Last Updated:
ಯಶವಂತಪುರ ಸಿಎಂಟಿಐ ಜಂಕ್ಷನ್ ಮತ್ತು ಇಂಡಸ್ಟ್ರಿಯಲ್ ಸಬ್ ಅರ್ಬ್ 4ನೇ ಮುಖ್ಯರಸ್ತೆಯಲ್ಲಿ ಮೇ 14 ರಿಂದ 21 ರವರೆಗೆ ಹೊಸ ಒನ್ ವೇ ಮತ್ತು ತಿರುವು ನಿಯಮ, ಉಲ್ಲಂಘನೆಗೆ ದಂಡ ಎಚ್ಚರಿಕೆ
ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ನಡುವೆ ಈಗ ಮತ್ತೊಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಸಿಎಂಟಿಐ (CMTI) ಜಂಕ್ಷನ್‌ನಲ್ಲಿ ಪ್ರತಿದಿನ ಅನುಭವಿಸುತ್ತಿದ್ದ ಟ್ರಾಫಿಕ್ ನರಕಕ್ಕೆ ಬ್ರೇಕ್ ಹಾಕಲು ಪೊಲೀಸರು ಮಾಸ್ಟರ್ ಪ್ಲಾನ್ (Master Plan) ರೂಪಿಸಿದ್ದಾರೆ. ಆದರೆ, ಈ ಬದಲಾವಣೆಗಳು ಸವಾರರಿಗೆ ಸ್ವಲ್ಪ ಗೊಂದಲ (Confusion) ಮೂಡಿಸಿದರೂ ಅಚ್ಚರಿಯಿಲ್ಲ!
ಬರುವ ಮೇ 14, 2026 ರಿಂದ ಮೇ 21, 2026 ರವರೆಗೆ ಅಂದರೆ ಸತತ ಎಂಟು ದಿನಗಳ ಕಾಲ ಹೊರ ವರ್ತುಲ ರಸ್ತೆಯ (ಎಫ್.ಟಿ.ಐ ರಸ್ತೆ) ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ನೀವು ತುಮಕೂರು ರಸ್ತೆ ಅಥವಾ ಗೊರಗುಂಟೆಪಾಳ್ಯದ ಕಡೆ ಸಂಚರಿಸುವವರಾಗಿದ್ದರೆ, ಪೊಲೀಸರು ಹೊರಡಿಸಿರುವ ಈ ಹೊಸ ರೂಲ್ಸ್ ತಿಳಿಯದಿದ್ದರೆ ದಾರಿ ತಪ್ಪಿ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯಬೇಕಾದೀತು!
ಇನ್ನು ರಾಜಕುಮಾರ್ ಸಮಾಧಿ ಕಡೆಯಿಂದ ಗೊರಗುಂಟೆಪಾಳ್ಯಕ್ಕೆ ಹೋಗುವವರು ಗೋಕುಲ ದಾಸ್ ಎಕ್ಸ್‌ಪೋರ್ಟ್ ಗಾರ್ಮೆಂಟ್ಸ್ ಜಂಕ್ಷನ್‌ನಲ್ಲಿ ಬಲಪಥಕ್ಕೆ ಬದಲಾಗಿ ಸಿಎಂಟಿಐ ಜಂಕ್ಷನ್‌ನಲ್ಲಿ ಕಡ್ಡಾಯವಾಗಿ ಬಲತಿರುವು ಪಡೆಯಲೇಬೇಕು. ಇಲ್ಲಿ ಎಡತಿರುವಿಗೆ ಪೊಲೀಸರು ರೆಡ್ ಸಿಗ್ನಲ್ ತೋರಿದ್ದಾರೆ.
8 ದಿನ ತೊಂದರೆ ತಪ್ಪಿದ್ದಲ್ಲ!
ಗೊರಗುಂಟೆಪಾಳ್ಯ ವಸತಿ ಪ್ರದೇಶದಿಂದ ಬರುವ ವಾಹನಗಳು ಕಡ್ಡಾಯವಾಗಿ ಬಲಕ್ಕೆ ತಿರುಗಿ ಸಿಎಂಟಿಐ ಜಂಕ್ಷನ್ ಕಡೆಗೆ ಹೋಗಬೇಕೇ ಹೊರತು ರಾಜಕುಮಾರ್ ಸಮಾಧಿ ಕಡೆಗೆ ಎಡತಿರುವು ಪಡೆಯಲು ಅವಕಾಶವಿಲ್ಲ. ಅಂತಿಮವಾಗಿ, ರಾಜಕುಮಾರ್ ಸಮಾಧಿ ಕಡೆಯಿಂದ ತುಮಕೂರು ರಸ್ತೆಗೆ ಹೋಗುವವರು ಮಾಡರ್ನ್ ಬ್ರೆಡ್ ಫ್ಯಾಕ್ಟರಿ ಬಳಿಯೇ ಎಡತಿರುವು ಪಡೆಯುವುದು ಕಡ್ಡಾಯವಾಗಿದೆ. ಸಂಚಾರ ಸುಗಮಗೊಳಿಸಲು ಪೊಲೀಸರು ತಂದಿರುವ ಈ ಹೊಸ ನಿಯಮಗಳನ್ನು ಪಾಲಿಸದಿದ್ದರೆ ದಂಡದ ಜೊತೆಗೆ ಟ್ರಾಫಿಕ್ ಕಷ್ಟವೂ ಗ್ಯಾರಂಟಿ. ಹಾಗಾಗಿ, ಈ 8 ದಿನಗಳ ಕಾಲ ನಿಮ್ಮ ಪ್ರಯಾಣದ ಪ್ಲಾನ್ ಬದಲಿಸಿಕೊಳ್ಳುವುದು ಒಳಿತು!
Bangalore [Bangalore],Bangalore,Karnataka













