Bigg Boss: ಮನೆಯಲ್ಲಿರಲು ನಿನಗೆ ಅರ್ಹತೆಯೇ ಇಲ್ಲ ಎಂದ ಸಹ ಸ್ಪರ್ಧಿಗಳು; ಕಣ್ಣೀರಿಟ್ಟ ಮಂಜು! | | ACTPnews

News18


Last Updated:

ಸಾಮಾನ್ಯವಾಗಿ ವಾರದ ಕೊನೆಯಲ್ಲಿ ನಡೆಯುವ ಎಲಿಮಿನೇಷನ್ ಬದಲಾಗಿ ಈ ಬಾರಿ ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗುವ ಸಾಧ್ಯತೆ ಎದುರಾಗಿದೆ. ಈ ಸಂಕಷ್ಟದಿಂದ ಪಾರಾಗಲು ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆಯೊಂದನ್ನು ನೀಡಲಾಗಿದೆ.

News18
News18

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada Season 13) ಮಿಡ್ ವೀಕ್ ಎಲಿಮಿನೇಷನ್ ಭೀತಿ ಎದುರಾಗಿದೆ. ವಾರದ ಎಲಿಮಿನೇಷನ್ ಪ್ರಕ್ರಿಯೆಯಿಂದ ಪಾರಾದ ಸ್ಪರ್ಧಿಗಳಿಗೂ ಇದೀಗ ಹೊಸ ಸಂಕಷ್ಟ ಎದುರಾಗಿದೆ. ದೊಡ್ಮನೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳನ್ನೂ ನಾಮಿನೇಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಶಾಕಿಂಗ್ ವಿಚಾರವನ್ನು ಸ್ಪರ್ಧಿಗಳಿಗೆ ತಿಳಿಸಲಾಗಿದೆ.

ಸಾಮಾನ್ಯವಾಗಿ ವಾರದ ಕೊನೆಯಲ್ಲಿ ನಡೆಯುವ ಎಲಿಮಿನೇಷನ್ ಬದಲಾಗಿ ಈ ಬಾರಿ ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗುವ ಸಾಧ್ಯತೆ ಎದುರಾಗಿದೆ. ಈ ಸಂಕಷ್ಟದಿಂದ ಪಾರಾಗಲು ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆಯೊಂದನ್ನು ನೀಡಲಾಗಿದೆ.

ಮಿಡ್ ವೀಕ್ ಎಲಿಮಿನೇಷನ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯಲ್ಲಿರುವ ಒಬ್ಬ ಸ್ಪರ್ಧಿಯನ್ನು ಹೊರಗಿಡಬೇಕಾಗಿದೆ. ಈ ಚಟುವಟಿಕೆಯಲ್ಲಿ ಯಾರು ಯಾರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ಫೇಕ್ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಹೋಗಿದ್ದ ಮಂಜು ಮತ್ತು ಕಿರಣ್ ಮತ್ತೆ ದೊಡ್ಮನೆಗೆ ವಾಪಸ್ ಆಗಿದ್ದಾರೆ. ಕಿರಣ್ ಮತ್ತೆ ಮನೆಗೆ ಬಂದಿದ್ದನ್ನು ಕೆಲವರು ಖುಷಿಯಿಂದ ಸ್ವಾಗತಿಸಿದರೆ, ಮಂಜು ವಾಪಸ್ ಬಂದಿರುವುದಕ್ಕೆ ಕೆಲವರಿಂದ ಅಸಮಾಧಾನದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಜು ವಾಪಸಾತಿ ಕೆಲ ಸಹ ಸ್ಪರ್ಧಿಗಳಿಗೆ ಇಷ್ಟವಾಗಿಲ್ಲ ಎಂಬುದು ಚಟುವಟಿಕೆಯ ವೇಳೆ ಬಹಿರಂಗವಾಗಿದೆ. ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಲು ನಡೆಯುತ್ತಿದ್ದ ಪ್ರಕ್ರಿಯೆಯಲ್ಲಿ ಹೆಚ್ಚಿನವರು ಮಂಜು ಹೆಸರನ್ನೇ ಸೂಚಿಸಿರುವುದು ಗಮನ ಸೆಳೆದಿದೆ.

ಮಂಜು ಹೆಸರನ್ನು ಸೂಚಿಸಿದ ಕಾವ್ಯ, ಅವರಿಗೆ ಕ್ಯಾರೆಕ್ಟರ್ ಹಾಳು ಮಾಡುವುದಷ್ಟೇ ಗೊತ್ತಿದೆ ಎಂದು ಆರೋಪಿಸಿದ್ದಾರೆ. ಬಳಿಕ ಮಂಜು ಫೋಟೋ ಇರುವ ಬಾಟಲಿಯನ್ನು ಕಾಲಿನಿಂದ ತುಳಿದು ಕೆಳಗೆ ಬೀಳಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದಾದ ಬಳಿಕ ಧನುಷ್ ಕೂಡ ಮಂಜು ವಿರುದ್ಧ ತೀವ್ರವಾಗಿ ಮಾತನಾಡಿದ್ದಾರೆ. ಮಂಜುಗೆ ಗೇಮ್ ಆಡಲು ಇಲ್ಲಿ ಅರ್ಹತೆಯಿಲ್ಲ ಮತ್ತು ಈ ಮನೆಯಿಂದ ಹೋಗಬೇಕಿರುವ ಏಕೈಕ ವ್ಯಕ್ತಿ ಮಂಜು ಎಂದು ಹೇಳಿದ್ದಾರೆ. ಈ ಮಾತುಗಳು ದೊಡ್ಮನೆಯಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.

ಇದನ್ನೂ ಓದಿ: Actress Death: ವರ್ಷದ ಹೋರಾಟ, ಖ್ಯಾತ ನಟಿ ಕ್ಯಾನ್ಸರ್​ಗೆ ಬಲಿ

ಕಿರಣ್ ಕೂಡ ಮಂಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರ ಬೇಡಿಕೆಗಳನ್ನು ತುಳಿಯುವುದು, ಇನ್ನೊಬ್ಬರ ವಿಚಾರಧಾರೆಗಳನ್ನು ತುಳಿಯಲು ಪ್ರಯತ್ನಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಈಗ ನಾವು ನಿನ್ನನ್ನು ತುಳಿಯುವುದರಲ್ಲಿ ತಪ್ಪೇನಿಲ್ಲ ಎಂಬ ಅರ್ಥದಲ್ಲಿ ಕಿರಣ್ ಮಾತನಾಡಿದ್ದಾರೆ.

ಭಾವುಕರಾದ ಮಂಜು ಬಳಿಕ ಸೌಂದರ್ಯ ಬಳಿ ತೆರಳಿ ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ಆ ರೀತಿಯಲ್ಲಿ ಮಾತನಾಡುವುದಿಲ್ಲ ಎಂದು ಭರವಸೆ ನೀಡಿದ ಅವರು, ಸೌಂದರ್ಯ ಅವರನ್ನು ಅಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed