ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಡ್ರಮ್ ದೇವ ಅವರು ರಾಜರಾಜೇಶ್ವರಿ ನಗರದಲ್ಲಿರೋ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಡ್ಮಮ್ ದೇವ ಅವರ ನಿಧನ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ಡ್ಮಮ್ ದೇವ ಅವರು ಅಪಾರ ಶಿಷ್ಯವೃಂದ ಹೊಂದಿದ್ದು, ಅನೇಕರು ಕಣ್ಣೀರು ಹಾಕಿದ್ದಾರೆ.
ಕಳೆದ ಮೂರುವರೆ ವರುಷದಿಂದ ಡ್ರಮ್ ದೇವ ಅವರಿಗೆ ಆರೋಗ ಸರಿಯಿರಲಿಲ್ಲ ಎಂದು ಅವರ ಮಗಳು ರಿಶೋನಾ ಹೇಳಿದ್ದಾರೆ. ಗ್ಯಾಂಗ್ರೀನ್ ಆಗಿತ್ತು, ಇದಾದ ಮೇಲೂ ಕೃತಕ ಕಾಲು ಬಳಸಿ ಡ್ರಮ್ಸ್ ಬಾರಿಸುತ್ತಿದ್ದರು. ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಪಿ ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯಿಂದ ಬಂದ ಮೇಲೆ ಸ್ವಲ್ಪ ಗುಣಮುಖರಾಗಿದ್ದರು. ಆದರೆ ಕಳೆದ ಎರಡು ದಿನದಿಂದ ತುಂಬಾ ಅನಾರೋಗ್ಯ ಹೆಚ್ಚಾಯ್ತು ಎಂದು ಡ್ರಮ್ ದೇವಾ ಮಗಳು ರಿಶೋನಾ ಹೇಳಿದ್ದಾರೆ.
ಆಸ್ಪತ್ರೆಯಲ್ಲಿಯೇ ಬೆಡ್ ಮೇಲೆ ಡ್ರಮ್ಸ್ ನುಡಿಸೋರು. ಡ್ರಮ್ಸ್ ನನ್ನ ಪ್ರಾಣ ಅನ್ನೋರು. ಆಗಾಗ ಡ್ರಮ್ಸ್ ಸ್ಟಿಕ್ಸ್ ಕೊಡು ಅಂತ ಕೇಳೋರು. ಸ್ಟ್ರೋಕ್ ಆದ ಮೇಲೂ ಅವರ ಅನಾರೋಗ್ಯ ಹೆಚ್ಚಾಯ್ತು. 300ಕ್ಕೂ ಹೆಚ್ಚು ಹಾಡುಗಳಿಗೆ ಡ್ರಮ್ಸ್ ನುಡಿಸಿದ್ದಾರೆ.
ನಾನು ಚಿಕ್ಕಿಂದಿನಿಂದಲೂ ತಂದೆ ಡ್ರಮ್ಸ್ ನುಡಿಸೋದು ನೋಡಿದ್ದೇವೆ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡು ಟ್ಯುನ್ ಅವರದ್ದೇ, ರಾಜ್ ಕುಮಾರ್, ಪುನೀತ್ ಹೀಗೆ ಅನೇಕ ನಟರ ಹಾಡುಗಳಿಗೆ ಡ್ರಮ್ಸ್ ನುಡಿಸಿದ್ದಾರೆ ಎಂದು ಮಗಳು ರಿಶೋನಾ ಭಾವುಕರಾದ್ರು.
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ದೇವ ಅವರು, ಹೆಸರಾಂತ ಸಂಗೀತ ನಿರ್ದೇಶಕರಾದ ಹಂಸಲೇಖ, ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್, ಸತ್ಯಂ, ಟಿ.ಜಿ.ಲಿಂಗಪ್ಪ, ವಿ. ಮನೋಹರ್, ಗುರುಕಿರಣ್ ಸೇರಿ ಅನೇಕರ ಜೊತೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾದ ಅನೇಕ ಹಾಡುಗಳಿಗೆ ಡ್ರಮ್ ದೇವ ಅವರ ಡ್ರಮ್ ಬಾರಿಸಿದ್ದಾರೆ. ಕೇವಲ ರೆಕಾರ್ಡಿಂಗ್ ಅಷ್ಟೇ ಅಲ್ಲದೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖ ಆರ್ಕೆಸ್ಟ್ರಾ ಹಾಗೂ ಲೈವ್ ಶೋಗಳಲ್ಲಿ ಅವರ ಡ್ರಮ್ ರಿದಮ್ಗೆ ಜನರು ಕುಣಿದು ಕುಪ್ಪಳಿಸ್ತಿದ್ರು.
ಡಮ್ಮರ್ ದೇ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕರು, ವಾದ್ಯ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ನಗರದ ಅವರ ಮನೆಯಲ್ಲೇ ಭಾನುವಾರ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಕ್ರಿಶ್ಚಿಯನ್ ವಿಧಿ ವಿಧಾನದ ಮೂಲಕ ಇಂದು ಅಂತ್ಯಕ್ರಿಯೆ ನಡೆಯಲಿದೆ.













