IND vs ZIM: ಜಿಂಬಾಬ್ವೆ ವಿರುದ್ಧ ಅಭಿಷೇಕ್ ದಯನೀಯ ವೈಫಲ್ಯ! ಟಿ20ಯಲ್ಲಿ ಅನಗತ್ಯ ದಾಖಲೆ ಸೃಷ್ಟಿಸಿದ ಸ್ಪೋಟಕ ಬ್ಯಾಟರ್ | ಕ್ರೀಡಾ ಸುದ್ದಿ | ACTPnews

ಅಭಿಷೇಕ್ ಶರ್ಮಾ


Last Updated:

ಜಿಂಬಾಬ್ವೆ ಪ್ರವಾಸದಲ್ಲಿ ಅಭಿಷೇಕ್ ಶರ್ಮಾ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಈ ನಿರಾಶಾದಾಯಕ ಪ್ರದರ್ಶನದಿಂದ ಅವರ ಹೆಸರಿನಲ್ಲಿ ಅನಗತ್ಯ ದಾಖಲೆ ಸೃಷ್ಟಿಯಾಗಿದೆ.

ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ

ಭಾರತ (India) ಮತ್ತು ಜಿಂಬಾಬ್ವೆ (Zimbabwe) ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಿತು. ಈ ಸರಣಿಯನ್ನು ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದಲ್ಲಿ ಭಾರತ ತಂಡದ ಗೆದ್ದಿದೆ. ಆದರೆ, ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) ಚೆನ್ನಾಗಿ ಆಡಲಿಲ್ಲ. ಅವರಿಗೆ ಹೆಚ್ಚು ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಈ ಸರಣಿಯಲ್ಲಿ ಅವರು ಫುಲ್ ಸೈಲೆಂಟ್ ಆಗಿದ್ದರು. ಯಾವುದೇ ಪಂದ್ಯದಲ್ಲೂ ಬಿಗ್ ಇನ್ನಿಂಗ್ಸ್ ಆಡಲಿಲ್ಲ. ಪರಿಣಾಮ ಅಭಿಷೇಕ್‌ ಹೆಸರಿನಲ್ಲಿ ಅನಗತ್ಯ ದಾಖಲೆ (Unnecessary Record) ಸೃಷ್ಟಿಯಾಗಿದೆ.

ಅಭಿಷೇಕ್ ಶರ್ಮಾ ಭಾರತದ ಅಗ್ರ ಬ್ಯಾಟರ್​​ಗಳಲ್ಲಿ ಕನಿಷ್ಠ ಮೂರು ಪಂದ್ಯಗಳ ಯಾವುದೇ ಟಿ20 ಸರಣಿಯಲ್ಲಿ ಅತಿ ಕಡಿಮೆ ರನ್ ಗಳಿಸಿದವರ ಪಟ್ಟಿಗೆ ಸೇರಿದ್ದಾರೆ. ಇದಕ್ಕೂ ಮೊದಲು, 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೇಯಸ್ ಅಯ್ಯರ್ ಕೇವಲ 14 ರನ್ ಗಳಿಸಿ ಈ ದಾಖಲೆಯನ್ನು ಹೊಂದಿದ್ದರು. ಅಭಿಷೇಕ್ ಈ ಸರಣಿಯಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 11 ರನ್ ಮಾತ್ರ ಗಳಿಸಿದ್ದಾರೆ.

ಅನಗತ್ಯ ದಾಖಲೆ

ಅಭಿಷೇಕ್ ಶರ್ಮಾ ನಾಲ್ಕು ಟಿ20 ಪಂದ್ಯಗಳಲ್ಲಿ ಸತತವಾಗಿ ಕಡಿಮೆ ರನ್​​ಗಳಿಗೆ ಔಟಾದ ನಾಲ್ಕನೇ ಭಾರತೀಯ ಆಟಗಾರರಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿ ಪ್ರಾರಂಭವಾಗುವ ಮುನ್ನ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಕೇವಲ 3 ರನ್‌ಗಳಿಗೆ ಔಟ್ ಆಗಿದ್ದರು. ಜಿಂಜಾಬ್ವೆ ಪ್ರವಾಸದಲ್ಲಿ ಮೂರು ಪಂದ್ಯಗಳಲ್ಲಿ ಕ್ರಮವಾಗಿ 1, 8, ಮತ್ತು 2 ರನ್ ಗಳಿಸಿದ್ದಾರೆ.

ಮೂರು ಪಂದ್ಯ ಟಿ20 ಸರಣಿ ಕಡಿಮೆ ರನ್ ಗಳಿಸಿದ ಭಾರತೀಯರು

  • 11 ರನ್‌ಗಳು – ಅಭಿಷೇಕ್ ಶರ್ಮಾ vs ಜಿಂಬಾಬ್ವೆ (2026)
  • 14 ರನ್‌ಗಳು – ಶ್ರೇಯಸ್ ಅಯ್ಯರ್ vs ವೆಸ್ಟ್ ಇಂಡೀಸ್ (2019)
  • 15 ರನ್‌ಗಳು – ಹಾರ್ದಿಕ್ ಪಾಂಡ್ಯ vs ನ್ಯೂಜಿಲೆಂಡ್ (2017)
  • 15 ರನ್‌ಗಳು – ಕೆಎಲ್ ರಾಹುಲ್ vs ಇಂಗ್ಲೆಂಡ್ (2021)
  • 17 ರನ್‌ಗಳು – ದಿನೇಶ್ ಕಾರ್ತಿಕ್ vs ಆಸ್ಟ್ರೇಲಿಯಾ (2022)
  • 17 ರನ್‌ಗಳು – ರುತುರಾಜ್ ಗಾಯಕ್ವಾಡ್ vs ದಕ್ಷಿಣ ಆಫ್ರಿಕಾ (2022)
  • 18 ರನ್‌ಗಳು – ದೀಪಕ್ ಹೂಡಾ vs ಶ್ರೀಲಂಕಾ (2024)
ಭಾರತಕ್ಕೆ ಸರಣಿ ಗೆಲುವು

ಭಾರತ ತಂಡವು ಎರಡು ಸರಣಿಗಳಲ್ಲಿ ಸತತವಾಗಿ ಸೋತಿದ್ದರೂ, ಈಗ ಜಿಂಬಾಬ್ವೆಯ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು 3-0ರಿಂದ ಗೆದ್ದಿದೆ. ಕೊನೆಯ ಪಂದ್ಯದಲ್ಲಿ ಭಾರತ 35 ರನ್‌ಗಳಿಂದ ಗೆದ್ದು, ಜಿಂಬಾಬ್ವೆಯನ್ನು ಸಂಪೂರ್ಣವಾಗಿ ಸೋಲಿಸಿತು.

ಮೊದಲು ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಸರಣಿ ಸೋಲನ್ನು ಅನುಭವಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ತಂಡವು ಈಗ ಮತ್ತೆ ತನ್ನ ಹಳೆಯ ಫಾರ್ಮ್‌ಗೆ ಮರಳಿದೆ. ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟದಲ್ಲಿ 192 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 7 ವಿಕೆಟ್ ನಷ್ಟದಲ್ಲಿ ಕೇವಲ 157 ರನ್ ಮಾತ್ರ ಗಳಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed