Last Updated:
ಸುತ್ತಲೂ ನದಿಯ ಪ್ರವಾಹದ ನೀರು ತುಂಬಿದ್ದುದರಿಂದ ಬೇರೆ ದಾರಿ ಕಾಣದೆ ಆ ಪ್ರವಾಹದ ನೀರನ್ನೇ ಕುಡಿದುಕೊಂಡು ಇರುತ್ತಿದ್ದರು. ಸೋಮವಾರ ಮತ್ತೊಮ್ಮೆ ಕಾಲು ಜಾರಿ ಮತ್ತೆ ನದಿಗೆ ಬಿದ್ದ ಈಕೆ, ಕೊಚ್ಚಿಕೊಂಡು ಹೋಗುತ್ತಿದ್ದಾಗ ಕೆಲ ಮೀನುಗಾರರು ಬಂದು ರಕ್ಷಿಸಿದ್ದಾರೆ.
ನವದೆಹಲಿ: ಗಂಗಾ ನದಿಯಲ್ಲಿ (Ganga River) ಕೊಚ್ಚಿಹೋಗಿದ್ದ ಮಹಿಳೆಯೊಬ್ಬರು 15 ದಿನ ಅದೇ ನದಿಯ ನೀರು ಕುಡಿದುಕೊಂಡು, ಮುಳುಗಡೆಯಾಗಿರುವ ಹುಲ್ಲಿನ ಗುಡಿಸಲಿನಲ್ಲಿ ಜೀವ ಉಳಿಸಿಕೊಂಡಿದ್ದ ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ.
ಭಾರೀ ಮಳೆ ಸುರಿಯುತ್ತಿರುವ ಸಮಯದಲ್ಲೇ ಬಿಹಾರದ ಬಕ್ಸಾರ್ ಜಿಲ್ಲೆಯ ಸುನೈನಾ ದೇವಿ (55) ಆ.30 ರಂದು ಸ್ನಾನಕ್ಕೆಂದು ಗಂಗಾ ನದಿಯ ತಟಕ್ಕೆ ಹೋಗಿದ್ದರು. ಈ ವೇಳೆ ಏಕಾಏಕಿ ಜೋರು ಮಳೆಯಾಗಿ ಪ್ರವಾಹವೂ ದಿಢೀರನೇ ಏರಿ ಅವರು ಕೊಚ್ಚಿಹೋಗಿದ್ದರು.
ಸುತ್ತಲೂ ನದಿಯ ಪ್ರವಾಹದ ನೀರು ತುಂಬಿದ್ದುದರಿಂದ ಬೇರೆ ದಾರಿ ಕಾಣದೆ ಆ ಪ್ರವಾಹದ ನೀರನ್ನೇ ಕುಡಿದುಕೊಂಡು ಇರುತ್ತಿದ್ದರು. ಸೋಮವಾರ ಮತ್ತೊಮ್ಮೆ ಕಾಲು ಜಾರಿ ಮತ್ತೆ ನದಿಗೆ ಬಿದ್ದ ಈಕೆ, ಕೊಚ್ಚಿಕೊಂಡು ಹೋಗುತ್ತಿದ್ದಾಗ ಕೆಲ ಮೀನುಗಾರರು ಬಂದು ರಕ್ಷಿಸಿದ್ದಾರೆ.
ಬಿಹಾರದ ಬಕ್ಸಾರ್ ಜಿಲ್ಲೆಯ ಕಪುರಪಟ್ಟಿ ಗ್ರಾಮದ ಸುನೈನಾ ದೇವಿ ಆಗಸ್ಟ್ 30 ರಂದು ಸ್ನಾನ ಮಾಡಲು ಹೋಗಿದ್ದಾಗ ಪ್ರವಾಹ ಬಂದು ನೀರಿನಲ್ಲಿ ಮುಳುಗಿದ ನಂತರ ಅವರ ಮಗ ಗೋವಿಂದ ಗೊಂಡ್ ಇಟರ್ಹಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನದಿಯ ಇನ್ನೊಂದು ಬದಿಯಲ್ಲಿರುವ ಯುಪಿಯ ಬಲ್ಲಿಯಾದಲ್ಲಿರುವ ಚೈನ್ ಛಪ್ರಾ ಗ್ರಾಮದಲ್ಲಿ ಅವರು ನದಿಯಲ್ಲಿ ಬಿದ್ದಿದ್ದು ಆಕೆಯ ಕುಟುಂಬಕ್ಕೆ ತಿಳಿದಿರಲಿಲ್ಲ.
ಸದ್ಯ ಸುನೈನಾ ದೇವಿ ಮರಳಿ ಮನೆಗೆ ಬಂದಿರೋದು ಅವರ ಪರಿವಾರಕ್ಕೆ ಖುಷಿ ತಂದಿದೆ ಎಂದು ತಿಳಿದು ಬಂದಿದೆ.