Last Updated:
ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಈಸ್ಟ್ ಜೋನ್ (ಪೂರ್ವ ವಲಯ) ತಂಡ ಕ್ಯಾಪ್ಟನ್ ಇಶಾನ್ ಕಿಶನ್ ಸಿಡಿಸಿದ ದ್ವಿಶತಕದ (270) ನೆರವಿನಿಂದ 708 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಈ ಮೊತ್ತ ಚೆಪಾಕ್ನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ದಾಖಲಾಗಿರುವ ಕ್ರಿಕೆಟ್ ಇತಿಹಾಸದಲ್ಲೇ ಇದು 3ನೇ ದೊಡ್ಡ ಮೊತ್ತವಾಗಿದೆ.
ಕ್ಯಾಪ್ಟನ್ ಇಶಾನ್ ಕಿಶನ್ (Ishan Kishan) ಸಿಡಿಸಿದ 270 ರನ್ಗಳ ಐತಿಹಾಸಿಕ ಇನ್ನಿಂಗ್ಸ್ ನೆರವಿನಿಂದ ಪೂರ್ವ ವಲಯ (East Zone) ತಂಡವು ದುಲೀಪ್ ಟ್ರೋಫಿ ಫೈನಲ್ನಲ್ಲಿ (Duleep Trophy Final) ದಕ್ಷಿಣ ವಲಯ (South Zone) ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಪೂರ್ವವಲಯ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 708 ರನ್ಗಳಿಗೆ ಆಲೌಟ್ ಆಗಿದೆ. ಇದು ದುಲೀಪ್ ಟ್ರೋಫಿ ಇತಿಹಾಸದಲ್ಲಿ ಈಸ್ಟ್ ಜೋನ್ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿದ್ದರೆ, ದುಲೀಪ್ ಟ್ರೋಫಿ ಫೈನಲ್ ಇತಿಹಾಸದಲ್ಲಿ ಒಟ್ಟಾರೆ ನಾಲ್ಕನೇ ಅತಿ ದೊಡ್ಡ ಸ್ಕೋರ್ ಆಗಿದೆ.














