Last Updated:
ಪರಪ್ಪನ ಅಗ್ರಹಾರ ಜೈಲಿಂದ ಸೆಷನ್ಸ್ ಕೋರ್ಟ್ಗೆ ಹಾಜರಾದ ಪ್ರದೂಷ್ 3 ಗಂಟೆಗಳ ಕಾಲ ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ್ರು. ಪಟ್ಟಣಗೆರೆ ಶೆಡ್ ಕಹಾನಿ ಕೋರ್ಟ್ ಮುಂದೆ ಬಯಲು?
ಬೆಂಗಳೂರು (ಸೆ.29): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಎಸ್. ರಾವ್ (Pradosh Rao) ಸೆಷನ್ಸ್ ಕೋರ್ಟ್ ಮುಂದೆ ಅರ್ಧ ಸಾಕ್ಷಿ ಹೇಳಿಕೆ ದಾಖಲಿಸಿದ್ದು, ಇಂದು ಸಹ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ. ಇತ್ತ ಪ್ರದೋಷ್ ಸಾಕ್ಷ್ಯ ನುಡಿಯುತ್ತಿದ್ರೆ, ಅತ್ತ ದರ್ಶನ್ಗೆ (Darshan) ಢವಢವ ಶುರುವಾಗಿದೆ. ಕ್ಲಬ್ ಮೀಟಿಂಗ್ ಟು ಪಟ್ಟಣಗೆರೆ ಶೆಡ್ವರೆಗೂ ಏನೆಲ್ಲಾ ಆಯ್ತು ಅನ್ನೋ ವಿಚಾರವನ್ನ ಮಾಫಿ ಸಾಕ್ಷಿ ಪ್ರದೋಷ್ ನ್ಯಾಯಾಲಯದ (Court) ಮುಂದೆ ಬಾಯ್ಬಿಟ್ಟಿದ್ದಾನೆ.
ಪರಪ್ಪನ ಅಗ್ರಹಾರ ಜೈಲಿಂದ ಸೆಷನ್ಸ್ ಕೋರ್ಟ್ಗೆ ಹಾಜರಾದ ಪ್ರದೂಷ್ 3 ಗಂಟೆಗಳ ಕಾಲ ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ್ರು. ನಟ ದರ್ಶನ್ ಜೊತೆ ಹೇಗೆ ಶುರುವಾಯ್ತು ಸ್ನೇಹ ಹಾಗೂ ರೇಣುಕಾಸ್ವಾಮಿ ಅಪಹರಣ ಬಗ್ಗೆ ಮಾತಾಡಿದ ಪ್ರದೋಷ್, ಮೊದಲು ಸ್ಟೋನಿ ಬ್ರೂಕ್ ನಲ್ಲಿ ದರ್ಶನ್ ಜೊತೆ ನಡೆಸಿದ ಮೀಟಿಂಗ್ ಹಾಗೂ ಪಟ್ಟಣಗೆರೆ ಶೆಡ್ ನಲ್ಲಿ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕ್ಷಿ ನುಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಘಟನೆ ನಡೆದ ದಿನ ಏನೆಲ್ಲಾ ಆಯ್ತು? ಪಟ್ಟಣಗೆರೆ ಶೆಡ್ಗೆ ಯಾರೆಲ್ಲಾ ಹೋಗಿದ್ದರು, ಶೆಡ್ನಲ್ಲಿ ಏನೆಲ್ಲಾ ಆಯ್ತು, ನಂತರ ಶವ ಸಾಗಾಟ, ಸುಫಾರಿ ಆರೋಪಿಗಳ ವ್ಯವಸ್ಥೆ ಹೇಗಿತ್ತು? 30 ಲಕ್ಷ ಹಣ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೇಳಿಕೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೊಲೆ ಪ್ರಕರಣದ 29ನೇ ಸಾಕ್ಷಿಯಾಗಿರುವ ಪ್ರದೂಷ್ ರಾವ್, ನ್ಯಾಯಾಧೀಶರ ಸಮ್ಮುಖದಲ್ಲಿ ಸಾಕ್ಷಿ ನುಡಿದ್ದು, ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ನಲ್ಲಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಿತು. ಇಂದು ಕೂಡ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದ್ದು, ಬಳಿಕ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಪ್ರದೂಷ್ ವಿಚಾರಣೆ ನಡೆಸುವ ಸಾಧ್ಯತೆ ಕೂಡ ಇದೆ.
ಈ ವೇಳೆ ನ್ಯಾಯಾಲಯದಲ್ಲಿಆರೋಪಿಗಳ ಪರ ವಕೀಲರು ಹಾಗೂ ಪ್ರದೂಷ್ ಪರ ವಕೀಲರು, ಪ್ರಾಸಿಕ್ಯೂಶನ್ ವಕೀಲರು ಮಾತ್ರ ಹಾಜರಾಗಲು ಅವಕಾಶ ಇತ್ತು. ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಫಿ ಸಾಕ್ಷಿ ಹೇಳಿಕೆ ವೀಕ್ಷಿಸಿದ್ದಾರೆ.














