Last Updated:
Donald Trump: ಸಾಮಾಜಿಕ ಜಾಲತಾಣ ಅಂದ್ರೆ ಸುಮ್ಮನೇನಾ? ಯಾವಾಗ, ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಅದರಲ್ಲೂ, ಈ ಬಾರಿ ವೈರಲ್ ಆಗಿ, ಇಡೀ ಜಗತ್ತಿನ ಗಮನ ಸೆಳೆದಿರುವುದು ಬಾಂಗ್ಲಾದೇಶದ ಒಂದು ಸಾಮಾನ್ಯ ಎಮ್ಮೆ! ಅರೇ, ಎಮ್ಮೆಲಿ ಅಂಥದ್ದೇನಿದೆ ವಿಶೇಷ? ಅಂತ ಕೇಳ್ತೀರಾ? ಇದೆ ಮಾರಾಯ್ರೆ, ಅದರ ಮುಖ ನೋಡಿದ್ರೆ ನೆನಪಾಗೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಢಾಕಾ (ಬಾಂಗ್ಲಾದೇಶ): ಸಾಮಾಜಿಕ ಜಾಲತಾಣ (Social Media) ಅಂದ್ರೆ ಸುಮ್ಮನೇನಾ? ಯಾವಾಗ, ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಅದರಲ್ಲೂ, ಈ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಹೆಚ್ಚು ವೈರಲ್ (Viral) ಆಗುತ್ತಿರುವುದು ಅಂದರೆ ಸಿನಿಮಾ ನಟ-ನಟಿಯರು, ಕ್ರಿಕೆಟರ್ಗಳು ಜೊತೆಗೆ ರಾಜಕಾರಣಿಗಳು! ಆದರೆ, ಈ ಬಾರಿ ವೈರಲ್ ಆಗಿ, ಇಡೀ ಜಗತ್ತಿನ ಗಮನ ಸೆಳೆದಿರುವುದು ಬಾಂಗ್ಲಾದೇಶದ (Bangaldeh) ಒಂದು ಸಾಮಾನ್ಯ ಎಮ್ಮೆ! ಅರೇ, ಎಮ್ಮೆಲಿ (Buffolo) ಅಂಥದ್ದೇನಿದೆ ವಿಶೇಷ? ಅಂತ ಕೇಳ್ತೀರಾ? ಇದೆ ಮಾರಾಯ್ರೆ, ಅದರ ಮುಖ ನೋಡಿದ್ರೆ ನೆನಪಾಗೋದು ಅಮೆರಿಕದ ಅಧ್ಯಕ್ಷ (America President) ಡೊನಾಲ್ಡ್ ಟ್ರಂಪ್ (Donlad Trump)!
ಹೌದು, ಬಾಂಗ್ಲಾದೇಶದ ಹಳ್ಳಿಯೊಂದರ ಎಮ್ಮೆಯ ಫೋಟೋ ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಯಾಕೆಂದರೆ, ಆ ಎಮ್ಮೆಯ ಮುಖವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೋಲುತ್ತದೆ! ಹಾಗಾಗಿ, ಜನರು ಅದನ್ನು ಅವರ “ಅವಳಿ ಸಹೋದರ” ಎಂದು ಕರೆಯುತ್ತಿದ್ದಾರೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಈ ಎಮ್ಮೆ 700 ಕಿಲೋಗ್ರಾಂಗಳಷ್ಟು ತೂಕವಿದ್ದು, ಮುಖ್ಯವಾಗಿ ಸೋಯಾಬೀನ್ ಮತ್ತು ಜೋಳವನ್ನು ತಿನ್ನುತ್ತದೆ. ಇನ್ನೂ, ಫೋಟೋದಲ್ಲಿ ಎಮ್ಮೆಯನ್ನ ಹಗ್ಗಹಾಕಿ ಕಟ್ಟಿ ಹಾಕಲಾಗಿರುವಂತೆ ಕಂಡಿದೆ. ಅದರಲ್ಲೂ, ಆ ಎಮ್ಮೆಯ ಕಣ್ಣುಗಳು, ಹಣೆ ಮತ್ತು ಬಾಯಿ ಡೊನಾಲ್ಡ್ ಟ್ರಂಪ್ ಅವರನ್ನು ಹೋಲುತ್ತವೆ. ಅದರಂತೆ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ತಕ್ಷಣ, ಸಾವಿರಾರು ಬಳಕೆದಾರರು ಅದನ್ನು ಶೇರ್ ಮಾಡಲು ಪ್ರಾರಂಭಿಸಿದ್ದಾರೆ. ಅದರಲ್ಲೂ, ಜನರು ಅಕ್ಕಪಕ್ಕ ಎಮ್ಮೆ ಹಾಗೂ ಟ್ರಂಪ್ ಚಿತ್ರಗಳನ್ನ ಹಾಕಿ ಹೋಲಿಕೆ ಮಾಡುತ್ತಿದ್ದಾರೆ.
ಮುಂದುವರೆದು, ಜನರು ಫೋಟೋಗಳನ್ನ ಶೇರ್ ಮಾಡುತ್ತಾ, ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ. ಅದರಂತೆ, ಒಬ್ಬ ಬಳಕೆದಾರರು “ಟ್ರಂಪ್ ಅವರ ನಿಜವಾದ ಅವಳಿ ಮರಿ ಪತ್ತೆಯಾಗಿದೆ!” ಎಂದು ಶೀರ್ಷಿಕೆ ನೀಡಿದ್ದಾರೆ. ಮತ್ತೊಬ್ಬರು, “700 ಕಿಲೋಗ್ರಾಂಗಳಷ್ಟು ತೂಕದ ಟ್ರಂಪ್ ಯುಎಸ್ ಚುನಾವಣೆಯಲ್ಲಿ ಗೆದ್ದ ನಂತರ ಇಲ್ಲಿ ಬಂದು ನಿವೃತ್ತರಾದರು” ಎಂದು ಕಾಮೆಂಟ್ ಮಾಡಿದ್ದಾರೆ.
A buffalo named after Donald Trump has become an unexpected viral attraction in Bangladesh ahead of Eid al-Adha. The pale-haired “Trump” buffalo, weighing nearly 700 kilograms, has drawn visitors and selfie-seekers to a farm near Dhaka because of its resemblance to the US… pic.twitter.com/18h9quxYt9
— India Today Global (@ITGGlobal) May 21, 2026
ಇನ್ನೂ, ಎಮ್ಮೆಯ ಮಾಲೀಕರು ಇದು ಅವರ ಅತ್ಯಂತ ಪ್ರೀತಿಯ ಮತ್ತು ಆರೋಗ್ಯಕರ ಎಮ್ಮೆ ಎಂದು ಹೇಳಿದರು. ಇದಕ್ಕೆ ಪ್ರತಿದಿನ ಸೋಯಾಬೀನ್, ಜೋಳ ಮತ್ತು ಹಸಿರು ಮೇವನ್ನಾಗಿ ನೀಡಲಾಗುತ್ತದೆ. ಅದರಂತೆ, ಈ ಆಹಾರವು ಅದರ 700 ಕಿಲೋಗ್ರಾಂಗಳಷ್ಟು ತೂಕವನ್ನು ತಲುಪಲು ಸಹಾಯ ಮಾಡಿದೆ ಎನ್ನುತ್ತಾರೆ ಮಾಲೀಕರು.
ಅದರಲ್ಲೂ ಶಾಂತವಾಗಿರುವ ಈ ಎಮ್ಮೆಯನ್ನ ಗ್ರಾಮಸ್ಥರು ಇದೀಗ ಟ್ರಂಪ್ ಎಂದೇ ಕರೆಯುತ್ತಾರೆ ಎನ್ನಲಾಗಿದೆ. ಇನ್ನೂ, ಬಾಂಗ್ಲಾದೇಶದಲ್ಲಿ ಹುಟ್ಟಿದ ಈ ವೈರಲ್ ಫೋಟೋ ಭಾರತ, ಪಾಕಿಸ್ತಾನ, ಅಮೆರಿಕ ಮತ್ತು ಇತರ ದೇಶಗಳಿಗೂ ಹೆಚ್ಚು ಹೆಚ್ಚಾಗಿ ಶೇರ್ ಆಗುತ್ತಿದೆ. ಅದರಲ್ಲೂ ಒಬ್ಬ, “ಈ ಎಮ್ಮೆಯನ್ನು ನೋಡಿದರೆ, ಟ್ರಂಪ್ 2028 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ತೋರುತ್ತದೆ.” ಇನ್ನೊಬ್ಬರು, “‘ಮೇಕ್ ಅಮೇರಿಕಾ ಗ್ರೇಟ್ ಅಗೇನ್’ ಮುಖವು ಎಮ್ಮೆಗೆ ಸರಿಹೊಂದುತ್ತದೆ” ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ಒಂದು ಪುಟ್ಟ ಹಳ್ಳಿಯ, ಸಾಮಾನ್ಯ ಎಮ್ಮೆ ಇವತ್ತು ಜಗತ್ತಿನ ಮೂಲೆ ಮೂಲೆಗೆ ತಲುಪಿದೆ. ಅದರ ‘ಟ್ರಂಪ್ ಹೇರ್ಸ್ಟೈಲ್’ ನೆಟ್ಟಿಗರಿಗೆ ಒಂದು ದಿನದ ನಗು ಕೊಟ್ಟಿದೆ, ಜೊತೆಗೆ ಸಾವಿರಾರು ಮೀಮ್ಸ್ಗಳಿಗೂ ಆಹಾರವಾಗಿದೆ. ಆದ್ರೆ ನಗುವಿನ ಜೊತೆಗೆ ಜವಾಬ್ದಾರಿಯೂ ಮುಖ್ಯ. ಯಾಕೆಂದರೆ, ಆ ಎಮ್ಮೆಗೆ ತಾನು ‘ಟ್ರಂಪ್’ ತರ ಕಾಣ್ತೀನಿ ಅಂತ ಗೊತ್ತಿಲ್ಲ. ಅದಕ್ಕೆ ರಾಜಕೀಯ ಗೊತ್ತಿಲ್ಲ, ಟ್ರೋಲ್ ಗೊತ್ತಿಲ್ಲ. ಅದಕ್ಕೆ ಬೇಕಾಗಿರೋದು ಹೊಟ್ಟೆ ತುಂಬಾ ಮೇವು ಮಾತ್ರ. ಇನ್ನೂ, ಟ್ರಂಪ್ಗೂ ಕೂಡ ಈ ವೈರಲ್ ಚಿತ್ರದ ಬಗ್ಗೆ ಗೊತ್ತೋ ಗೊತ್ತಿಲ್ಲವೋ!
May 21, 2026 11:19 PM IST













