Hockey India: ಭಾರತ ತಂಡದ ಹೊಸ ಜೆರ್ಸಿ ವಿವಾದ! ಕೇಸರಿ ಬಣ್ಣದ ಆಯ್ಕೆಗೆ ಇದೇನಾ ಕಾರಣ? | ಕ್ರೀಡಾ ಸುದ್ದಿ | ACTPnews

ಹಾಕಿ ಇಂಡಿಯಾ


Last Updated:

ಆಗಸ್ಟ್ 15ರಿಂದ ಶುರುವಾಗುವ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾ ತಂಡದ ಹೊಸ ಜರ್ಸಿ ಬಿಡುಗಡೆ ಮಾಡಿದೆ. ಕೇಸರಿ ಬಣ್ಣದ ಈ ಜರ್ಸಿ ಬಗ್ಗೆ ಬಹಳ ವಿವಾದ ಸೃಷ್ಟಿಸಿದೆ. ಈಗ ಹಾಕಿ ಇಂಡಿಯಾ ಇದಕ್ಕೆ ಸ್ಪಷ್ಟನೆ ನೀಡಿದೆ.

ಹಾಕಿ ಇಂಡಿಯಾ
ಹಾಕಿ ಇಂಡಿಯಾ

ಆಗಸ್ಟ್ 15ರಿಂದ 30ರವರೆಗೆ ಬೆಲ್ಜಿಯಂ (Belgium) ಮತ್ತು ನೆದರ್‌ಲ್ಯಾಂಡ್ಸ್‌(Netherlandsನಲ್ಲಿ ನಡೆಯುವ ಹಾಕಿ ವಿಶ್ವಕಪ್‌(Hockey World Cup)ಗಾಗಿ ಹಾಕಿ ಇಂಡಿಯಾ (India) ಈಗಾಗಲೇ ಪುರುಷ ಮತ್ತು ಮಹಿಳಾ ತಂಡಗಳನ್ನು ಘೋಷಿಸಿದೆ. ಈಗ ಹಾಕಿ ಇಂಡಿಯಾ ಕೇಸರಿ (Orange) ಬಣ್ಣದ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಹೊಸ ರಿವೀಲ್ ಆಗುತ್ತಿದ್ದಂತೆ ವಿವಾದ ಎದ್ದಿದೆ. ಮಾಜಿ ನಾಯಕ ವೀರೆನ್ ರಸ್ಕ್ವಿನ್ಹಾ (Viren Rasquinha) ಇದನ್ನು ವಿರೋಧಿಸಿ, ಭಾರತೀಯ ಹಾಕಿಯ ಸಾಂಪ್ರದಾಯಿಕ ನೀಲಿ ಬಣ್ಣವನ್ನು ಏಕೆ ಬದಲಾಯಿಸಬೇಕು ಎಂದು ಪ್ರಶ್ನಿಸಿದ್ದಾರೆ. ಹಾಕಿ ಇಂಡಿಯಾ ಇದಕ್ಕೆ ಉತ್ತರಿಸಿದೆ. 

ಭಾರತ ಹಾಕಿ ತಂಡದ ಹೊಸ ಕೇಸರಿ ಬಣ್ಣದ ಜರ್ಸಿ ಬಗ್ಗೆ ವಿವಾದ ಎದ್ದಿದ್ದರಿಂದ, ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಪಿಟಿಐಗೆ ಮಾತನಾಡಿದ್ದಾರೆ. ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್ ಆಗಸ್ಟ್ 15ರಂದು ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಪ್ರಾರಂಭವಾಗುತ್ತದೆ.

ಇದಕ್ಕೂ ಮೊದಲು ಭಾರತೀಯ ತಂಡದ ಹೊಸ ಜೆರ್ಸಿ ಬಿಡುಗಡೆಯಾಯಿತು. ಈ ಬಾರಿ ಜೆರ್ಸಿ ಬಣ್ಣ ಕೇಸರಿ (ಕಿತ್ತಳೆ) ಇದೆ. ಹಿಂದೆ ಅದು ನೀಲಿ ಬಣ್ಣದ್ದಾಗಿತ್ತು. ಆಟಗಾರರು ಮತ್ತು ಸಿಬ್ಬಂದಿಯ ಸಲಹೆಯ ಮೇರೆಗೆ ಈ ಬಣ್ಣ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೇಸರಿ ಆಯ್ಕೆಗೆ ಇದೇನಾ ಕಾರಣ?

ಹಾಕಿ ಇಂಡಿಯಾ ಜೆರ್ಸಿ ಬಣ್ಣ ಬದಲಾಯಿಸುವುದು ಇದೇ ಮೊದಲನೇ ಬಾರಿ ಅಲ್ಲ. ಈ ಬಾರಿ ಮೈದಾನದ ನೀಲಿ ಟರ್ಫ್ ಮತ್ತು ಆಟದ ಕಿಟ್ ಎರಡೂ ನೀಲಿ ಬಣ್ಣದ್ದಾಗಿದ್ದರಿಂದ, ಆಟಗಾರರು ಮತ್ತು ಸ್ಟಾಫ್ ಪರಸ್ಪರ ಗುರುತಿಸಲು ಕಷ್ಟವಾಗುತ್ತದೆ ಎಂದು ಹೇಳಿದರು. ಅದಕ್ಕಾಗಿ ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಒಂದನ್ನು ಆರಿಸಬೇಕಿತ್ತು.

ನಾವು ಕಿತ್ತಳೆ ಬಣ್ಣವನ್ನು ಆರಿಸಿದ್ದೇವೆ. ಏಕೆಂದರೆ ಅದು ನಮ್ಮ ರಾಷ್ಟ್ರೀಯ ಧ್ವಜದ ಬಣ್ಣಗಳಲ್ಲಿ ಒಂದು. ಪಂದ್ಯಾವಳಿ ಮುಗಿದ ನಂತರ ಆಟಗಾರರಿಗೆ ಈ ಬಣ್ಣ ಇಷ್ಟವಾಗದಿದ್ದರೆ, ಅದನ್ನು ಸುಧಾರಿಸುವ ಬಗ್ಗೆ ನಾವು ಯೋಚಿಸಬಹುದು ಎಂದು ಕೇಸರಿ ಬಣ್ಣದ ಆಯ್ಕೆಗೆ ಕಾರಣ ಕೊಟ್ಟಿದ್ದಾರೆ.

ಮುಂಚೆ ಯಾವಾಗ ಬಣ್ಣ ಬದಲಾವಣೆ?

ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು, ಜೆರ್ಸಿ ಬಣ್ಣ ಬದಲಾಯಿಸುವುದು ಮೊದಲ ಬಾರಿ ಅಲ್ಲ ಎಂದು ಹೇಳಿದ್ದಾರೆ. 2014ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹಳದಿ ಬಣ್ಣದ ಜೆರ್ಸಿ ಧರಿಸಿತ್ತು. 2018ರ ವಿಶ್ವಕಪ್‌ನಲ್ಲಿ ಆಕಾಶ ನೀಲಿ ಬಣ್ಣದ ಜೆರ್ಸಿ ಧರಿಸಿತ್ತು ಎಂದು ತಿಳಿಸಿದರು. ಭಾರತ ಹಾಕಿ ತಂಡವು ಆಗಸ್ಟ್ 19ರಂದು ವೇಲ್ಸ್ ವಿರುದ್ಧದ ಪಂದ್ಯದೊಂದಿಗೆ ಮುಂಬರುವ ವಿಶ್ವಕಪ್ ಪ್ರಾರಂಭಿಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed