ಬ್ಯುಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಸ್ನಾಯು ಚೇತರಿಕೆಗೆ ದಿನಕ್ಕೆ 110-130 ಗ್ರಾಂ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವಂತೆ ಸೂಚಿಸಲಾಗಿದೆ.
ಎಮಲ್ಸಿಫೈಯರ್ಗಳು ಅಥವಾ ಪ್ರೋಟೀನ್ ಪೌಡರ್ಗಳಂತಹ ಪದಾರ್ಥಗಳನ್ನು ಒಳಗೊಂಡಿರುವ ಯುಪಿಎಫ್ಗಳು ಆರೋಗ್ಯ ಅಪಾಯಗಳ ತಂದೊಡ್ಡುತ್ತವೆ. ಹಾಗಾಗಿ ಹೆಚ್ಚಿನ ಪರಿಶೀಲನೆಗೆ ಒಳಗಾಗಿದ್ದು ಅವುಗಳ ಸೇವನೆ ಇಲ್ಲದೆ ದೈನಂದಿನ ಪ್ರೊಟೀನ್ ಗುರಿಗಳನ್ನು ಸಾಧಿಸಬಹುದೇ ಎಂಬ ಅಂಶಕ್ಕೆ ಈ ಪ್ರಯೋಗವು ಹೆಚ್ಚು ಉತ್ತರವಾಗಿದೆ.
ಈ ಪ್ರಯೋಗವು ಕೆಲವೊಂದು ಅಡೆತಡೆಗಳೊಂದಿಗೆ ಆರಂಭವಾಯಿತು ಎಂದು ಇನ್ಸೈಡರ್ ವರದಿ ಹೇಳುತ್ತದೆ. ಪ್ರೋಟೀನ್ ರಹಿತ ಓಟ್ಸ್ ತಯಾರಿಸುವಾಗ ಹೋಸಿಯವರು ಗ್ರೀಕ್ ಯೋಗರ್ಟ್, ಚಿಯಾ ಸೀಡ್ಸ್ ಬದಲಿಗೆ ಆಕಸ್ಮಿಕವಾಗಿ ಬಾದಾಮಿ ಹಾಲನ್ನು ಬಳಸಿದರು ಇದು ಯುಪಿಎಫ್ ಪಟ್ಟಿಗೆ ಸೇರಿದೆ.
ಕೆಲವೊಂದು ಬ್ರೆಡ್ಗಳು ಯುಪಿಎಫ್ ರಹಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವು ಆದರೆ ಕೆಲವೊಂದು ಬ್ರೆಡ್ಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ.
ರೆಡಿ-ಮೇಡ್ ಸೂಪ್ನಲ್ಲಿ ಯುಪಿಎಫ್ ಇಲ್ಲ ಎಂಬುದು ಸಾಬೀತಾದರೂ ಕೆಲವೊಂದು ಅಂಗಡಿಯಲ್ಲಿ ಖರೀದಿಸಿದ ಬ್ರೆಡ್ಗಳಲ್ಲಿ ವಿವಿಧ ಸಂಸ್ಕರಿಸಿದ ಪದಾರ್ಥಗಳನ್ನು ಗಮನಿಸಿದರು. “ಸೋರ್ಫಾಕ್ಸ್” ಅಥವಾ ಸಂಸ್ಕರಿಸಿದ ಸೇರ್ಪಡೆಗಳನ್ನು ಒಳಗೊಂಡಿರುವ ಬ್ರೆಡ್ಗಳ ಮಾರಾಟದ ಬಗ್ಗೆ ಹೋಸಿ ಜಾಗೃತಿ ಮೂಡಿಸಿದ್ದಾರೆ.
ಈ ಪ್ರಯೋಗವು ಆಹಾರ ಸಂಸ್ಕೃತಿಯನ್ನು ನೆನಪಿಸುವ ಭಾವನೆಗಳನ್ನು ಪ್ರಚೋದಿಸಿತು. ಹೆಚ್ಚಿನ ಪ್ರೋಟೀನ್ ತಿಂಡಿಗಳಂತಹ ನಿಷೇಧಿತ ಆಹಾರದಿಂದ ಕ್ರೇವಿಂಗ್ಸ್ ಅನ್ನು ಹೋಸಿ ಅನುಭವಿಸಿದ್ದಾರೆ.
ತಮ್ಮ ಪ್ರಯೋಗಕ್ಕಾಗಿ ಕೆಲವೊಂದು ಪ್ರೋಟೀನ್ ಮೂಲಗಳನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ ಈ ಅಂಶವು ಆಹಾರದ ನಿರ್ಬಂಧಗಳ ಅಪಾಯಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿತು ಮತ್ತು “ಒಳ್ಳೆಯ” ಮತ್ತು “ಕೆಟ್ಟ” ಆಹಾರಗಳ ಮೇಲೆ ಕೇಂದ್ರೀಕರಿಸಿದ ಮನಸ್ಥಿತಿಗೆ ಮರಳುವಿಕೆ, ಅವರಿಗೆ ಸವಾಲನ್ನುಂಟು ಮಾಡಿತು.
ಯುಪಿಎಫ್ಗಳಿಲ್ಲದೆ ಪ್ರೋಟೀನ್ ಗುರಿಗಳನ್ನು ಸಾಧಿಸಲು ಹೆಚ್ಚಿನ ಸಮಯ ಹಾಗೂ ಪ್ಲಾನಿಂಗ್ ಹೊಂದಿದ್ದ ಆಹಾರಗಳನ್ನು ಅವಲಂಬಿಸಿದ್ದರು.
ಗ್ರೀಕ್ ಮೊಸರು ಮತ್ತು ಕಡಲೆಕಾಯಿ ಬೆಣ್ಣೆಯಂತಹ ಕೆಲವು ಪ್ರೋಟೀನ್ ಮೂಲಗಳಿದ್ದರೂ ಅವರು ಹಿಂದಿನ ಆಹಾರ ಪದ್ಧತಿಗೆ ಮರಳಿದರು. ದಾಲ್ಚಿನ್ನಿ, ಒಣದ್ರಾಕ್ಷಿ ಬಾಗಲ್ಸ್ ಮತ್ತು ಸೀರಿಯಲ್ಸ್ಗಳನ್ನು ತೆಗೆದುಕೊಳ್ಳಲಿಲ್ಲ.
ಕೆಲವೊಂದು ವೈವಿಧ್ಯಮಯ ಊಟ ತಿಂಡಿಯ ಪ್ರೋಟೀನ್ ಪೂರೈಕೆಯನ್ನು ಸಾಧಿಸಬಹುದಾದರೂ ಯುಪಿಎಫ್ ಮುಕ್ತ ಸವಾಲನ್ನು ಹೊಂದಿರುವ ಮಿತಿಗಳು ಹೊಸ ಪಾಕವಿಧಾನಗಳ ಪ್ರಯೋಗಕ್ಕೆ ತಡೆಗೋಡೆಯನ್ನು ಸೃಷ್ಟಿಸಿದವು.
ರಾಚೆಲ್ ಹೋಸಿಯವರು ಹೆಚ್ಚಿನ ಪ್ರೋಟೀನ್ ಆಹಾರದಿಂದ ಯುಪಿಎಫ್ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಾಗ ತಾವು ಎದುರಿಸಿದ ಸಂಕೀರ್ಣತೆಗಳನ್ನು ತಿಳಿಸಿದ್ದಾರೆ.
ಈ ಪ್ರಯೋಗದಲ್ಲಿ ಆಹಾರದ ಆಯ್ಕೆಗಳಿಗೆ ಹೆಚ್ಚು ಉದ್ದೇಶಪೂರ್ವಕ ವಿಧಾನವನ್ನು ಬಳಸಿರುವುದಾಗಿ ಹೋಸಿ ತಿಳಿಸಿದ್ದಾರೆ. ಮೊಸರು ಅಥವಾ ಕಡಲೆಕಾಯಿ ಬೆಣ್ಣೆಯಂತಹ ಕೆಲವು ಪ್ರೋಟೀನ್ ಮೂಲಗಳು ಉತ್ತಮ ಪರ್ಯಾಯಗಳಾಗಿದ್ದರೂ ಪ್ರೋಟೀನ್ ಪೌಡರ್ ಅಥವಾ ಬಾರ್ಸ್ ಆಗಾಗ್ಗೆ ತೆಗೆದುಕೊಳ್ಳಬಹುದಾಗಿದೆ.
ಪೂರ್ಣವಾಗಿ ಪ್ರೋಟೀನ್ ತೆಗೆದುಹಾಕುವ ಬದಲಿಗೆ ಅವರು ಸಣ್ಣ ಪರಿಣಾಮಕಾರಿ ಹೊಂದಾಣಿಕೆಗಳನ್ನು ಆಹಾರದಲ್ಲಿ ತರುವ ಉದ್ದೇಶ ಹೊಂದಿದ್ದಾರೆ.
ಕೆಲವೊಂದು ಪ್ರೋಟೀನ್ ಮೂಲಗಳು ನಮ್ಮ ದೇಹಕ್ಕೆ ಅಗತ್ಯವಾಗಿರುತ್ತವೆ ಎಂದು ಹೋಸಿ ತಿಳಿಸಿದ್ದಾರೆ ಹಾಗಾಗಿ ಇವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ ಎಂದಿದ್ದಾರೆ.
ಸಾಮಾನ್ಯವಾಗಿ ಪೌಷ್ಟಿಕಾಂಶ ತಜ್ಞರು ಸಂಪೂರ್ಣ ಆಹಾರಗಳನ್ನು ಸೇವಿಸಲು ಸೂಚಿಸುತ್ತಾರೆ. ರಾಚೆಲ್ ಹೋಸಿಯವರ ಪ್ರಯೋಗವು ಆಹಾರದ ಆಯ್ಕೆಗಳಲ್ಲಿ ವೈವಿಧ್ಯತೆಯನ್ನು ತಿಳಿಸಿದೆ.
ಆದಷ್ಟು ಯುಪಿಎಫ್ಗಳನ್ನು ಕಡಿಮೆ ಮಾಡುವುದು ಪ್ರಯೋಜನಕಾರಿಯಾಗಿದ್ದರೂ ಅದನ್ನು ತೆಗೆದುಕೊಳ್ಳದೇ ಇರುವುದು ಪ್ರಾಯೋಗಿಕವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.












