Last Updated:
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಭಾರೀ ಹಿನ್ನಡೆಯಾಗಿದೆ. ಐಪಿಎಲ್ 2026 ರ ಬಳಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟ ನೋಡಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಐಪಿಎಲ್ (IPL) 2026 ರ ಟೂರ್ನಿ ಮುಕ್ತಾಯಗೊಂಡಿದೆ. ಈಗ ಟೀಮ್ ಇಂಡಿಯಾ (Team India) ಆಟಗಾರರು ಅಫ್ಘಾನಿಸ್ತಾನ (Afghanistan) ವಿರುದ್ಧದ ಸರಣಿ (Series) ಗೆ ತಯಾರಿಯಲ್ಲಿ ನಿರತರಾಗಿದ್ದಾರೆ. ಜೂನ್ 6 ರಂದು ಏಕೈಕ ಟೆಸ್ಟ್ (Test) ಪಂದ್ಯ ನಡೆಯಲಿದ್ದು, ಜೂನ್ 13 ರಂದು ಏಕದಿನ (ODI) ಸರಣಿ ಆರಂಭವಾಗಲಿದೆ. ಏಕದಿನ ಸರಣಿ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗಲೇ, ಟೀಮ್ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭಾರತದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ನ್ಯೂಸ್ 18 ಹಿಂದಿ ವರದಿ ಪ್ರಕಾರ, ವಿರಾಟ್ ಕೊಹ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಪರಿಣಾಮ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ರನ್ ಮಷಿನ್ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಐಪಿಎಲ್ 2026 ರ ಬಳಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟ ನೋಡಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ.
ವಿರಾಟ್ ಕೊಹ್ಲಿ ಬಹಳ ದಿನಗಳ ನಂತರ ಟೀಮ್ ಇಂಡಿಯಾ ಪರ ಆಡಲು ತಯಾರಿ ನಡೆಸುತ್ತಿದ್ದರು. ಆದರೆ, ಈಗ ಗಾಯಗೊಂಡಿರುವ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಐಪಿಎಲ್ 2026 ರ ಫೈನಲ್ ಪಂದ್ಯದ ಕೊನೆಯ ಓವರ್ಗಳಲ್ಲಿ ಕೊಹ್ಲಿ ಓಡುವಾಗ ಅಸ್ವಸ್ಥತೆ ಅನುಭವಿಸುತ್ತಿರುವಂತೆ ಕಂಡುಬಂದಿತು. ಆದರೆ ಅವರು ಹಿಂದೆ ಸರಿಯದೆ
ತಂಡವನ್ನು ಗೆಲುವಿನತ್ತ ಕೊಂಡೊಯ್ದಿದರು.
ಐಪಿಎಲ್ 2026 ರಲ್ಲಿ ಚಾಂಪಿಯನ್ ಆರ್ಸಿಬಿ ಪರ ಆಡುವಾಗ ವಿರಾಟ್ ಕೊಹ್ಲಿ ಸಾಕಷ್ಟು ರನ್ ಗಳಿಸುತ್ತಿದ್ದರು. ಫೈನಲ್ ಪಂದ್ಯದಲ್ಲಿ ಅವರು ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ಆರ್ಸಿಬಿ ಎರಡನೇ ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊಹ್ಲಿ ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರು 16 ಪಂದ್ಯಗಳಲ್ಲಿ 675 ರನ್ಗಳನ್ನು ಗಳಿಸಿದರು. ಸರಾಸರಿ 65.25 ಮತ್ತು 165.85 ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟಿಂಗ್ ಮಾಡಿದರು.
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್, ಕುಲದೀಪ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಹಾರ್ದಿಕ್ ಪಾಂಡ್ಯ.
ಭಾರತ vs ಅಫ್ಘಾನಿಸ್ತಾನ ಪೂರ್ಣ ವೇಳಾಪಟ್ಟಿ
- ಟೆಸ್ಟ್ ಪಂದ್ಯ: ಜೂನ್ 6 ರಿಂದ, ನ್ಯೂ ಚಂಡೀಗಢ, ಬೆಳಿಗ್ಗೆ 9.30 ಗಂಟೆ
- ಮೊದಲ ಏಕದಿನ ಪಂದ್ಯ: ಜೂನ್ 14, ಧರ್ಮಶಾಲಾ, ಮಧ್ಯಾಹ್ನ 1.30 ಗಂಟೆ
- ಎರಡನೇ ಏಕದಿನ ಪಂದ್ಯ: ಜೂನ್ 17, ಲಕ್ನೋ, ಮಧ್ಯಾಹ್ನ 1.30 ಗಂಟೆ
- ಮೂರನೇ ಏಕದಿನ ಪಂದ್ಯ: ಜೂನ್ 20, ಚೆನ್ನೈ, ಮಧ್ಯಾಹ್ನ 1.30 ಗಂಟೆ
Jun 04, 2026 11:24 AM IST













