Last Updated:
ಮಿಷನ್ 2029ಕ್ಕೆ ಬಿಜೆಪಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ತನ್ನ ಸಂಘಟನಾ ಬಲವನ್ನು ಬಲಪಡಿಸಲು, ಬಿಜೆಪಿ ತನ್ನ ಕೇಂದ್ರ ರಚನೆಯಲ್ಲಿ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಇದೀಗ ಪಕ್ಷದ ಹೈಕಮಾಂಡ್ ಐದು ಪ್ರಮುಖ ರಂಗಗಳಿಗೆ ಹೊಸ ಉಸ್ತುವಾರಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ಭಾರತೀಯ ಜನತಾ ಪಕ್ಷ (BJP) ಈಗಾಗಲೇ ಮುಂದಿನ ಚುನಾವಣೆಗೆ (Election) ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಬಿಜೆಪಿ ಇದೀಗ ತನ್ನ ಪ್ರಮುಖ ರಂಗಗಳಿಗೆ ಹೊಸ ಉಸ್ತುವಾರಿಗಳನ್ನು (Incharge) ಘೋಷಿಸಿದೆ. ಪಕ್ಷವು ಯುವಜನರು, ಮಹಿಳೆಯರು, ಪರಿಶಿಷ್ಟ ಜಾತಿ (ಎಸ್‌ಸಿ), ಹಿಂದುಳಿದ ವರ್ಗ (ಒಬಿಸಿ) ಮತ್ತು ರೈತರ ರಂಗಗಳ ಜವಾಬ್ದಾರಿಯನ್ನು ವಿವಿಧ ನಾಯಕರಿಗೆ ವಹಿಸಿದೆ. ಈ ನೇಮಕಾತಿಗಳು ಪಕ್ಷದ ಸಾಂಸ್ಥಿಕ ರಚನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎನ್ನಲಾಗಿದೆ.














