Last Updated:
Duniya Vijay: ದುನಿಯಾ ವಿಜಯ್ ಯಾಕೆ ವಿನಯ್ ತಾಯಿ ಕಾಲಿಗೆ ಬಿದ್ದರು? ಕನ್ನಡ ಚಿತ್ರಗಳು ಉಳಿಯಬೇಕು ಅಂತ ಫ್ಯಾನ್ಸ್ಗೆ ಹೇಳಿದ್ಯಾಕೆ? ಈ ಎಲ್ಲ ವಿಚಾರದ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ ಓದಿ…
ನಮ್ಮ ಕನ್ನಡ ಸಿನಿಮಾ (Kannada Movie) ಉಳಿಸಿಕೊಳ್ಳಬೇಕಿದೆ. ದಯವಿಟ್ಟು ಯಾರೂ ಈ ಕೆಲಸ ಮಾಡ್ಬೇಡಿ. ದುನಿಯಾ ವಿಜಯ್ ಥಿಯೇಟರ್ ಅಲ್ಲಿ ಈ ಮಾತು ಹೇಳಿದ್ದಾರೆ. ಚಿತ್ರ ನೋಡಲು ಬಂದ ಸಿನಿಮಾ ಪ್ರೇಮಿಗಳಿಗೆ (Cinema Lover) ಹಾಗೂ ಅಭಿಮಾನಿಗಳಿಗೆ ಈ ಮನವಿ ಮಾಡಿದ್ದಾರೆ. ಅಂದ್ಹಾಗೆ ದುನಿಯಾ ವಿಜಯ್ (Duniya Vijay) ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ.
ನಮ್ಮ ಕನ್ನಡ ಸಿನಿಮಾಗಳನ್ನ ಉಳಿಸಬೇಕಿದೆ. ದಯವಿಟ್ಟು ಯಾರು ಈ ಕೆಲಸ ಮಾಡ್ಬೇಡಿ. ಈ ಒಂದು ರಿಕ್ವೆಸ್ಟ್ ಅನ್ನ ದುನಿಯಾ ವಿಜಯ್ ಮಾಡಿದ್ದಾರೆ.
ದುನಿಯಾ ವಿಜಯ್ ಯಾಕೆ ವಿನಯ್ ತಾಯಿ ಕಾಲಿಗೆ ಬಿದ್ದರು?
(ಚಿತ್ರ ಕೃಪೆ: ಸಿಟಿ ಲೈಟ್ಸ್ ಸಿನಿಮಾ ಟೀಮ್)
ಈ ರಿಕ್ವೆಸ್ಟ್ ಏನು ಗೊತ್ತಾ ? ಹೌದು, ಚಿತ್ರ ನೋಡಿ ಎಂಜಾಯ್ ಮಾಡಿ, ಆದರೆ, ಅದನ್ನ ಶೂಟ್ ಮಾಡ್ಬೇಡಿ. ಫೋನ್ ಅಲ್ಲಿ ಶೂಟ್ ಮಾಡಿ ಎಲ್ಲೂ ಹಾಕ್ಬೇಡಿ ಅಂತಲೇ ಕೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾಗಳನ್ನ ಫೋನ್ ಅಲ್ಲಿ ಚಿತ್ರೀಕರಿಸೋದು. ಅದನ್ನ ಎಲ್ಲೆಡೆ ಹಾಕಿ ಬಿಡೋದು. ಈ ರೀತಿ ಮಾಡಿದ್ರೆ ಏನ್ ಆಗುತ್ತದೆ. ಹೀಗೆ ಮಾಡ್ಬೇಡಿ.
ವಿನಯ್ ರಾಜ್ಕುಮಾರ್ ಅವರ ತಾಯಿ ಮಂಗಳ ಅವರಿಗೆ ಸಿಟಿ ಲೈಟ್ಸ್ ಇಷ್ಟ ಆಗಿದೆ. ತುಂಬಾನೆ ಇಷ್ಟ ಆಗಿದೆ. ಈ ಒಂದು ವಿಷಯವನ್ನ ಮಂಗಳ ಅವರು ದುನಿಯಾ ವಿಜಯ್ ಮುಂದೇನೆ ಹೇಳಿದ್ದಾರೆ. ದುನಿಯಾ ವಿಜಯ್ ಅವರನ್ನ ತಮ್ಮ ಬಳಿ ಕರೆದಿದ್ದಾರೆ. ಕರೆದು ಚಿತ್ರವನ್ನ ತುಂಬಾನೆ ಚೆನ್ನಾಗಿ ಮಾಡಿದ್ದೀರಾ, ವಿನಯ್ ಮತ್ತು ಮೊನಿಷಾ ಚೆನ್ನಾಗಿ ಕೆಲಸ ಮಾಡಿದ್ದಾರೆ ಅಂತಲೂ ಹೇಳಿದ್ದಾರೆ.
ನಮ್ಮ ಕನ್ನಡ ಸಿನಿಮಾ ಉಳಿಸಬೇಕಿದೆ….
(ಚಿತ್ರ ಕೃಪೆ: ಸಿಟಿ ಲೈಟ್ಸ್ ಸಿನಿಮಾ ಟೀಮ್)
ಈ ಮಾತುಗಳನ್ನ ಹೇಳ್ತಾನೆ ವಿನಯ್ ತಾಯಿಯ ಕಾಲಿಗೂ ಬಿದ್ದಿದ್ದಾರೆ. ಈ ಒಂದು ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ.
ಸಿಟಿ ಲೈಟ್ಸ್ ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ಬಂದಿದೆ. ಮೊದಲ ದಿನ ಚಿತ್ರ ನೋಡಿದವರಿಗೆ ಖುಷಿ ಆಗಿದೆ. ಚಿತ್ರದಲ್ಲಿ ದುನಿಯಾ ವಿಜಯ್ ಒಳ್ಳೆಯ ಸಂದೇಶ ಕೂಡ ಇಟ್ಟಿದ್ದಾರೆ.
ಸಿಟಿ ಲೈಟ್ಸ್ ಚಿತ್ರವನ್ನ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಈ ಚಿತ್ರಕ್ಕಿದೆ. ದುನಿಯಾ ವಿಜಯ್ ಹಾಗೂ ವಿಕ್ರಮ್ ಆರ್ಯ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಶಿವಸೇನಾ ಕ್ಯಾಮರಾವರ್ಕ್ ಮಾಡಿದ್ದಾರೆ. ಡೈಲಾಗ್ ರೈಟರ್ ಮಾಸ್ತಿ ಡೈಲಾಗ್ ಬರೆದಿದ್ದಾರೆ. ಒಂದು ರೋಲ್ ಕೂಡ ಮಾಡಿದ್ದಾರೆ. ಉಮಾಶ್ರೀ ಅವರು ಒಂದು ಪ್ರಮುಖ ರೋಲ್ ಮಾಡಿದ್ದಾರೆ. ನವ ಕಲಾವಿದರಿಗೂ ಈ ಚಿತ್ರದಲ್ಲಿ ದುನಿಯಾ ವಿಜಯ್ ಅವಕಾಶ ಮಾಡಿಕೊಟ್ಟಿದ್ದಾರೆ ಅಂತ ಹೇಳಬಹುದು.














