CSK Head Coach: 18 ವರ್ಷಗಳ ಬಳಿಕ ಸಿಎಸ್​ಕೆ ತಂಡಕ್ಕೆ ಹೊಸ ಕೋಚ್! ಭಾರತದ ಲೆಜೆಂಡರಿ ಬೌಲರ್​​​ ಈಗ ಚೆನ್ನೈ ಹೆಡ್​​ಕೋಚ್ | ಕ್ರೀಡಾ ಸುದ್ದಿ | ACTPnews

ಚೆನ್ನೈ ಸೂಪರ್ ಕಿಂಗ್ಸ್


Last Updated:

ಜಹೀರ್ ಖಾನ್ ಅವರ ಐಪಿಎಲ್ ಕೋಚಿಂಗ್ ವೃತ್ತಿಜೀವನದಲ್ಲಿ ಇದು ಮಹತ್ವದ ಜವಾಬ್ದಾರಿಯಾಗಲಿದೆ. ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಮುಂಬೈ ಇಂಡಿಯನ್ಸ್ (MI) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳನ್ನು ಪ್ರತಿನಿಧಿಸಿದ್ದ ಜಹೀರ್, 2017 ರಲ್ಲಿ ಐಪಿಎಲ್‌ನಿಂದ ನಿವೃತ್ತಿ ಹೊಂದಿದ್ದರು.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2027 (IPL 2027) ಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತದ ಮಾಜಿ ಲೆಜೆಂಡರಿ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ತನ್ನ ನೂತನ ಹೆಡ್ ಕೋಚ್ ಆಗಿ ನೇಮಕ ಮಾಡಿದೆ. ಕಳೆದ 18 ವರ್ಷಗಳಿಂದ ಸಿಎಸ್‌ಕೆ ತಂಡದ ಮುಖ್ಯ ತರಬೇತುದಾರರಾಗಿದ್ದ ಸ್ಟೀಫನ್ ಫ್ಲೆಮಿಂಗ್ ಅವರ ಸ್ಥಾನವನ್ನು ಈಗ ಜಹೀರ್ ಖಾನ್ ಅಲಂಕರಿಸಲಿದ್ದಾರೆ. ಫ್ಲೆಮಿಂಗ್ ಇತ್ತೀಚೆಗಷ್ಟೇ (ಜುಲೈನಲ್ಲಿ) ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಿಎಸ್‌ಕೆ ತೊರೆದಿದ್ದಾರೆ.

ಜಹೀರ್ ಖಾನ್ ಅವರ ಐಪಿಎಲ್ ಕೋಚಿಂಗ್ ವೃತ್ತಿಜೀವನದಲ್ಲಿ ಇದು ಮಹತ್ವದ ಜವಾಬ್ದಾರಿಯಾಗಲಿದೆ. ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಮುಂಬೈ ಇಂಡಿಯನ್ಸ್ (MI) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳನ್ನು ಪ್ರತಿನಿಧಿಸಿದ್ದ ಜಹೀರ್, 2017 ರಲ್ಲಿ ಐಪಿಎಲ್‌ನಿಂದ ನಿವೃತ್ತಿ ಹೊಂದಿದ್ದರು. ನಂತರ ಮುಂಬೈ ಬೌಲಿಂಗ್ ಕೋಚ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಗೌರವದ ವಿಷಯವೆಂದ ಫ್ರಾಂಚೈಸಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಹೀರ್ ಖಾನ್, ಇಷ್ಟು ಶ್ರೀಮಂತ ಇತಿಹಾಸವಿರುವ ಸಿಎಸ್‌ಕೆ ಫ್ರಾಂಚೈಸಿಯ ಭಾಗವಾಗುತ್ತಿರುವುದು ತಮಗೆ ಸಿಕ್ಕ ಗೌರವ ಎಂದು ಜಹೀರ್ ಹೇಳಿದ್ದಾರೆ. ಆಟಗಾರನಾಗಿ ತಾವು ಸಿಎಸ್‌ಕೆ ವಿರುದ್ಧ ಆಡಿದ ದಿನಗಳನ್ನು ನೆನಪಿಸಿಕೊಂಡ ಅವರು, ಚೆಪಾಕ್ ಕ್ರೀಡಾಂಗಣದ ‘ಸೂಪರ್‌ಫ್ಯಾನ್ಸ್’ ಸೃಷ್ಟಿಸುವ ವಾತಾವರಣವೇ ಈ ತಂಡವನ್ನು ವಿಶೇಷವಾಗಿಸಿದೆ ಎಂದು ಶ್ಲಾಘಿಸಿದ್ದಾರೆ.

ಫ್ರಾಂಚೈಸಿ ಮಾಲೀಕರ ಹಾಗೂ ಆಡಳಿತ ಮಂಡಳಿಯ ಪ್ರತಿಕ್ರಿಯೆ

ಜಹೀರ್ ಖಾನ್ ಅವರ ಅದ್ಭುತ ಕ್ರಿಕೆಟ್ ಅನುಭವ ಮತ್ತು ಯುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಅವರ ಸಾಮರ್ಥ್ಯವು ಸಿಎಸ್‌ಕೆ ತಂಡಕ್ಕೆ ದೊಡ್ಡ ಬಲ ತರಲಿದೆ ಎಂದು ಸಿಎಸ್​ಕೆ ಮಾಲೀಕರಾದ ರೂಪಾ ಗುರುನಾಥ್ ತಿಳಿಸಿದ್ದಾರೆ.

ಜಹೀರ್ ಅವರನ್ನು ವಿಶ್ವದರ್ಜೆಯ ಬೌಲರ್ ಮತ್ತು ಕ್ರಿಕೆಟ್‌ನ ತೀಕ್ಷ್ಣ ಬುದ್ಧಿವಂತ ಎಂದು ಸಿಇಒ ಕೆ.ಎಸ್. ವಿಶ್ವನಾಥನ್ ಬಣ್ಣಿಸಿದ್ದಾರೆ. 2000 ರ ದಶಕದಲ್ಲಿ ಭಾರತೀಯ ಕ್ರಿಕೆಟ್‌ನ ಯಶಸ್ಸಿಗೆ ಜಹೀರ್ ಒಂದು ಪ್ರಮುಖ ಕಾರಣರಾಗಿದ್ದರು. ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರವಾಗಿದ್ದು, ತಂಡದ ಯುವ ವೇಗಿಗಳನ್ನು ಮುನ್ನಡೆಸಲು ಅವರು ಸೂಕ್ತ ವ್ಯಕ್ತಿ ಎಂದಿದ್ದಾರೆ.

ಜಹೀರ್ ಖಾನ್ ಎದುರಿಗಿರುವ ಸವಾಲುಗಳು

ಸ್ಟೀಫನ್ ಫ್ಲೆಮಿಂಗ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕೋಚ್ ಆಗಿದ್ದರು. ಅವರ ನಿರ್ಗಮನದ ನಂತರ, ಸಿಎಸ್‌ಕೆಯದ್ದೇ ಆದ ವಿಶಿಷ್ಟ ಕ್ರಿಕೆಟಿಂಗ್ ಶೈಲಿ ಮತ್ತು ಯಶಸ್ಸಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು, ಯುವ ಆಟಗಾರರನ್ನು ಸಿದ್ಧಪಡಿಸುವುದು ಹಾಗೂ ಮೆಗಾ ಹರಾಜಿನ ನಂತರ ಹೊಸದಾಗಿ ತಂಡವನ್ನು ಕಟ್ಟುವುದು ಜಹೀರ್ ಮುಂದಿರುವ ಪ್ರಮುಖ ಸವಾಲಾಗಿದೆ.

ಜಹೀರ್ ಖಾನ್ ಐಪಿಎಲ್ ಸಾಧನೆ

ಆಟಗಾರನಾಗಿ ಜಹೀರ್ ಅವರ ಐಪಿಎಲ್ ದಾಖಲೆಯೂ ಅತ್ಯುತ್ತಮವಾಗಿತ್ತು. 100 ಪಂದ್ಯಗಳಲ್ಲಿ 102 ವಿಕೆಟ್ ಕಬಳಿಸಿದ್ದಾರೆ. ಅವರ ಬೌಲಿಂಗ್ ಸರಾಸರಿ 27.27 ಆಗಿತ್ತು. ಅದೇ ಸಮಯದಲ್ಲಿ, ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಇದಕ್ಕಿಂತ ದೊಡ್ಡದಾಗಿದೆ. ಜಹೀರ್ ಭಾರತದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 610 ವಿಕೆಟ್ ಗಳನ್ನು ಪಡೆದರು ಮತ್ತು 2000 ರ ದಶಕದಲ್ಲಿ ಭಾರತೀಯ ತಂಡದ ಅನೇಕ ಪ್ರಮುಖ ಯಶಸ್ಸುಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed