Last Updated:
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಸಮಯದಲ್ಲಿ ಜೋಫ್ರಾ ಆರ್ಚರ್ ಡೆಡ್ಲಿ ಬೌನ್ಸರ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ರ್ಚರ್ ಡೆಡ್ಲಿ ಬೌನ್ಸರ್ಗೆ ಕಿವೀಸ್ ಬ್ಯಾಟ್ಸ್ಮನ್ ನೆಲಕ್ಕುರುಳಿದ್ದಾರೆ.
ನಾಟಿಂಗ್ಹ್ಯಾಮ್(Nottingham)ನ ಟ್ರೆಂಟ್ ಬ್ರಿಡ್ಜ್ನಲ್ಲಿ ಇಂಗ್ಲೆಂಡ್ (England) ಮತ್ತು ನ್ಯೂಜಿಲೆಂಡ್ (New Zealand) ನಡುವಿನ ಟೆಸ್ಟ್ (Test) ಪಂದ್ಯದ ಸಮಯದಲ್ಲಿ ಎಲ್ಲರನ್ನೂ ಬೆಚ್ಚಿ ಬೀಳಿಸುವ ಘಟನೆ ನಡೆಯಿತು. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ (Jofra Archer) ಅವರ ಹೈಸ್ಪೀಡ್ ಡೆಡ್ಲಿ ಬೌನ್ಸರ್ ನ್ಯೂಜಿಲೆಂಡ್ ಆಟಗಾರ ಬ್ಲೇರ್ ಟಿಕ್ನರ್ (Blair Tickner) ಅವರ ತಲೆಗೆ ಬಡಿಯಿತು. ಸದ್ಯ ಗಾಯದ ಹೊರತಾಗಿಯೂ, ಟಿಕ್ನರ್ ತಮ್ಮ ಬ್ಯಾಟಿಂಗ್ ಅನ್ನು ಪೂರ್ಣಗೊಳಿಸಿದರು. ನಂತರ ಬೌಲಿಂಗ್ಗೆ ಮರಳಿದರು. ಆದರೆ, ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಗಂಭೀರವಾಗಿರುವುದು ದೃಢಪಟ್ಟ ನಂತರ, ಅವರನ್ನು ಪಂದ್ಯದ ಮಧ್ಯೆಯಲ್ಲೇ ಹೊರಗಿಡಲಾಯಿತು.
ಈ ಟೆಸ್ಟ್ ಪಂದ್ಯದಲ್ಲಿ ಬ್ಲೇರ್ ಟಿಕ್ನರ್ ಇನ್ನು ಮುಂದೆ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಅಧಿಕೃತವಾಗಿ ದೃಢಪಡಿಸಿದೆ. ಕನ್ಕ್ಯುಶನ್ ಬದಲಿಯಾಗಿ ಜಕಾರಿ ಫಾಕ್ಸ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ನ್ಯೂಜಿಲೆಂಡ್ನ ಮೊದಲ ಇನ್ನಿಂಗ್ಸ್ನ 114 ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಜೋಫ್ರಾ ಆರ್ಚರ್ ತಮ್ಮ ವೇಗದಿಂದ ಬ್ಯಾಟ್ಸ್ಮನ್ಗಳಿಗೆ ತೊಂದರೆ ನೀಡುತ್ತಿದ್ದರು. 114 ನೇ ಓವರ್ನ ಎರಡನೇ ಎಸೆತದಲ್ಲಿ ಅವರು ಶಾರ್ಟ್-ಪಿಚ್ ಎಸೆತವನ್ನು ಎಸೆದರು. ಅದು ಜೋರಾಗಿ ಬೌನ್ಸ್ ಆಗಿ ಬ್ಲೇರ್ ಟಿಕ್ನರ್ ಅವರ ಹೆಲ್ಮೆಟ್ಗೆ ಬಡಿಯಿತು.
ಜೋಫ್ರಾ ಆರ್ಚರ್ ಡೆಡ್ಲಿ ಬೌನ್ಸರ್ ಬಡಿದ ತಕ್ಷಣ ಬ್ಲೇರ್ ಟಿಕ್ನರ್ ನೆಲಕ್ಕೆ ಬಿದ್ದರು. ಮೈದಾನವು ಕೆಲವು ಕ್ಷಣಗಳ ಕಾಲ ಸ್ತಬ್ಧವಾಯಿತು. ನ್ಯೂಜಿಲೆಂಡ್ ವೈದ್ಯಕೀಯ ತಂಡವು ತಕ್ಷಣ ಮೈದಾನಕ್ಕೆ ಆಗಮಿಸಿತು. ನಂತರ, ಅವರಿಗೆ ಬ್ಯಾಟಿಂಗ್ ಮುಂದುವರಿಸಲು ಅನುಮತಿ ನೀಡಲಾಯಿತು. ಟಿಕ್ನರ್ ಧೈರ್ಯ ಪ್ರದರ್ಶಿಸಿ ಬ್ಯಾಟಿಂಗ್ ಮುಂದುವರಿಸಿದರು. 4 ರನ್ಗಳೊಂದಿಗೆ ಅಜೇಯರಾಗಿ ಇನ್ನಿಂಗ್ಸ್ ಮುಗಿಸಿದರು.
ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರೂ, ಬ್ಲೇರ್ ಟಿಕ್ನರ್ ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿದರು. ಅವರು ಮೂರು ಓವರ್ಗಳನ್ನು ಬೌಲ್ ಮಾಡಿ 21 ರನ್ಗಳನ್ನು ಬಿಟ್ಟುಕೊಟ್ಟರು. ಆದರೆ, ಸ್ವಲ್ಪ ಸಮಯದ ನಂತರ ಅವರನ್ನು ಮೈದಾನದಿಂದ ಹೊರಗೆ ಕರೆಯಲಾಯಿತು. ದಿನದ ಆಟದ ನಂತರ, ವೈದ್ಯಕೀಯ ತಂಡವು ಅವರನ್ನು ಮರು ಪರೀಕ್ಷೆಗೆ ಒಳಪಡಿಸಿತು. ಈ ವೇಳೆ ಅವರು ಗಾಯಗೊಂಡಿರುವುದು ತಿಳಿದುಬಂದಿದೆ.
ಎರಡನೇ ದಿನ (ಜೂನ್ 26) 361/4 ಕ್ಕೆ ನ್ಯೂಜಿಲೆಂಡ್ ಆಟ ಪುನರಾರಂಭಿಸಿತು. ಈ ವೇಳೆ ನ್ಯೂಜಿಲೆಂಡ್ 500 ರನ್ಗಳ ಹತ್ತಿರ ತಲುಪಬಹುದೆಂದು ತೋರುತ್ತಿತ್ತು. ಆದರೆ ಇಂಗ್ಲೆಂಡ್ನ ಬೌಲರ್ಗಳು ಅದ್ಭುತ ಪುನರಾಗಮನವನ್ನು ಮಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಪ್ರವಾಸಿ ತಂಡವನ್ನು 438 ರನ್ಗಳಿಗೆ ಔಟ್ ಮಾಡಿದರು. ನ್ಯೂಜಿಲೆಂಡ್ ತನ್ನ ಕೊನೆಯ ಆರು ವಿಕೆಟ್ಗಳನ್ನು ಕೇವಲ 77 ರನ್ಗಳಿಗೆ ಕಳೆದುಕೊಂಡಿತು.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನಾಲ್ಕು ವಿಕೆಟ್ಗಳನ್ನು ಪಡೆದರೆ, ಜೋಫ್ರಾ ಆರ್ಚರ್ ಮತ್ತು ಶೋಯೆಬ್ ಬಶೀರ್ ತಲಾ ಎರಡು ವಿಕೆಟ್ಗಳನ್ನು ಪಡೆದರು. 438 ರನ್ ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ಕಳಪೆ ಆರಂಭವನ್ನು ಪಡೆದು, ಎಮಿಲಿಯೊ ಗೇ ಅವರನ್ನು ಯಾವುದೇ ಸ್ಕೋರ್ ಗಳಿಸದೆ ಕಳೆದುಕೊಂಡಿತು. ನಂತರ ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ನ್ಯೂಜಿಲೆಂಡ್ ನ ಭರವಸೆಯನ್ನು ಹುಸಿಗೊಳಿಸಿದರು.
2025 ರ ಆಶಸ್ ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ಡಕೆಟ್, 114 ರನ್ ಗಳಿಸುವ ಮೂಲಕ ತನ್ನ ಏಳನೇ ಟೆಸ್ಟ್ ಶತಕದೊಂದಿಗೆ ಅದ್ಭುತ ಕಮ್ಬ್ಯಾಕ್ ಮಾಡಿದರು. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ223 ರನ್ ಗಳಿಸಿ ನ್ಯೂಜಿಲೆಂಡ್ ಗಿಂತ ಕೇವಲ 215 ರನ್ ಗಳ ಹಿನ್ನಡೆಯಲ್ಲಿದೆ. ಜಾಕೋಬ್ ಬೆಥೆಲ್ 74ರನ್ ಮತ್ತು ಜೋ ರೂಟ್ 21 ರನ್ ಗಳಿಸಿ ಅಜೇಯರಾಗಿ ಉಳಿದರು.
ENG vs NZ: ಜೋಫ್ರಾ ಆರ್ಚರ್ ಡೆಡ್ಲಿ ಬೌನ್ಸರ್ಗೆ ನೆಲಕ್ಕುರುಳಿದ ಕಿವೀಸ್ ಬ್ಯಾಟ್ಸ್ಮನ್! ಪಂದ್ಯದ ಮಧ್ಯದಲ್ಲೇ ನ್ಯೂಜಿಲೆಂಡ್ ತಂಡ ಸೇರಿದ ಬದಲಿ ಪ್ಲೇಯರ್













