Last Updated:
Lucknow Coaching Fire Accident: ಉತ್ತರ ಪ್ರದೇಶದ ರಾಜಧಾನಿ ಲಖನೌನ ಅಲಿಗಂಜ್ ಪ್ರಾಂತ್ಯದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಇಲ್ಲಿನ ಪ್ರಮುಖ ಕೋಚಿಂಗ್ ಸೆಂಟರ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಕೆಲವು ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ನೊಳಗೇನೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌನ (Lucknow) ಅಲಿಗಂಜ್ ಪ್ರಾಂತ್ಯದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಇಲ್ಲಿನ ಪ್ರಮುಖ ಕೋಚಿಂಗ್ ಸೆಂಟರ್ನಲ್ಲಿ (Coaching Center) ಭಾರಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಈ ಭೀಕರ ದುರಂತದಲ್ಲಿ 12 ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ನೊಳಗೇನೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಖನೌನ ಅಲಿಗಂಜ್ (ಪುರನಿಯಾ) ಪ್ರಾಂತ್ಯದಲ್ಲಿನ ಪ್ರಮುಖ ಕೋಚಿಂಗ್ ಮತ್ತು ಗೇಮಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಇಡೀ ನಗರವನ್ನೇ ನಡುಗಿಸಿದೆ.
ಇನ್ನೂ, ಈ ವಾಣಿಜ್ಯ ಕಟ್ಟಡದಲ್ಲಿ ಎಂದಿನಂತೆ ನೂರಾರು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು. ಆದರೆ, ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಕಟ್ಟಡದ ಕೆಳಮಹಡಿಯ ವಿದ್ಯುತ್ ನಿಯಂತ್ರಣ ಮಂಡಳಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ. ನೋಡನೋಡುತ್ತಿದ್ದಂತೆ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ದಟ್ಟವಾದ ಕಪ್ಪು ಹೊಗೆ ಮೇಲಿನ ಮಹಡಿಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿತು. ಆ ಸಮಯದಲ್ಲಿ ಕೋಚಿಂಗ್ ಸೆಂಟರ್ ಒಳಗೆ 10 ರಿಂದ 12 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಇಕ್ಕಟ್ಟಾದ ಮೆಟ್ಟಿಲುಗಳು ಮತ್ತು ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ಹೊರಗೆ ಬರಲು ಯಾವುದೇ ಮಾರ್ಗವಿಲ್ಲದೆ ಇಡೀ ಆವರಣವು ಕೇವಲ ಐದೇ ನಿಮಿಷಗಳಲ್ಲಿ ವಿಷಕಾರಿ ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿತು ಎನ್ನಲಾಗಿದೆ.
ಕಟ್ಟಡದ ಒಳಗೆ ಬೆಂಕಿಯ ಕೆನ್ನಾಲಿಗೆ ಮತ್ತು ವಿಷಕಾರಿ ಹೊಗೆ ಹೆಚ್ಚಾಗುತ್ತಿದ್ದಂತೆ, ಒಳಗೆ ಸಿಲುಕಿದ್ದ ಅಸಹಾಯಕ ಮಕ್ಕಳಿಗೆ ಹೊರಬರಲು ಬೇರೆ ಯಾವುದೇ ದಾರಿಯೇ ಕಾಣಿಸಲಿಲ್ಲ. ಭೀತಿಯಿಂದ ಕಿರುಚಾಡುತ್ತಿದ್ದ ವಿದ್ಯಾರ್ಥಿಗಳು ಕಿಟಕಿ ಮತ್ತು ಬಾಲ್ಕನಿಗಳತ್ತ ಧಾವಿಸಿದರು. ಸ್ಥಳೀಯ ನಾಗರಿಕರು ಕೆಳಗೆ ನಿಂತು ಧೈರ್ಯ ತುಂಬಲು ಯತ್ನಿಸುತ್ತಿದ್ದರೂ, ಬೆಂಕಿಯ ತಾಪ ಮತ್ತು ಉಸಿರುಗಟ್ಟುವಿಕೆಯನ್ನು ತಾಳಲಾರದೆ ಮಕ್ಕಳು ಮೂರನೇ ಮತ್ತು ನಾಲ್ಕನೇ ಮಹಡಿಯ ಬಾಲ್ಕನಿಯಿಂದ ನೇರವಾಗಿ ಕೆಳಗೆ ಜಿಗಿಯಲು ಪ್ರಾರಂಭಿಸಿದರು. ಕೆಳಗೆ ಬಿದ್ದ ವಿದ್ಯಾರ್ಥಿಗಳ ತಲೆ ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.
Lucknow,Uttar Pradesh













