Darshan Case: ಪ್ರದೋಷ್ ಕೋರ್ಟ್​ಗೆ ಬಂದಾಯ್ತು, ಅತ್ತ ಹೈಕೋರ್ಟ್ ಮೊರೆ ಹೋದ ದರ್ಶನ್ | | ACTPnews

ದರ್ಶನ್ - ಪ್ರದೋಷ್


Last Updated:

Darshan: ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಪ್ರದೋಷ್ ಸೆಷನ್ಸ್​ ಕೋರ್ಟ್​ಗೆ ಬಂದಾಗಿದೆ. ಆದರೆ ಅತ್ತ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ದರ್ಶನ್ - ಪ್ರದೋಷ್
ದರ್ಶನ್ – ಪ್ರದೋಷ್

ರೇಣುಕಾಸ್ವಾಮಿ ಕೇಸ್​ಗೆ (Renukaswamy case) ಸಂಬಂಧಿಸಿ ಇಂದು ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ (Approver Statement) ದಾಖಲು ಪ್ರಕ್ರಿಯೆ 12 ಗಂಟೆಗೆ ನಿಗದಿಯಾಗಿತ್ತು. ಪ್ರದೋಷ್ (Pradosh) ಕೋರ್ಟ್​ಗೆ ಬಂದು, ಕೋರ್ಟ್ ಬಳಿ ಬಿಗಿ ಬಂದೋಬಸ್ತ್ ಕೂಡಾ ಮಾಡಲಾಗಿದೆ. ಇನ್ನೇನು ವಿಚಾರಣೆ ಶುರು ಆಗಬೇಕು ಎನ್ನುವಾಗ ದರ್ಶನ್  (Darshan) ಹೈಕೋರ್ಟ್ (High Court) ಮೊರೆ ಹೋಗಿದ್ದಾರೆ.

ಪ್ರದೋಷ್ ಮಾಫಿ ಸಾಕ್ಷಿ ಮಂದೂಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಇತ್ತ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಅತ್ತ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ತುರ್ತು ವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದು ಮತ್ತೊಂದ್ ಕಡೆ ಸಿಟಿ ಸಿವಿಲ್ ಕೋರ್ಟ್ ಬಳಿ ಪ್ರದೋಷ್ ತಲುಪಿಯಾಗಿದೆ. ಅರ್ಧ ಗಂಟೆಯಲ್ಲಿ ಪ್ರದೋಷ್​ನ ಕೋರ್ಟ್ ಮುಂದೆ ಹಾಜರುಪಡಿಸಲಿರುವ ಅಧಿಕಾರಿಗಳು, ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.

ಈ ವೇಳೆ ದರ್ಶನ್​ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ ಬಗ್ಗೆ ಕೋರ್ಟ್ ಗೆ ಮಾಹಿತಿ ಲಭ್ಯವಾಗಿದೆ. ಸಿಸಿಹೆಚ್ ಕೋರ್ಟ್ ಗೆ  ದರ್ಶನ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಪ್ರದೂಶ್ ಹೇಳಿಕೆ ಮುಂದೂಡುವಂತೆ ಮನವಿ ಮಾಡಿದ್ದಾರೆ.

ವರದಿ: ಗಂಗಾಧರ ವಾಗಟ, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed