Last Updated:
ಬೆಂಗಳೂರುದಲ್ಲಿ HOPCOMS ಮತ್ತು ಭಾರತೀಯ ಅಂಚೆ ಇಲಾಖೆ ಸೇರಿ ರೈತರ ಅಂಚೆ ಯೋಜನೆ ಆರಂಭ, ವೆಬ್ಸೈಟ್ ಮೂಲಕ ಆರ್ಡರ್ ಮಾಡಿದ ಮಾವು ಮತ್ತು ಇತರೆ ಹಣ್ಣು ತರಕಾರಿಗಳನ್ನು 24 ಗಂಟೆಯಲ್ಲಿ ಮನೆಗೆ ತಲುಪಿಸುತ್ತಾರೆ
ಬೆಂಗಳೂರು; ಟ್ರಾಫಿಕ್ನಲ್ಲಿ ಸಿಲುಕಿ ಮಾವಿನಹಣ್ಣು (Mango) ತರಲು ಬೇಸರವೇ? ನಿಮ್ಮ ಬಡಾವಣೆಯಲ್ಲಿ ಹಾಪ್ಕಾಮ್ಸ್ ಮಳಿಗೆ ಇಲ್ವಾ? ಹಾಗಾದ್ರೆ ಈ ಸುದ್ದಿ (News) ಮಿಸ್ ಮಾಡ್ದೆ ಓದಿ! ಕೇವಲ 24 ಗಂಟೆಯಲ್ಲಿ ನಿಮ್ಮ ಮನೆಗೆ ಬರಲಿದೆ ರಸಭರಿತ ಮಾವು! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ! ಇನ್ಮುಂದೆ ನೀವು ಅಂಚೆ ಕಚೇರಿಯಿಂದ (Post Office) ಬರುವ ಪತ್ರಗಳಿಗಾಗಿ ಮಾತ್ರವಲ್ಲ, ಬಾಯಲ್ಲಿ ನೀರೂರಿಸುವ ತಾಜಾ ಹಣ್ಣುಗಳಿಗಾಗಿಯೂ (Fresh Fruits) ಕಾಯಬಹುದು!
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹಾಗೂ ನಗರದ ಮೂಲೆ ಮೂಲೆಗೂ ತಾಜಾ ಹಣ್ಣು, ತರಕಾರಿಗಳನ್ನು ತಲುಪಿಸಲು ಹಾಪ್ಕಾಮ್ಸ್ (HOPCOMS) ಹಾಗೂ ಭಾರತೀಯ ಅಂಚೆ ಇಲಾಖೆ ಕೈಜೋಡಿಸಿದ್ದು, ‘ರೈತರ ಅಂಚೆ’ ಎಂಬ ಬಂಪರ್ ಆನ್ಲೈನ್ ಮಾರಾಟ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ!
ಬೆಂಗಳೂರು ಬೃಹತ್ತಾಗಿ ಬೆಳೆದಿದೆ, ಆದರೆ ಎಲ್ಲಾ ಏರಿಯಾಗಳಲ್ಲೂ ಹಾಪ್ಕಾಮ್ಸ್ ಮಳಿಗೆಗಳಿಲ್ಲ. ಹೀಗಾಗಿ ರೈತರು ಬೆಳೆದ ಫ್ರೆಶ್ ಹಣ್ಣು ಮತ್ತು ತರಕಾರಿಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ, ಅದೂ ನಮ್ಮ ಪೋಸ್ಟ್ ಮ್ಯಾನ್ ಗಳ ಮೂಲಕವೇ ತಲುಪಿಸುವ ಮಾಸ್ಟರ್ ಪ್ಲಾನ್ ಇದಾಗಿದೆ.
ಹಾಪ್ಕಾಮ್ಸ್ ವೆಬ್ಸೈಟ್ಗೆ ಭೇಟಿ ನೀಡಿ. ನಿಮಗೆ ಇಷ್ಟವಾದ ಹಣ್ಣು/ತರಕಾರಿ ಆಯ್ಕೆ ಮಾಡಿ, ಆನ್ಲೈನ್ನಲ್ಲೇ ಹಣ ಪಾವತಿಸಿ. ಅಷ್ಟೇ! 24 ಗಂಟೆಯೊಳಗೆ ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ಬಂದು ಹಣ್ಣಿನ ಬಾಕ್ಸ್ ಕೊಟ್ಟು ಹೋಗ್ತಾರೆ!
ಮಾವಿನ ಹಣ್ಣಿನ ಸೀಸನ್ ನಡೀತಿದ್ದು, ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ 3 ಕೆಜಿ ಹಾಗೂ 5 ಕೆಜಿ ಬಾಕ್ಸ್ಗಳು ಈಗ ಆನ್ಲೈನ್ನಲ್ಲಿ ಲಭ್ಯ! ಬೆಲೆ ಕೇಳಿದ್ರೆ ನೀವು ಈಗಲೇ ಆರ್ಡರ್ ಮಾಡೋದು ಗ್ಯಾರಂಟಿ!
ಮಾವಿನತಳಿ (3 ಕೆಜಿಗೆ) ಬೆಲೆ (ಶಿಪ್ಪಿಂಗ್ ಸೇರಿ)
- ತೋತಾಪುರಿ ₹177
- ಸಿಂಧೂರ ₹222
- ರಸಪುರಿ ₹321
- ಮಲ್ಲಿಕಾ ₹330
- ಬಂಗನಪಲ್ಲಿ / ಬಾದಾಮಿ ₹336
- ದಶೇರಿ ₹378
- ಅಲ್ಫಾನ್ಸೋ (ಆಪೂಸ್) ₹396
- ಕೇಸರ್ ₹564
- ಮಲ್ಗೋವಾ ₹651
- ಇಮಾಮ್ ಪಸಂದ್ ₹765
ಈಗಲೇ ಆನ್ಲೈನ್ನಲ್ಲಿ ಯಾಕೆ ಆರ್ಡರ್ ಮಾಡಬೇಕು?
ರೈತರಿಂದ ನೇರವಾಗಿ ಮಾವಿನ ಹಣ್ಣುಗಳನ್ನು ಖರೀದಿಸುವುದರಿಂದ ಮಧ್ಯವರ್ತಿಗಳ ಕಾಟವಿಲ್ಲದೆ ರೈತರಿಗೆ ನ್ಯಾಯಯುತ ಲಾಭ ಸಿಗುತ್ತದೆ ಹಾಗೂ ನಿಮಗೂ ಕೂಡ ತಾಜಾ ಮತ್ತು ನೈಸರ್ಗಿಕವಾದ ಹಣ್ಣುಗಳು ದೊರೆಯುತ್ತವೆ. ಈ ಹಣ್ಣುಗಳು ಸಂಪೂರ್ಣವಾಗಿ ರಾಸಾಯನಿಕ ಮುಕ್ತವಾಗಿದ್ದು, ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾಗಿವೆ. ಇನ್ನು ಹಣ್ಣುಗಳನ್ನು ಖರೀದಿಸಲು ಮಾರ್ಕೆಟ್ಗೆ ಹೋಗಿ ಟ್ರಾಫಿಕ್ನಲ್ಲಿ ಒದ್ದಾಡುವ ಬದಲು, ಮನೆಯಲ್ಲೇ ಆರಾಮವಾಗಿ ಕುಳಿತು ಆರ್ಡರ್ ಮಾಡುವುದರಿಂದ ನಿಮ್ಮ ಅಮೂಲ್ಯವಾದ ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗುತ್ತದೆ.
Bangalore [Bangalore],Bangalore,Karnataka
May 30, 2026 10:47 AM IST













