GT vs RR, IPL 2026: ಕ್ವಾಲಿಫೈಯರ್ 2ನಲ್ಲೂ ಅಬ್ಬರಿಸಿದ ವೈಭವ್! ಗುಜರಾತ್​​ಗೆ ಸವಾಲಿನ ಗುರಿ ನೀಡಿದ ರಾಯಲ್ಸ್ | ಕ್ರೀಡಾ ಸುದ್ದಿ | ACTPnews

ಸೂರ್ಯವಂಶಿ-ಜಡೇಜಾ


Last Updated:

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ಸ್ ವೈಭವ್ ಸೂರ್ಯವಂಶಿ ಸಿಡಿಸಿದ 96 ರನ್​ಗಳ ನೆರವಿನಿಂದ 214 ರನ್​​​ಗಳ ಸವಾಲಿನ ಮೊತ್ತ ದಾಖಲಿಸಿದರು. ವೈಭವ್​ಗೆ ಸಾಥ್ ನೀಡಿದ ಜಡೇಜಾ ಅಜೇಯ 45, ಡೊನೊವನ್ ಫೆರೆರಾ ಅಜೇಯ 38 ರನ್​ಗಳಿಸಿದರು.

ಸೂರ್ಯವಂಶಿ-ಜಡೇಜಾ
ಸೂರ್ಯವಂಶಿ-ಜಡೇಜಾ

ಮುಲ್ಲನ್‌ಪುರದ (ನ್ಯೂ ಚಂಡೀಗಢ) ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ IPL 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ಸ್ ವೈಭವ್ ಸೂರ್ಯವಂಶಿ ಸಿಡಿಸಿದ 96 ರನ್​ಗಳ ನೆರವಿನಿಂದ 214 ರನ್​​​ಗಳ ಸವಾಲಿನ ಮೊತ್ತ ದಾಖಲಿಸಿದರು. ವೈಭವ್​ಗೆ ಸಾಥ್ ನೀಡಿದ ಜಡೇಜಾ ಅಜೇಯ 45, ಡೊನೊವನ್ ಫೆರೆರಾ ಅಜೇಯ 38 ರನ್​ಗಳಿಸಿದರು.

ಟಾಸ್ ಗೆದ್ದು  ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಇಂದು ಆರಂಭದಲ್ಲೇ ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್ 1 ರನ್​ಗಳಿಸಿ ಮೊದಲ ಓವರ್​​​ನಲ್ಲೇ ಸಿರಾಜ್​​ಗೆ ವಿಕೆಟ್ ಒಪ್ಪಿಸಿದರೆ, 2ನೇ ಓವರ್​​ನಲ್ಲಿ ಜುರೆಲ್ ಕಗಿಸೋ ರಬಾಡ ಬೌಲಿಂಗ್​​ನಲ್ಲಿ ಗಿಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಜಡೇಜಾ ಜೊತೆಗೂಡಿದ ವೈಭವ್ ಸೂರ್ಯವಂಶಿ 3ನೇ ವಿಕೆಟ್​​ಗೆ 73 ರನ್​ ಸೇರಿಸಿದರು. ಜಡೇಜಾ 34 ರನ್​ಗಳಿಸಿದ್ದ ವೇಳೆ ಗಾಯಗೊಂಡು ನಿವೃತ್ತಿಯಾದರು. ನಂತರ ರಾಜಸ್ಥಾನ್ ತಂಡ ಕುಸಿತ ಕಂಡಿತು.

ಒಂದು ಕಡೆ ವೈಭವ್ ಸೂರ್ಯವಂಶಿ ಉತ್ತಮವಾಗಿ ಆಡುತ್ತಿದ್ದರೆ, ನಾನ್​​ಸ್ಟ್ರೈಕರ್​​​ನಲ್ಲಿ ಬಂದವರೆಲ್ಲಾ ಅಲ್ಪಮೊತ್ತಕ್ಕೆ ನಿರ್ಗಮಿಸಿದರು.   ನಾಯಕ ಪರಾಗ್ ಕೇವಲ 6 ಎಸೆತಗಳಲ್ಲಿ 11 ರನ್​ ಹಾಗೂ. ದಾಸುನ್ ಶನಕ 9 ಎಸೆತಗಳನ್ನಾಡಿ ಕೇವಲ 3 ರನ್​ಗಳಿಸಿ  ಹೋಲ್ಡರ್​​ಗೆ ವಿಕೆಟ್ ಒಪ್ಪಿಸಿದರು. ಆರ್ಚರ್​  4 ಎಸೆತಗಳಲ್ಲಿ ಕೇವಲ 7 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.  ಆರ್ಚರ್ ವಿಕೆಟ್ ಬಳಿಕ ಜಡೇಜಾ ಮತ್ತೆ ಕ್ರೀಸ್​​ಗೆ ಬಂದು ಸೂರ್ಯವಂಶಿ ಜೊತೆಗೆ 7ನೇ ವಿಕೆಟ್​​ಗೆ 54 ರನ್​ ಸೇರಿಸಿದರು. ಸೂರ್ಯವಂಶಿ ಆರಂಭದಲ್ಲಿ ತಮ್ಮ ನೈಜ ಆಟ ಆಡಲು ಸಾಧ್ಯವಾಗಲಿಲ್ಲ.

31 ಎಸೆತಕ್ಕೆ ಅರ್ಧಶತಕ ಸಿಡಿಸಿದ ವೈಭವ್ ಕೊನೆಯಲ್ಲಿ ಅಬ್ಬರಿಸಿದರು. ಮುಂದಿನ 16 ಎಸೆತಗಳಲ್ಲಿ 46 ರನ್​​ ಸಿಡಿಸಿದರು.  47 ಎಸೆತಗಳನ್ನಾಡಿದ ಸೂರ್ಯವಂಶಿ 8 ಬೌಂಡರಿ, 7 ಸಿಕ್ಸರ್​ಗಳ ಸಹಿತ 96 ರನ್​ಗಳಿಸಿ ಇಂದೂ ಕೂಡ ಶತಕ ಮಿಸ್ ಮಾಡಿಕೊಂಡರು. ಈ ಸೀಸನ್​​ನಲ್ಲಿ ವೈಭವ್ ಕೈತಪ್ಪಿದ 3ನೇ ಶತಕವಾಗಿದೆ. ಇದಕ್ಕೂ ಮುನ್ನ ಎಲಿಮಿನೇಟರ್​​ನಲ್ಲಿ ಹೈದರಾಬಾದ್​ ವಿರುದ್ಧ 97(29 ಎಸೆತ), ಲಖನೌ ಸೂಪರ್ ಜೈಂಟ್ಸ್ ವಿರುದ್ಧ 93(28 ಎಸೆತ) ಕೂಡ ಶತಕ ಮಿಸ್ ಮಾಡಿಕೊಂಡಿದ್ದರು. ಮೂರು ಇನ್ನಿಂಗ್ಸ್​ಗಳಲ್ಲಿ ಶತಕ ಪೂರೈಸಲು ಇನ್ನೂ ಸಾಕಷ್ಟು ಎಸೆತಗಳಿದ್ದವು ಆದರೆ ಸೂರ್ಯವಂಶಿಯ ಬೌಂಡರಿ-ಸಿಕ್ಸರ್​ ಮೂಲಕವೇ ಶತಕ ಪೂರೈಸಬೇಕೆಂದ ಹಠದಿಂದ ಮೂರು ಬಾರಿಯೂ ಕ್ಯಾಚ್ ಔಟ್ ಆಗಿದ್ದಾರೆ.

ವೈಭವ್​ 18ನೇ ಓವರ್​​ನಲ್ಲಿ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ತಂಡದ ಮೊತ್ತ 172-6 ಇತ್ತು. ಕೊನೆಯ 16 ಎಸೆತಗಳಲ್ಲಿ ರಾಯಲ್ಸ್ 42 ರನ್​ ಸೂರೆಗೈದಿತು. ಡೋನವನ್ ಫೆರೇರಾ ಕೇವಲ 11 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್​ಗಳ ಸಹಿತ ಅಜೇಯ 38 ರನ್​ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.  ರಶೀದ್ ಎಸೆದ ಕೊನೆಯ ಓವರ್​​ನಲ್ಲಿ ಫೆರೇರಾ 4 ಸಿಕ್ಸರ್​ ಸಿಡಿಸಿ ಅಬ್ಬರಿಸಿದರು. ಜಡೇಜಾ 35 ಎಸೆತಗಳಲ್ಲಿ 5 ಬೌಂಡರಿ, 1 ಅಜೇಯ 45 ರನ್​​​​​​ಗಳಿಸಿ ಮಿಂಚಿದರು.

ಗುಜರಾತ್ ಟೈಟನ್ಸ್ ಪರ ಜೇಸನ್ ಹೋಲ್ಡರ್ 27ಕ್ಕೆ2, ಕಗಿಸೋ ರಬಾಡ 35ಕ್ಕೆ2,  ಮೊಹಮ್ಮದ್ ಸಿರಾಜ್ 42ಕ್ಕೆ1, ಪ್ರಸಿದ್ಧ್ ಕೃಷ್ಣ 42ಕ್ಕೆ1  ವಿಕೆಟ್  ಪಡೆದರು. ರಶೀದ್ ಖಾನ್ ಕೇವಲ 2 ಓವರ್​ ಎಸೆದು 45 ರನ್​​ ಬಿಟ್ಟುಕೊಟ್ಟು ದುಬಾರಿಯಾದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed