Last Updated:
2026ರ ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನೆಗೂ ಮುಂಚೆಯೇ ಭಾರತ ತನ್ನ ಮೊದಲ ಪದಕ ಗೆದ್ದಿದೆ. ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಕಂಚಿನ ಕನಿಷ್ಠ ಕಂಚಿನ ಪದಕವನ್ನು ಪಡೆಯಲಿದ್ದಾರೆ.
2026ರ ಕಾಮನ್‌ವೆಲ್ತ್ (Commonwealth) ಕ್ರೀಡಾಕೂಟ ಇಂದು ಜುಲೈ 23ರಂದು ಸ್ಕಾಟ್ಲೆಂಡ್(Scotland)ನ ಗ್ಲಾಸ್ಗೋ(Glasgow)ದಲ್ಲಿ ಆರಂಭವಾಗುತ್ತಿದೆ. ಆದರೆ ಪಂದ್ಯಗಳು ಶುರುವಾಗುವ ಮುನ್ನವೇ ಭಾರತಕ್ಕೆ ಒಳ್ಳೆಯ ಸುದ್ದಿ ಬಂದಿದೆ. ಸ್ಟಾರ್ ಬಾಕ್ಸರ್ (Boxer) ಲವ್ಲಿನಾ ಬೊರ್ಗೊಹೈನ್ (Lovlina Borgohain) ಮಹಿಳೆಯರ 75 ಕೆಜಿ ವಿಭಾಗದಲ್ಲಿ ಕನಿಷ್ಠ ಕಂಚಿನ ಪದಕ ಗೆಲ್ಲುವುದು ಖಚಿತವಾಗಿದೆ.
ಈ ಬಾರಿ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಕೇವಲ 5 ಮಂದಿ ಬಾಕ್ಸರ್‌ಗಳು ಮಾತ್ರ ಸ್ಪರ್ಧಿಸುತ್ತಿದ್ದಾರೆ. ನಿಯಮಗಳ ಪ್ರಕಾರ ಲೊವ್ಲಿನಾ ಸೇರಿದಂತೆ ಮುಂಚೂಣಿಯ 3 ಆಟಗಾರ್ತಿಯರಿಗೆ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ನೀಡಲಾಗಿದೆ. ಆದ್ದರಿಂದ ಸೆಮಿಫೈನಲ್ ತಲುಪಿದ ಲೊವ್ಲಿನಾಗೆ ಕನಿಷ್ಠ ಕಂಚು ಪದಕ ಖಚಿತವಾಗಿದೆ ಎಂದು ವರದಿಗಳಾಗಿವೆ.
ಭಾರತದ ಸ್ಟಾರ್ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ 75 ಕೆಜಿ ವಿಭಾಗದಲ್ಲಿ ಬೈ ಪಡೆದು ನೇರವಾಗಿ ಸೆಮಿಫೈನಲ್‌ಗೆ ತಲುಪಿದ್ದಾರೆ. ಇದರಿಂದ ಅವರಿಗೆ ಕನಿಷ್ಠ ಕಂಚಿನ ಪದಕ ಖಚಿತವಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲೊವ್ಲಿನಾ ಈಗಾಗಲೇ ಕಂಚಿನ ಪದಕ ಗೆದ್ದಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಕೂಟದ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ ಎಲ್ಲರಿಗೂ ಕಂಚಿನ ಪದಕ ಸಿಗುತ್ತದೆ. ಆದ್ದರಿಂದ ಲೊವ್ಲಿನಾ ರಿಂಗ್‌ಗೆ ಕಾಲಿಡುವ ಮೊದಲೇ ಅವರ ಪೋಡಿಯಂ ಸ್ಥಾನ ಖಚಿತವಾಗಿದೆ. ಇದು ಭಾರತದ ಪದಕ ಭರವಸೆಯನ್ನು ಹೆಚ್ಚಿಸುತ್ತದೆ.
2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೇವಲ 10 ಕ್ರೀಡೆಗಳನ್ನು ಮಾತ್ರ ಸೇರಿಸಲಾಗಿದೆ. ಕ್ರಿಕೆಟ್, ಬ್ಯಾಡ್ಮಿಂಟನ್, ಹಾಕಿ ಮತ್ತು ಕುಸ್ತಿ ಸೇರಿದಂತೆ ಒಂಬತ್ತು ಕ್ರೀಡೆಗಳನ್ನು ಹೊರಗಿಡಲಾಗಿದೆ. ಕ್ರೀಡೆಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಭಾರತದ ತಂಡಕ್ಕೆ ಹಿಂದಿನಂತೆ ಉತ್ತಮ ಪ್ರದರ್ಶನ ನೀಡುವುದು ಕಷ್ಟವಾಗಬಹುದು.
ಭಾರತವು 78 ಪುರುಷರು ಮತ್ತು 48 ಮಹಿಳೆಯರು ಸೇರಿ ಒಟ್ಟು 125 ಕ್ರೀಡಾಪಟುಗಳ ಬಲಿಷ್ಠ ತಂಡವನ್ನು ಗ್ಲಾಸ್ಗೋಗೆ ಕಳುಹಿಸಿದೆ. ಜುಲೈ 23ರಂದು ಉದ್ಘಾಟನಾ ಸಮಾರಂಭಕ್ಕೂ ಮುಂಚೆಯೇ ಲಾನ್ ಬೌಲ್ಸ್ ಸ್ಪರ್ಧೆಗಳೊಂದಿಗೆ ಭಾರತದ ಅಭಿಯಾನ ಪ್ರಾರಂಭವಾಗಲಿದೆ.
ಈ ವರ್ಷ ಭಾರತವು ಅಥ್ಲೆಟಿಕ್ಸ್, ಬಾಕ್ಸಿಂಗ್, ವೇಟ್‌ಲಿಫ್ಟಿಂಗ್, ಜೂಡೋ, ಕಲಾತ್ಮಕ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್, ಲಾನ್ ಬೌಲ್ಸ್ ಮತ್ತು ಈಜು ಎಂಬ ಎಂಟು ಕ್ರೀಡೆಗಳಲ್ಲಿ ಭಾಗವಹಿಸುತ್ತಿದೆ. ಕೆಲವೇ ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ, ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವರೆಂದು ನಿರೀಕ್ಷೆ ಇದೆ.














