Darshan: ಮಾಫಿ ಸಾಕ್ಷಿ ತಡೆಯೋಕೆ ಸಿಕ್ಕಾಪಟ್ಟೆ ಪ್ರಯತ್ನ, ದರ್ಶನ್ ಸೇರಿ ಡಿಗ್ಯಾಂಗ್​​ನ ಕಾಡ್ತಿರೋದು ಇದೊಂದೇ ಭಯ! | Renukaswamy case darshan latest update approver | | ACTPnews

ಪವಿತ್ರಾ-ದರ್ಶನ್ (ಚಿತ್ರ ಕೃಪೆ: ಪವಿತ್ರಾ - ದರ್ಶನ್ ಇನ್​ಸ್ಟಾಗ್ರಾಮ್)


Last Updated:

Darshan: ನಿನ್ನೆ ಪ್ರದೋಷ್ ಹೇಳಿಕೆ ದಾಖಲಿಸಲಾಗಿದೆ. ಇಂದು ಕೂಡಾ ಅದು ಮುಂದುವರಿಯುತ್ತಿದೆ. ಈ ವೇಳೆ ದರ್ಶನ್ ಸೇರಿ ಡಿಗ್ಯಾಂಗ್ ಭಯ ಬಿದ್ದಿರೋದ್ಯಾಕೆ?

ಪವಿತ್ರಾ-ದರ್ಶನ್ (ಚಿತ್ರ ಕೃಪೆ: ಪವಿತ್ರಾ - ದರ್ಶನ್ ಇನ್​ಸ್ಟಾಗ್ರಾಮ್)
ಪವಿತ್ರಾ-ದರ್ಶನ್ (ಚಿತ್ರ ಕೃಪೆ: ಪವಿತ್ರಾ – ದರ್ಶನ್ ಇನ್​ಸ್ಟಾಗ್ರಾಮ್)

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಪ್ರಾಸಿಕ್ಯೂಷನ್ ವಿಟ್ನೆಸ್ ಪ್ರದೋಷ್ ಇಡೀ ಕೊಲೆಯ ಬಗ್ಗೆ ಸಂಪೂರ್ಣವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಕೊನೆಯ ಕಸರತ್ತು ಎಂಬಂತೆ ದರ್ಶನ್ (Darshan) ಪರ ವಕೀಲರು ಹೈಕೋರ್ಟ್ ಮತ್ತು ಸೆಷೆನ್ಸ್ ಕೋರ್ಟ್ ನಲ್ಲಿ ನಡೆಸಿದ ಹೋರಾಟ ವಿಫಲಾಗಿದೆ.

ಪ್ರಾಸಿಕ್ಯೂಷನ್ ವಿಟ್ನೆಸ್ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು

ರೇಣುಕಾಸ್ವಾಮಿ ಸ್ವಾಮಿ ಕೊಲೆ ಪ್ರಕರಣದ ಪ್ರಾಸಿಕ್ಯೂಷನ್ ವಿಟ್ನೆಸ್ ಪ್ರದೋಷ್ ನ ಕಾಮಾಕ್ಷಿಪಾಳ್ಯ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಂದ ಬಿಗಿ ಭದ್ರತೆಯಲ್ಲಿ ಸಿಸಿಎಚ್ 59 ರ ಕೋರ್ಟ್ ಗೆ ಕರೆತಂದಿದ್ದರು. ಮಾಫಿ ಸಾಕ್ಷಿ ಹೇಳಿಕೆ ಸಂಬಂಧ ಕೋರ್ಟ್ ಬಳಿ ಹೆಚ್ಚುವರಿ ಪೊಲೀಸರನ್ನು ಕೂಡಾ ನಿಯೋಜಿಸಿ ಬಂದೋಬಸ್ತ್ ಸಹ ಮಾಡಿಕೊಳ್ಳಲಾಗಿತ್ತು.

ಇತ್ತ ಮೂರು ದಿನಗಳ ಕಾಲ ಪ್ರದೋಷ್ ಹೇಳಿಕೆ ತಡೆಹಿಡಿಯುವಂತೆ ದರ್ಶನ್ ಪರ ವಕೀಲರು ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಬಗ್ಗೆ ಟ್ರಯಲ್ ಕೋರ್ಟ್ ನ ಗಮನಕ್ಕೆ ತಂದು ಮೂರು ದಿನಗಳ ಕಾಲ ಹೇಳಿಕೆ ದಾಖಲು ಮುಂದೂಡುವಂತೆ ದರ್ಶನ್ ಪರ ವಕೀಲರು ಮೆಮೊ ಸಲ್ಲಿಕೆ ಮಾಡಿದ್ದರು.

ಇದಕ್ಕೆ ಎಸ್ ಪಿ ಪಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೋರ್ಟ್ ಸಹ ದರ್ಶನ್ ಮೆಮೊ ಅರ್ಜಿಯನ್ನ ವಜಾ ಮಾಡಿತು. ಇತ್ತ ಹೈಕೋರ್ಟ್ ನಲ್ಲಿ ಸಹ ದರ್ಶನ್ ಅರ್ಜಿ ವಜಾಗೊಂಡಿತು.

ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಪ್ರದೋಷ್

ಇನ್ನು ವಿಚಾರಣೆ ಕೈಗೆತ್ತಿಕೊಂಡ ಮಾನ್ಯ ನ್ಯಾಯಾಧೀಶರು ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್ ಮೂಲಕ ಹೇಳಿಕೆ ದಾಖಲಿಸಿದ್ದರು. ಪರಪ್ಪನ ಅಗ್ರಹಾರ ಜೈಲಿಂದ ದರ್ಶನ್, ಪವಿತ್ರಗೌಡ ಸೇರಿದಂತೆ 6 ಆರೋಪಿಗಳು ವಿಸಿ ಮೂಲಕ ಹಾಜರಾಗಿದ್ರು. ಉಳಿದಂತೆ ಇತರ ಆರೋಪಿಗಳು ಖುದ್ದು ಕೋರ್ಟ್ ಗೆ ಹಾಜರಾಗಿದ್ದರು.

ತನ್ನ ಪರಿಚಯ ಹಾಗು ದರ್ಶನ್ ನಡುವಿನ ಸ್ನೇಹ ಸಂಬಂಧದಿಂದ ಹಿಡಿದು ಕೊಲೆಯಾದ ದಿನ ನಡೆದ ಬೆಳವಣಿಗೆಗಳು, ಹೇಗೆ ಕೊಲೆ ಮಾಡಲಾಯಿತು. ಯಾರ್ಯಾರ ಪಾತ್ರ ಏನು ಹೀಗೆ ಸಂಪೂರ್ಣವಾಗಿ ಈ ಹಿಂದೆ ಮಾಫಿ ಅರ್ಜಿಯಲ್ಲಿ ದಾಖಲಿಸಿದ್ದ ಅಂಶಗಳನ್ನ ಪ್ರದೋಷ್ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದು, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಕೇಳಿದ ಮುಖ್ಯ ವಿಚಾರಣೆಯ ಪ್ರಶ್ನೆಗಳಿಗೆ ಸಹ ಪ್ರದೋಷ್ ಉತ್ತರಿಸಿದ್ದಾರೆ.

ಅಲ್ಲದೆ ಆರೋಪಿಗಳನ್ನ ಗುರುತು ಮಾಡುವ ಪ್ರಕ್ರಿಯೆಯನ್ನ ಸಹ ಪ್ರದೋಷ್ ಮಾಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಯನ್ನ ನ್ಯಾಯಾಧೀಶರು ಸಂಪೂರ್ಣವಾಗಿ ದಾಖಲು ಮಾಡಿದ್ದಾರೆ.

ಹೇಳಿಕೆಯಿಂದಲೇ ಶಿಕ್ಷೆಯಾಗುತ್ತಾ?

ಪ್ರದೋಷ್ ನ ಮಾಫಿ ಸಾಕ್ಷಿ ಹೇಳಿಕೆ ದರ್ಶನ್, ಪವಿತ್ರಗೌಡ ಸೇರಿದಂತೆ 16 ಆರೋಪಿಗಳಲ್ಲಿ ಢವ ಢವ ಶುರುಮಾಡಿದ್ದು, ಒಂದಷ್ಟು ಚಿಂತೆಗೆ ದೂಡುವಂತೆ ಮಾಡಿದೆ. ಸಹಜವಾಗಿ ಮಾಫಿ ಸಾಕ್ಷಿಯ ಹೇಳಿಕೆಯಿಂದ ಏನಾದ್ರು ಶಿಕ್ಷೆಯಾಗಿಬಿಡುತ್ತಾ ಅನ್ನೊ ಭಯದಲ್ಲಿದ್ದಂತೆ ಕಂಡುಬರುತ್ತಿದೆ.

– ಮಾದೇಶ್ ಜೊತೆ ಮಂಜುನಾಥ್ ಎನ್. ಕ್ರೈಂ ಬ್ಯುರೋ ನ್ಯೂಸ್ 18 ಬೆಂಗಳೂರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed