Last Updated:
ಡಿಕೆಶಿ ಸಿಎಂ ಆಗೋ ಕಾಲ ಸನಿಹವಾಗ್ತಿದೆ. ಪಟ್ಟದಿಂದ ಸಿದ್ದು ಕೆಳಗೆ ಇಳೀತಿದ್ದಂತೆ ಡಿಕೆಶಿಯ ಕನಸಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇರೋದು. ಮೂರ್ನಾಲ್ಕು ದಿನದಲ್ಲಿ ಪಟ್ಟಕ್ಕೇರಲಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಧಿಕಾರ ಸ್ವೀಕರಿಸಲಿದ್ದಾರೆ.
ಬೆಂಗಳೂರು: ಕಂಡಿದ್ದ ಕನಸು ಕೈಗೂಡ್ತಿದೆ (Dream Come True). ಸಿಎಂ ಪಟ್ಟ (Karnataka CM) ಅನ್ನೋದು ಹೊಸ್ತಿಲು ದಾಟಿ ಬಂದಿದೆ. ಇನ್ನೇನು ಮುಹೂರ್ತ ಇಡೋದೊಂದೇ ಬಾಕಿ. ಶುಭ ಗಳಿಗೆಯಲ್ಲಿ ಪಟ್ಟಕ್ಕೇರೋದೊಂದೇ ಬಾಕಿ. ಡಿಕೆಶಿ (DK Shivakumar) ಪಾಲಿಗೆ ಅದೃಷ್ಟ ದೇವತೆಯೇ ಒಲಿದು ಬಂದಿದ್ದಾಳೆ. ಕೈಗೆಟಕದ ಗಗನ ಕುಸುಮವಾಗಿದ್ದ ಸಿಎಂ ಖುರ್ಚಿ, ಸಿಂಹಾಸನವಾಗಿ ಕಣ್ಮುಂದೆ ನಿಂತಿದೆ. ಡಿಕೆಶಿಯೇ ಕರ್ನಾಟಕ ಮುಂದಿನ ಸಿಎಂ ಅನ್ನೋದು ಗೊತ್ತಾಗ್ತಿದ್ದಂತೆ ಡಿಕೆ ಬಳಗದಲ್ಲಿ (Congress CLP Meeting in Bengaluru) ಹಬ್ಬದ ಸಂಭ್ರಮ ಮನೆ ಮಾಡಿದೆ.
ಇಷ್ಟು ದಿನ ಯಾವುದಕ್ಕಾಗಿ ಕಾಯ್ತಿದ್ರೋ, ಯಾವೊಂದು ಅಧಿಕಾರಕ್ಕಾಗಿ ಹವಣಿಸ್ತಿದ್ರೋ ಅದೇ ಈಗ ಭಾಗ್ಯದ ಬಾಗಿಲು ತೆರೆದು ಬಂದಿದೆ. ಹೀಗಾಗಿಯೇ ಡಿಕೆ ಶಿವಕುಮಾರ್ ದಿಲ್ಲಿ ನಾಯಕರಿಗೆ ಕೃತಜ್ಞತೆ ಅರ್ಪಿಸ್ತಿದ್ದಾರೆ. ಪಟ್ಟಕ್ಕೆ ದಾರಿ ಮಾಡಿ ಕೊಟ್ಟ ಖರ್ಗೆ, ಸೋನಿಯಾ ಮುಂದೆ ತಲೆ ಬಾಗಿ ನಿಂತಿದ್ದಾರೆ.
ಸಿದ್ದರಾಮ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದಂತೆಯೇ ಡಿಕೆಶಿ ಹಾಗೂ ಸಿದ್ದು ದೆಹಲಿ ಕಡೆ ಮುಖ ಮಾಡಿದ್ದರು. ಇಬ್ಬರೂ ಪ್ರತ್ಯೇಕವಾಗಿಯೇ ದಿಲ್ಲಿ ನಾಯಕರ ಅಂಗಳ ತಲುಪಿದ್ದರು. ಮಲ್ಲಿಕಾರ್ಜುನ ಖರ್ಗೆಯನ್ನ ಭೇಟಿ ಮಾಡಿದ ಡಿಕೆಶಿ, ಪಾದ ಮುಟ್ಟಿ ಆಶೀರ್ವಾದ ಪಡೆದರು. ಬಳಿಕ ರಾಹುಲ್ ಗಾಂಧಿಯನ್ನೂ ಭೇಟಿ ಮಾಡಿ ಧನ್ಯವಾದ ತಿಳಿಸಿದ್ದರು. ಈ ಮಧ್ಯೆಯೇ ಮಾತನಾಡಿದ ಡಿಕೆಶಿ ನಾಳೆಯ ಸಿಎಲ್ಪಿ ಸಭೆಯ ಗುಟ್ಟು ಬಿಚ್ಚಿಟ್ಟರು. ಆದರೆ, ತಮ್ಮ ಆಯ್ಕೆ ಬಗ್ಗೆ ಮಾತ್ರ ಎಲ್ಲೂ ಸುಳಿವು ಕೊಡ್ಲಿಲ್ಲ.
ಇಂದು CLP ಸಭೆ
- ಶಾಸಕಾಂಗ ಪಕ್ಷದ ಸಭೆಗೆ ಸಿದ್ಧತೆ
- ಸಿಎಲ್ಪಿ ಸಭೆಯಲ್ಲಿ ಗೊಂದಲ ಆಗದಂತೆ ಮುನ್ನೆಚ್ಚರಿಕೆ
- ಸಿದ್ದರಾಮಯ್ಯಗೇ ಹೊಣೆ ನೀಡಲಿರುವ ಹೈಕಮಾಂಡ್
- ಡಿಕೆಶಿ CLP ಲೀಡರ್ ಎಂದು ಘೋಷಿಸಲಿರೋ ಸಿದ್ದು
- ಬಳಿಕ ಸಿದ್ದರಾಮಯ್ಯ ಜೊತೆಗೆ ತೆರಳಿ ಡಿಕೆಶಿ ಹಕ್ಕು ಮಂಡನೆ
ಇಂದು ಶಾಸಕಾಂಗ ಪಕ್ಷದ ಸಭೆಗೆ ನಡೆಯಲಿದ್ದು, ಸಿಎಲ್ಪಿ ಸಭೆಯಲ್ಲಿ ಗೊಂದಲ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇದರ ಹೊಣೆಯನ್ನ ಸಿದ್ದರಾಮಯ್ಯನವರಿಗೇ ಹೈಕಮಾಂಡ್ ನೀಡಿದ್ದು, ಡಿಕೆಶಿಯನ್ನ CLP ಲೀಡರ್ ಅಂತಾ ಸಿದ್ದರಾಮಯ್ಯ ಘೋಷಿಸಲಿದ್ದಾರೆ. ಬಳಿಕ ಸಿದ್ದರಾಮಯ್ಯ ಜೊತೆಗೇ ತೆರಳಿ ಡಿಕೆಶಿ ಹಕ್ಕು ಮಂಡನೆ ಮಾಡಲಿದ್ದಾರೆ.
ಪಕ್ಷದ ಅಧಿಕಾರಕ್ಕಾಗಿ ವಿಧಾನಸೌಧದ ಮೆಟ್ಟಿಲಾಗ್ತೀನಿ ಅಂತಿದ್ದ ಡಿಕೆಶಿ ಈಗ, ಇದೇ ಮೆಟ್ಟಿಲುಗಳ ಮೇಲೆ ಪಟ್ಟಕ್ಕೇರೋದಕ್ಕೆ ರೆಡಿಯಾಗ್ತಿದ್ದಾರೆ. ವಿಧಾನಸೌಧದ ಮುಂದೆ ಡಿಕೆಶಿಯ ಪದಗ್ರಹಣ ನಡೆಯಲಿದ್ದು, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಟಾಪ್ ಒನ್ ಲೀಡರ್ಗಳಿಗೆಲ್ಲಾ ಆಹ್ವಾನ ಕೊಟ್ಟಿದ್ದಾರೆ. ಜೂನ್ 1 ಅಥವಾ 3ನೇ ತಾರೀಖು ಡಿಕೆಶಿ ಪದಗ್ರಹಣ ನಡೆಯೋ ಸಾಧ್ಯತೆಯಿದ್ದು, ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ದೈವ ಬಲಕ್ಕಿಂತ ಗುರು ಬಲ ದೊಡ್ಡದು ಅಂತಾರೆ. ಹೀಗಾಗಿಯೇ ಏನೋ ಡಿಕೆಶಿ ಕೂಡಾ ಗುರು ಬಲವನ್ನೇ ಹೆಚ್ಚು ನಂಬ್ಕೊಂಡಿದ್ದಾರೆ. ಪೂಜೆ ಪುನಸ್ಕಾರ, ದೇವರು ದೈವ ಅಂತಾ ರೌಂಡ್ಸ್ ಹಾಕ್ತಿರ್ತಾರೆ. ಸಂಕಷ್ಟವೇ ಬರಲಿ, ಖುಷಿಯೇ ಇರಲಿ ಮೊದಲು ಹೋಗೋದೇ ದೇವರ ಮೊರೆ. ಹೀಗಾಗಿ ಸಮಯ ನೋಡ್ಕೊಂಡೇ ಪಟ್ಟಾಭಿಷೇಕಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಡಿಕೆಶಿಯ ಆಪ್ತ ಜ್ಯೋತಿಷಿ ಡಾ. ಆರಾಧ್ಯ, ಜೂನ್ 2ರಿಂದ ಡಿಕೆಶಿಗೆ ಒಳ್ಳೆಯ ದಿನ. 2028ರಲ್ಲಿಯೂ ಇವರೆ ಸಿಎಂ ಆಗಿರ್ತಾರೆ. 19 ವರ್ಷಗಳ ಕಾಲ ಡಿಕೆಶಿಗೆ ರಾಜಯೋಗ ಇದೆ. ಕೆಕೆ ಗೆಸ್ಟ್ ಹೌಸ್ನ ಸರ್ಕಾರಿ ನಿವಾಸ ಮಾಡ್ಕೊಳ್ಳೋದಕ್ಕೆ ಸೂಚನೆ ನೀಡಿದ್ದೇನೆ. ದೇವರ ಕೋಣೆಯ ಬಾಗಿಲು ಹಾಗೂ ಗೇಟ್ ಬದಲಾವಣೆ ಹೇಳಿದ್ದೇನೆ. ಅದ್ರಂತೆಯೇ ಅಧಿಕಾರಿಗಳು ನೋಟ್ ಮಾಡ್ಕೊಂಡಿದ್ದಾರೆ ಅಂತಾ ಮಾಹಿತಿ ನೀಡಿದ್ದಾರೆ.
ಇನ್ನು ರಾಜಗುರು ದ್ವಾರಕಾನಾಥ್ ಕೂಡಾ ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಮಾತಾಡಿದ್ದಾರೆ. ಜೂನ್ 5 ಅಥವಾ 6ರಂದು ಪ್ರಮಾಣ ವಚನ ಸ್ವೀಕರಿಸಲಿ ಅಂತಾ ಸಲಹೆ ನಿಡಿದ್ದಾರೆ. ಡಿಕೆಶಿಗೆ ಒಳ್ಳೆಯದಾಗಲಿ ಅಂತಾ ಶೃಂಗೇರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಈ ಹಿಂದೆ ನೀನು ಮುಖ್ಯಮಂತ್ರಿ ಆಗಿಯೇ ಆಗ್ತೀಯ ಎಂದು ಹೇಳಿದ್ದೆ. ಅದ್ರಂತೆಯೇ ಆಗಿದ್ದಾರೆ ಅಂದ್ರು. ಒಟ್ನಲ್ಲಿ ಡಿಕೆಗೆ ಶುಭಕಾಲ ಕೂಡಿ ಬಂದಿದೆ. ಅಂದ್ಕೊಂಡಂತೆ ವಿಧಾನಸೌಧದ ಮೆಟ್ಟಿಲುಗಳ ಅಧಿಕಾರಕ್ಕೇರೋದಕ್ಕೆ ಸಜ್ಜಾಗ್ತಿದ್ದಾರೆ. (ವರದಿ: ಬ್ಯೂರೋ ರಿಪೋರ್ಟ್ ನ್ಯೂಸ್18)
Bangalore [Bangalore],Bangalore,Karnataka
May 30, 2026 12:23 PM IST













