Education Minister Pralhad Joshi: ಧರ್ಮೇಂದ್ರ ಪ್ರಧಾನ್ ಸ್ಥಾನಕ್ಕೆ ಜೋಶಿಯವರನ್ನೇ ಆಯ್ಕೆ ಮಾಡಿದ್ದೇಕೆ ಮೋದಿ; ಇಲ್ಲಿದೆ ಅಚ್ಚರಿ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಜೋಶಿ ಎದುರಿಗೆ ಇರುವ ಸವಾಲುಗಳೇನು?


Last Updated:

ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಪ್ರಲ್ಹಾದ್ ಜೋಶಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ. ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ.

ಜೋಶಿ ಎದುರಿಗೆ ಇರುವ ಸವಾಲುಗಳೇನು?
ಜೋಶಿ ಎದುರಿಗೆ ಇರುವ ಸವಾಲುಗಳೇನು?

ಕೇಂದ್ರ ರಾಜಕೀಯದಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಇದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅನುಮೋದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯ ಮೇರೆಗೆ, ರಾಷ್ಟ್ರಪತಿಗಳು ಪ್ರಸ್ತುತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಲು ಅನುಮೋದನೆ ನೀಡಿದ್ದಾರೆ. ಈ ಕುರಿತು ರಾಷ್ಟ್ರಪತಿ ಭವನದಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯ ಜೋಶಿ ಅವರು ನಿರ್ವಹಿಸುತ್ತಿರುವ ಸಚಿವಾಲಯಗಳೊಂದಿಗೆ ಶಿಕ್ಷಣ ಇಲಾಖೆಯ (Shastri Bhavan) ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹ ಕ್ರೈಸಿಸ್ ಮ್ಯಾನೇಜರ್ ಆಗಿದ್ದು, ಇದರೊಂದಿಗೆ ಶಾಸ್ತ್ರಿ ಭವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಜೋಶಿ ಅವರು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆಗಳನ್ನು ನಿರ್ವಹಿಸುತ್ತಿದ್ದಾರೆ.

ಸಂಸದೀಯ ಕಾರ್ಯತಂತ್ರದಲ್ಲಿ ದಾಖಲೆ

ಪ್ರಲ್ಹಾದ್ ಜೋಶಿ ಅವರ ನೇಮಕ ಸದ್ಯ ನಡೆಯುತ್ತಿರುವ ಮಳೆಗಾಲದ ಅಧಿವೇಶನವನ್ನು ಯಶಸ್ವಿಯಾಗಿ, ಸ್ಥಿರವಾಗಿಸುವ ತಂತ್ರದ ಭಾಗ ಎಂದೇ ತಜ್ಞರು ಕರೆಯುತ್ತಿದ್ದಾರೆ. ಈ ಹಿಂದೆ 2019 ರಿಂದ 2024ರ ವರೆಗೂ ಜೋಶಿ ಅವರು, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದರೊಂದಿಗೆ ಜೋಶಿ, ಒಮ್ಮತ ನಿರ್ಮಾಣ, ಸಭಾ ನಿರ್ವಹಣೆ ಮತ್ತು ಕಠಿಣ ಚರ್ಚೆಗಳನ್ನು ನಡೆಸುವ ಬಗ್ಗೆ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅಲ್ಲದೇ, ಪರಿಣಾಮಕಾರಿ ಆಡಳಿತಗಾರರಾಗಿ ಖ್ಯಾತಿ ಪಡೆದುಕೊಂಡಿದ್ದಾರೆ ಎಂದು ನ್ಯೂಸ್​18 ಇಂಗ್ಲೀಷ್ ವರದಿ ಮಾಡಿದೆ.

ಜೋಶಿ ಎದುರಿಗೆ ಇರುವ ಸವಾಲುಗಳು?

ದೇಶದಾದ್ಯಂತ ಸದ್ಯ ವಿದ್ಯಾರ್ಥಿಗಳಲ್ಲಿ ಎದುರಾಗಿರುವ ಗೊಂದಲಗಳನ್ನು ದೂರ ಮಾಡಿ, ಆಕಾಂಕ್ಷಿಗಳಲ್ಲಿ ವಿಶ್ವಾಸ ಮೂಡಿಸುವುದು. ಜೋಶಿ ಅವರ ತಕ್ಷಣದ ಕರ್ತವ್ಯ ಎಂದು ಹೇಳಬಹುದು.

ಪರೀಕ್ಷೆಗಳನ್ನು ಸುಧಾರಿಸುವುದು: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಪರೀಕ್ಷೆಗಳ ಮೇಲ್ವಿಚಾರಣೆ. ಸುರಕ್ಷಿತ ಕಂಪ್ಯೂಟರ್ ಆಧಾರಿತ ಪರೀಕ್ಷಾ ಪದ್ಧತಿ ಜಾರಿ ಮಾಡುವುದು.

ಮತ್ತೆ ಪೇಪರ್ ಲೀಕ್ ಆಗದಂತೆ ಕಠಿಣ ಕಾನೂನು ಕ್ರಮ: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮಗಳನ್ನ ಜಾರಿ ಮಾಡಿ, ಅವುಗಳಿಗೆ ಶಾಸನಬದ್ಧ ಚೌಕಟ್ಟುಗಳನ್ನು ರೂಪಿಸುವುದು ಹಾಗೂ ಅವುಗಳ ಮೇಲ್ವಿಚಾರಣೆ ಮಾಡುವುದು.

ಪೋಷಕರು-ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ: ರಾಷ್ಟ್ರೀಯ ಮೌಲ್ಯಮಾಪನ ವ್ಯವಸ್ಥೆಗಳನ್ನು ಸುಧಾರಣೆ ಮಾಡಿ, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಪುನರ್ ಆತ್ಮವಿಶ್ವಾಸ ರೂಪಿಸಬೇಕಿದೆ. ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪಾರದರ್ಶಕ ಸಂವಹನ ರೂಪಿಸಬೇಕಿದೆ.

ಇದನ್ನೂ ಓದಿ: Pralhad Joshi: ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿದ್ಯಾಭ್ಯಾಸ ಎಷ್ಟು? ಅವರ ಶೈಕ್ಷಣಿಕ ಅರ್ಹತೆಗಳು ಯಾವುವು?

ಸದ್ಯ ಎದುರಾಗಿರುವ ಬಿಕ್ಕಟ್ಟು ನಿಭಾಯಿಸುವುದರ ಜೊತೆಗೆ, ದೀರ್ಘಕಾಲೀನ ರಚನಾತ್ಮಕ ಸುಧಾರಣೆಗಳನ್ನು ಶಿಕ್ಷಣ ಇಲಾಖೆಯಲ್ಲಿ ರೂಪಿಸಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020), ಉನ್ನತ ಶಿಕ್ಷಣ ಸುಧಾರಣೆಗಳು ಮತ್ತು ಕೌಶಲ್ಯ ಕಾರ್ಯಕ್ರಮಗಳನ್ನು ಸರಿಯಾಗಿ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವೆ ನಿರಂತರವಾಗಿ ಸಮನ್ವಯ ಸಾಧಿಸಬೇಕಿದೆ. ಶಾಸ್ತ್ರಿ ಭವನವನ್ನು ಕಟ್ಟುನಿಟ್ಟಾದ ಶಿಸ್ತಿನ ಅಧಿಕಾರಿಗಳಿಗೆ ವಹಿಸುವ ಮೂಲಕ, ಸರ್ಕಾರದ ದೈನಂದಿನ ಆಡಳಿತ ಮತ್ತು ನೀತಿ ಗುರಿಗಳನ್ನು ಅಡೆತಡೆಯಿಲ್ಲದೆ ಸುಗಮವಾಗಿ ಜಾರಿ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports