ರೋಹಿತ್, ವಿರಾಟ್, ನಾಯಕ ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಸೇರಿದಂತೆ ಟೀಮ್ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಪಡೆಯೊಂದಿಗೆ ಕಣಕ್ಕಿಳಿಯುತ್ತಿದೆ. ವೇಗಿ ಜಸ್ಪ್ರೀತ್ ಬುಮ್ರಾ ದೀರ್ಘ ಸಮಯದ ನಂತರ ಏಕದಿನ ಸ್ವರೂಪಕ್ಕೆ ಮರಳುತ್ತಿದ್ದಾರೆ. 2023 ರ ವಿಶ್ವಕಪ್ ಫೈನಲ್ ನಂತರ ಅವರು ಮೊದಲ ಬಾರಿಗೆ ODIಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಂ ದುಬೆ ಕೂಡ ಎರಡು ವರ್ಷಗಳ ನಂತರ 50 ಓವರ್ಗಳ ಪಂದ್ಯದಲ್ಲಿ ಆಡುತ್ತಿದ್ದಾರೆ. ಹಾರ್ದಿಕ್ ಬದಲಿಗೆ ತಂಡ ಸೇರಿದ್ದ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯದ ಕಾರಣದಿಂದ ಹೊರಬಿದ್ದಿದ್ದರಿಂದ ದುಬೆಗೆ ಅವಕಾಶ ಸಿಕ್ಕಿದೆ.
ಬಾಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಕಳೆದ ಅಫ್ಘಾನ್ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಗುರ್ನೂರ್ ಬ್ರಾರ್ ಹಾಗೂ ಪ್ರಸಿದ್ಧ್ ಕೃಷ್ಣ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ. ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಆಲ್ರೌಂಡರ್ ವಿಭಾಗದಲ್ಲಿ ಅವಕಾಶ ಪಡೆದಿದ್ದು, ತಂಡದಲ್ಲಿರುವ ಸ್ಪಿನ್ ಆಯ್ಕೆಗಳಾಗಿದ್ದಾರೆ. ತಂಡದಲ್ಲಿ ಒಬ್ಬೇ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದೆ ಭಾರತ ಇಂದು ಕಣಕ್ಕಿಳಿಯುತ್ತಿದೆ.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತದ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಭ್ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್ ಪ್ಲೇಯಿಂಗ್ XI: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆ), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ (ODI) ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡವು ಒಟ್ಟಾರೆ ಮೇಲುಗೈ ಸಾಧಿಸಿದೆ. ಒಟ್ಟು 110 ಪಂದ್ಯಗಳಲ್ಲಿ ಭಾರತ 61 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಇಂಗ್ಲೆಂಡ್ 44ರಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳು ಟೈ ಆಗಿವೆ. 3 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಒಟ್ಟು ಆಡಿದ ಪಂದ್ಯಗಳು: 66
ಮೊದಲು ಬ್ಯಾಟಿಂಗ್ ಮಾಡಿದ ತಂಡದ ಗೆಲುವು: 28
ಮೊದಲು ಬೌಲಿಂಗ್ (ಚೇಸಿಂಗ್) ಮಾಡಿದ ತಂಡದ ಗೆಲುವು: 31
ಫಲಿತಾಂಶ ರಹಿತ ಪಂದ್ಯಗಳು: 7
ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್: 235 ರನ್
ಎರಡನೇ ಇನ್ನಿಂಗ್ಸ್ನ ಸರಾಸರಿ ಸ್ಕೋರ್: 188 ರನ್
ಗರಿಷ್ಠ ತಂಡದ ಮೊತ್ತ: 408/9 – ಇಂಗ್ಲೆಂಡ್ vs ನ್ಯೂಜಿಲೆಂಡ್ ವಿರುದ್ಧ (2015)
ಕನಿಷ್ಠ ತಂಡದ ಮೊತ್ತ: 70/10 – ಆಸ್ಟ್ರೇಲಿಯಾ vs ಇಂಗ್ಲೆಂಡ್ 1977
ಯಶಸ್ವಿ ಗರಿಷ್ಠ ಚೇಸಿಂಗ್: 332/7 – ಇಂಗ್ಲೆಂಡ್ vs ಪಾಕಿಸ್ತಾನದ













