Dam Water Level: ರಾಜ್ಯದ ಈ ಪ್ರಮುಖ ಜಲಾಶಯಗಳು ಫುಲ್, ನಿಮ್ಮ ಊರಿನ ಡ್ಯಾಮ್‍ನಲ್ಲಿ ಎಷ್ಟಿದೆ ನೀರು ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯಗಳ ನೀರಿನ ಮಟ್ಟ


Last Updated:

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ: ಹಿಡ್ಕಲ್ 99.74%, ಆಲಮಟ್ಟಿ 96.87%, ಭದ್ರಾ 86.45% ಭರ್ತಿ. ಕೆ.ಆರ್.ಸಾಗರ 56.76%, ಹೇಮಾವತಿ 47.20%, ಕಬಿನಿ 56.34% ಇದೆ.

 ಜಲಾಶಯಗಳ ನೀರಿನ ಮಟ್ಟ
ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು: ಕರ್ನಾಟಕದಲ್ಲಿ (Karnataka) ಮಳೆಯ (Rain) ಅಬ್ಬರ ಒಂದೆಡೆಯಾದರೆ, ಪ್ರಮುಖ ಜಲಾಶಯಗಳ (Reservoir) ಇತ್ತೀಚಿನ ನೀರಿನ ಮಟ್ಟದ (Water Level) ಬಗ್ಗೆ ಅಚ್ಚರಿಯ ಹಾಗೂ ಬ್ರೇಕಿಂಗ್ ಅಪ್‍ಡೇಟ್ ಹೊರಬಂದಿದೆ. ಯಾವ ಡ್ಯಾಮ್ (Dam) ಸಂಪೂರ್ಣ ಭರ್ತಿಯಾಗಿದೆ? ಯಾವ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ನೂರಕ್ಕೆ ನೂರು ತುಂಬಲು ನಿಂತಿರುವ ಜಲಾಶಯಗಳು

ಹಿಡ್ಕಲ್ ಅಣೆಕಟ್ಟು: ಶೇ. 99.74% ರಷ್ಟು ಭರ್ತಿಯಾಗಿ ಸಕ್ಕತ್ ಸದ್ದು ಮಾಡುತ್ತಿರುವ ಹಿಡ್ಕಲ್ ಡ್ಯಾಮ್‍ನಲ್ಲಿ ಈಗ ನೀರು ಅಂಚಿಗೆ ಬಂದಿದೆ. ಒಟ್ಟು 51 TMC ಸಾಮರ್ಥ್ಯವಿರುವ ಇಲ್ಲಿ ಬರೋಬ್ಬರಿ 50.8 ಖಿಒಅ ನೀರು ಸಂಗ್ರಹವಾಗಿದೆ.

ಆಲಮಟ್ಟಿ ಅಣೆಕಟ್ಟು: ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿಯಲ್ಲಿ ಪ್ರವಾಹ ಮುಂದುವರಿದಿದೆ. ಶೇ. 96.87% ರಷ್ಟು ಭರ್ತಿಯಾಗಿದ್ದು, 123 TMC ಸಾಮರ್ಥ್ಯದಲ್ಲಿ ಬರೋಬ್ಬರಿ 119 TMC ಗೂ ಅಧಿಕ ನೀರು ಲಭ್ಯವಿದೆ.

ಭದ್ರಾ ಅಣೆಕಟ್ಟು: ಶೇ. 86.45% ರಷ್ಟು ಭರ್ತಿಯಾಗುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಾವೇರಿ ಕೊಳ್ಳದ ಜಲಾಶಯಗಳ ಕಥೆ ಏನು?

ಕೆ.ಆರ್.ಸಾಗರ ಅಣೆಕಟ್ಟು: ಮಂಡ್ಯದ ಹೆಮ್ಮೆಯ ಕೆಆರ್ ಎಸ್ ಡ್ಯಾಮ್‍ನಲ್ಲಿ ಸದ್ಯ ಶೇ. 56.76% ಮಾತ್ರ ನೀರಿದೆ. 49.4 ಖಿಒಅ ಒಟ್ಟು ಸಾಮಥ್ರ್ಯವಿದ್ದು, ಸದ್ಯ 28 TMC  ನೀರು ಮಾತ್ರ ಉಳಿದುಕೊಂಡಿದೆ.

ಹೇಮಾವತಿ ಹಾಗೂ ಕಬಿನಿ: ಹೇಮಾವತಿ ಅಣೆಕಟ್ಟು ಶೇ. 47.20% ಮತ್ತು ಕಬಿನಿ ಅಣೆಕಟ್ಟು ಶೇ. 56.34% ರಷ್ಟು ಮಾತ್ರ ಭರ್ತಿಯಾಗಿದ್ದು, ಮಧ್ಯಮ ಹಂತದಲ್ಲಿ ನೀರು ಕಾಯ್ದುಕೊಂಡಿವೆ.

ಇತರ ಪ್ರಮುಖ ಜಲಾಶಯಗಳ ಹವಾ ಹೇಗಿದೆ?

ತುಂಗಭದ್ರಾ ಅಣೆಕಟ್ಟು: ಶೇ. 78.21% ತುಂಬಿದ್ದು, 82 TMC  ಗೂ ಅಧಿಕ ನೀರು ಸಂಗ್ರಹವಾಗಿದೆ.

ನಾರಾಯಣಪುರ ಅಣೆಕಟ್ಟು: ಶೇ. 83.09% ಭರ್ತಿಯಾಗಿದ್ದು, ಹೊರಹರಿವು ಕೂಡ ಜೋರಾಗಿದೆ.

ಭೀಮಾ ಲಿಫ್ಟ್ (ಸೊನ್ನ ಬ್ಯಾರೇಜ್): ಶೇ. 88.56% ರಷ್ಟು ಭರ್ತಿಯಾಗಿ ಅಚ್ಚರಿ ಮೂಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports