Cyber Fraudsters: ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದ ಹೆಸರಲ್ಲಿ ಬಿಗ್ ಸ್ಕಾಮ್, ನಕಲಿ ವೆಬ್‍ಸೈಟ್ ಸೃಷ್ಟಿಸಿ ಜನರಿಗೆ ಮೋಸ ಮಾಡುತ್ತಿರುವ ವಂಚಕರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಹೇಗೆ ನಡೆಯುತ್ತಿತ್ತು ಈ ವಂಚನೆ?


Last Updated:

ಬೆಂಗಳೂರಿನ ನ್ಯೂ ಕುಮಾರಕೃಪ ಸ್ಟೇಟ್ ಗೆಸ್ಟ್ ಹೌಸ್ ಹೆಸರಿನಲ್ಲಿ ಸೈಬರ್ ವಂಚನೆ. ನಕಲಿ ವೆಬ್‌ಸೈಟ್ ಮೂಲಕ ಆನ್‌ಲೈನ್ ರೂಮ್ ಬುಕಿಂಗ್ ವಂಚನೆ. ಐಟಿ ಕಾಯ್ದೆ ಅಡಿ ಪ್ರಕರಣ ದಾಖಲು.

ಹೇಗೆ ನಡೆಯುತ್ತಿತ್ತು ಈ ವಂಚನೆ?
ಹೇಗೆ ನಡೆಯುತ್ತಿತ್ತು ಈ ವಂಚನೆ?

ಬೆಂಗಳೂರಿನಲ್ಲಿ (Bengaluru) ಸೈಬರ್ ವಂಚಕರ (Cyber Fraudsters) ಜಾಲ ದಿನದಿಂದ ದಿನಕ್ಕೆ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದು, ಈಗ ನೇರವಾಗಿ ಪ್ರಸಿದ್ಧ ನ್ಯೂ ಕುಮಾರಕೃಪ ಸ್ಟೇಟ್ ಗೆಸ್ಟ್ ಹೌಸ್ (New Kumara Krupa State Guest House) ಹೆಸರನ್ನೇ ಬಳಸಿ ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆನ್‍ಲೈನ್ (Online) ರೂಮ್ ಬುಕಿಂಗ್ ಹೆಸರಿನಲ್ಲಿ ಮುಗ್ಧ ಗ್ರಾಹಕರನ್ನು ಟಾರ್ಗೆಟ್ ಮಾಡುತ್ತಿರುವ ವಂಚಕರಿಂದ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

ಹೇಗೆ ನಡೆಯುತ್ತಿತ್ತು ಈ ವಂಚನೆ?

ಸೈಬರ್ ಕಳ್ಳರು ಅಸಲಿ ಗೆಸ್ಟ್ ಹೌಸ್ ಅನ್ನು ಹೋಲುವ ನಕಲಿ ವೆಬ್‍ಸೈಟ್ ಒಂದನ್ನು ಸೃಷ್ಟಿಸಿದ್ದಾರೆ. kumarkrupaguesthouse.in ಹೆಸರಿನ ಈ ನಕಲಿ ವೆಬ್‍ಸೈಟ್ ಮೂಲಕ ಗ್ರಾಹಕರಿಗೆ ರೂಮ್ ಬುಕಿಂಗ್ ಖಚಿತಪಡಿಸುವ ನಕಲಿ ಬಿಲ್‍ಗಳು ಹಾಗೂ ಇನ್‍ವಾಯ್ಸ್‍ಗಳನ್ನು ಕಳುಹಿಸಲಾಗುತ್ತಿತ್ತು. ಇದನ್ನು ಅಸಲಿ ಎಂದು ನಂಬಿದ ಗ್ರಾಹಕರು ಆನ್‍ಲೈನ್ ಮೂಲಕ ಹಣ ಪಾವತಿಸಿ ಮೋಸ ಹೋಗುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗೆಸ್ಟ್ ಹೌಸ್‍ನ ಹಿರಿಯ ವ್ಯವಸ್ಥಾಪಕರಾದ ಕಾರ್ತಿಕ್ ಸಂತೋಷ್ ಅವರು ನೀಡಿರುವ ದೂರಿನ ಪ್ರಕಾರ, ಹಲವು ಗ್ರಾಹಕರು ನಮಗೆ ನಕಲಿ ವೆಬ್‍ಸೈಟ್ ಮೂಲಕ ಬುಕಿಂಗ್ ಕನ್ಫರ್ಮೇಷನ್ ಬಂದಿದೆ ಎಂದು ತಿಳಿಸಿದ ಮೇಲೆಯೇ ಈ ಸಂಪೂರ್ಣ ಹಗರಣ ಹೊರಬಂದಿದೆ.

ಎಚ್ಚೆತ್ತುಕೊಂಡ ಮ್ಯಾನೇಜ್‍ಮೆಂಟ್

ಈ ಘಟನೆಯ ಬಳಿಕ ಎಚ್ಚೆತ್ತುಕೊಂಡ ಗೆಸ್ಟ್ ಹೌಸ್ ಮ್ಯಾನೇಜ್‍ಮೆಂಟ್, ಈ ನಕಲಿ ವೆಬ್‍ಸೈಟ್‍ಗೂಮತ್ತು ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಯಾವುದೇ ಆನ್‍ಲೈನ್ ಬುಕಿಂಗ್ ಮಾಡುವ ಮುನ್ನ ಗ್ರಾಹಕರು ಸರಿಯಾಗಿ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed