜನವರಿ 2022ರಿಂದ ಮೇ 2026ರ ಅವಧಿಯಲ್ಲಿ ದೇಶದಾದ್ಯಂತ ಎಸಿ ರೈಲುಗಳಲ್ಲಿ (AC Coach Train) 1.27 ಕೋಟಿಗೂ ಅಧಿಕ ವಸ್ತುಗಳು ಕಳ್ಳತನವಾಗಿದೆ. ಅಂದರೆ ಪ್ರತಿ ದಿನ ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಒಬ್ಬರು ಯಾವುದೋ ಒಂದು ವಸ್ತುವನ್ನು ಕಳ್ಳತನ ಮಾಡುತ್ತಿದ್ದಾರೆ.

ರೈಲ್ವೇ ಇಲಾಖೆ 104 ಕೋಟಿ ರೂಪಾಯಿ ನಷ್ಟ!

ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ರೈಲ್ವೆ ಲೆನಿನ್ ಕಳ್ಳತನದಿಂದ ಕಾಂಟ್ರಾಕ್ಟರ್​ಗಳು ಸುಮಾರು 104.51 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರೆ. ಆದರೆ ಈ ನಷ್ಟವನ್ನು ಕಾಂಟ್ರಾಕ್ಟರ್ ಗಳು ತಾವು ಭರಿಸುತ್ತಿಲ್ಲ. ಪ್ರತಿದಿನ ಕೇವಲ 700 ರೂಪಾಯಿಗೆ ಕೂಲಿ ಮಾಡುವ ಅಮಾಯಕ ಎಸಿ ಕೋಚ್ ಅಟೆಂಡರ್​ಗಳ ಸಂಬಳದಿಂದ ರಿಕವರಿ ಮಾಡುತ್ತಿದ್ದಾರೆ. ತಮ್ಮ ಕಣ್ಣ ಎದುರೇ ನಷ್ಟ ಅನುಭವಿಸುತ್ತಿದ್ದೇವೆ ಎಂದು ಅಟೆಂಡರ್​​ಗಳು ತಮ್ಮ ಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಹೆಚ್ಚು ಕಳ್ಳತನ ಮಾಡಿದ್ದು ಇದನ್ನೇ!

ನಾಲ್ಕು ವರ್ಷಗಳಲ್ಲಿ ಕಾಣೆಯಾದ 1.27 ಕೋಟಿ ವಸ್ತುಗಳ ಪಟ್ಟಿಯನ್ನು ನೋಡಿದರೆ ಪ್ರಯಾಣಿಕರು ಯಾವ ವಸ್ತುವನ್ನು ಕಳ್ಳತನ ಮಾಡುತ್ತಾರೆ ಅಂತ ತಿಳಿಯುತ್ತದೆ.

  • ಫೇಸ್ ಟವಲ್​​: 46.54 ಲಕ್ಷ
  • ಬೆಡ್ಶೀಟ್: 41.13 ಲಕ್ಷ
  • ತಲೆದಿಂಬು ಕವರ್​: 23.59 ಲಕ್ಷ
  • ಬ್ಲಾಂಕೆಟ್: 12.95 ಲಕ್ಷ
  • ತಲೆದಿಂಬು: 2.76 ಲಕ್ಷ
ಅತೀ ಹೆಚ್ಚು ಕಳ್ಳತನ ನಡೆಯೋದು ಇದೇ ವಿಭಾಗದಲ್ಲಿ!

ದೇಶಾದ್ಯಂತದ ಎಲ್ಲಾ ಕಳ್ಳತನಗಳಲ್ಲಿ ಕೇವಲ 10 ವಿಭಾಗಗಳು ಶೇಕಡಾ 67 ರಷ್ಟು ಪಾಲನ್ನು ಹೊಂದಿವೆ ಎಂಬುದು ಗಮನಾರ್ಹ ಸಂಗತಿ.

  • ರಾಜಸ್ಥಾನ ಬಿಕಾನೆರ್: 25.76 ಲಕ್ಷ ವಸ್ತುಗಳ ಕಳ್ಳತನದೊಂದಿಗೆ ದೇಶಕ್ಕೆ ನಂಬರ್ ಒನ್. 2022ಕ್ಕೆ ಹೋಲಿಕೆ ಮಾಡಿದರೆ ಕಳ್ಳತನ ಪ್ರಕರಣಗಳು ಶೇಕಡಾ 4ರಷ್ಟು ಹೆಚ್ಚಾಗಿದೆ.
  • ರಾಂಚಿ: 9.31 ಲಕ್ಷ
  • ದೆಹಲಿ: 8.21 ಲಕ್ಷ
  • ಮುಂಬೈ: 8.17 ಲಕ್ಷ
  • ಜೋಧ್ಪುರ: 8.09 ಲಕ್ಷ
  • ಅಹಮಾದಾಬಾದ್: 6.94 ಲಕ್ಷ
  • ದಾನಾಪುರ್: 5.72 ಲಕ್ಷ
ದಕ್ಷಿಣ ಭಾರತವೇ ಗ್ರೇಟ್​​!

ಕಳ್ಳತನ ಪ್ರಕರಣಗಳಲ್ಲಿ ಉತ್ತರ ಭಾರತಕ್ಕೆ ಹೋಲಿಕೆ ಮಾಡಿದೆ ದಕ್ಷಿಣ ಭಾರತವನ್ನು ಗ್ರೇಟ್ ಅಂತ ಕರೆಯಬಹುದು. ಏಕೆಂದರೆ ತಿರುಚಿರಾಪಳ್ಳಿ ಮತ್ತು ಪಾಲಕ್ಕಾಡ್ ವಿಭಾಗಗಳಿಂದ ಒಂದೇ ಒಂದು ಲಿನಿನ್ ವಸ್ತುವೂ ಕದ್ದಿರುವ ವರದಿಯಾಗಿಲ್ಲ. ಅದೇ ರೀತಿ, ದೆಹಲಿಯಲ್ಲಿ ಶೇಕಡಾ 79 ಮತ್ತು ಅಹಮದಾಬಾದ್ ನಲ್ಲಿ ಶೇಕಡಾ 83 ರಷ್ಟು ಕಳ್ಳತನ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ನ್ಯೂಸ್​18 ಇಂಗ್ಲೀಷ್ ವರದಿ ಮಾಡಿದೆ.

ಕಠಿಣ ಕ್ರಮಗಳು!

ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ, ಕಳ್ಳತನ ತಡೆಗಟ್ಟಲು ಹೊಸ ತಂತ್ರಗಳನ್ನು ಜಾರಿಗೆ ತರುತ್ತಿದೆ. ರೈಲ್ವೆ ಆಸ್ತಿ ಕಾಯ್ದೆಯ ಪ್ರಕಾರ, ಬೆಡ್​​ಶೀಟ್ ಕಳ್ಳತನ ಜಾಮೀನು ರಹಿತ ಅಪರಾಧವಾಗಿದೆ. ಅನುಮಾನ ಬಂದರೆ, ಪ್ರಯಾಣಿಕರ ಲಗೇಜ್ ಪರಿಶೀಲಿಸುವ ಅಧಿಕಾರ ಆರ್‌ಪಿಎಫ್ ಪೊಲೀಸರಿಗೆ ಇದೆ. ಉಳಿದಂತೆ ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ಹೆಚ್ಚಿಸುವುದರ ಜೊತೆಗೆ, ಗ್ಯಾಸ್ ಸಿಲಿಂಡರ್‌ಗಳಂತೆ ಲಿನಿನ್ ವಿತರಣೆಯನ್ನು ಪತ್ತೆಹಚ್ಚಲು ಕೋಚ್ ಮಿತ್ರ ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ. ಪ್ರಯಾಣಿಕರು ಇಳಿಯುವ 30 ನಿಮಿಷಗಳ ಮೊದಲು ಬೆಡ್‌ರೋಲ್‌ಗಳನ್ನು ಹಿಂತಿರುಗಿಸಬೇಕು ಎಂಬ ನಿಬಂಧನೆಯೊಂದಿಗೆ ಪ್ಯಾಕೆಟ್‌ಗಳನ್ನು ಮುದ್ರಿಸಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed