Last Updated:
ಚಿಕ್ಕಮಗಳೂರು ತಿರುಪತಿ ಎಕ್ಸ್ಪ್ರೆಸ್ 17424 ಜೂನ್ 5, 12 ಮತ್ತು ಜುಲೈ 3, 2026ರಂದು ಬದಲಿ ಮಾರ್ಗದಲ್ಲಿ ಓಡಲಿದೆ, ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ರದ್ದು, 2 ಗಂಟೆ ಹೆಚ್ಚುವರಿ ಸಮಯ
ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಜನತೆಯ ಬಹುದಿನದ ಕನಸಾಗಿದ್ದ ತಿರುಪತಿ ನೇರ ರೈಲು ಸಂಪರ್ಕದ ಸಂತಸ ಕರಗುವ ಮೊದಲೇ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ (Update) ಒಂದನ್ನು ರೈಲ್ವೆ ಇಲಾಖೆ ನೀಡುತ್ತಿದೆ! ಕೆಎಸ್ಆರ್ ಬೆಂಗಳೂರು ಮತ್ತು ವೈಟ್ಫೀಲ್ಡ್ ನಡುವೆ ನಡೆಯುತ್ತಿರುವ ಚತುಷ್ಪಥ ರೈಲ್ವೆ ಹಳಿ (Railway Track) ಕಾಮಗಾರಿಯ ಕಾರಣ ಚಿಕ್ಕಮಗಳೂರು-ತಿರುಪತಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 17424) ತನ್ನ ಮಾರ್ಗ ಬದಲಿಸಲಿದೆ ಎಂದು ನೈಋತ್ಯ ರೈಲ್ವೆ ಅಧಿಕೃತ ಪ್ರಕಟಣೆಯಲ್ಲಿ (Announcement) ತಿಳಿಸಿದೆ.
ಜೂನ್ 5, 2026 (ಇಂದು-ಶುಕ್ರವಾರ), ಜೂನ್ 12, 2026 ಮತ್ತು ಜುಲೈ 3, 2026 ಈ ಮೂರು ದಿನಗಳಂದು ಮಾತ್ರ ರೈಲು ಬದಲಿ ಮಾರ್ಗದಲ್ಲಿ ಸಂಚರಿಸಲಿದ್ದು, ಉಳಿದ ದಿನಗಳಲ್ಲಿ ಸಾಮಾನ್ಯ ಮಾರ್ಗದಲ್ಲೇ ಓಡಲಿದೆ. ಇದರಿಂದ 2 ತಾಸು ಪ್ರಯಾಣದ ಅವಧಿ ಹೆಚ್ಚಲಿದೆ. ಹಾಗಾಗಿ ಪ್ರಯಾಣಿಕರು ಇದನ್ನು ಗಮನಿಸಬೇಕು ಎಂದು ತಿಳಿಸಿದೆ.
ಮಾರ್ಗ ಬದಲಾವಣೆಯ ದಿನಗಳಂದು ದೇವನೂರು, ಅರಸೀಕೆರೆ, ತಿಪಟೂರು, ತುಮಕೂರು, ಚಿಕ್ಕಬಾಣಾವರ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ವೈಟ್ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಜೊಲಾರ್ಪೆಟ್ಟೆ, ಕಟಪಾಡಿ, ಚಿತ್ತೂರು ಮತ್ತು ಪಾಕಾಲ ನಿಲ್ದಾಣಗಳಲ್ಲಿ ರೈಲು ನಿಲ್ಲುವುದೇ ಇಲ್ಲ! ಈ ನಿಲ್ದಾಣಗಳಿಂದ ಟಿಕೆಟ್ ಬುಕ್ ಮಾಡಿರುವವರು ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.
ರೈಲ್ವೆಯ ವಿಶೇಷತೆ ಏನು?
ಸಂಜೆ 5:30ಕ್ಕೆ ಚಿಕ್ಕಮಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7:50ಕ್ಕೆ ತಿರುಪತಿ ತಲುಪುವ ಈ ಸಾಪ್ತಾಹಿಕ LHB ರೇಕ್ ರೈಲಿನಲ್ಲಿ 2A, 3A ಮತ್ತು SL ದರ್ಜೆ ಕೋಚ್ಗಳಿದ್ದು ಈ-ಕ್ಯಾಟರಿಂಗ್ ಸೌಲಭ್ಯವೂ ಲಭ್ಯವಿದೆ. ಹಾಗೂ 350 ರೂಪಾಯಿಯಿಂದಲೇ ಟಿಕೆಟ್ ದರ ಶುರುವಾಗುವ ಕಾರಣಕ್ಕೆ ಜನಸಾಮಾನ್ಯರಿಗೆ ಅತಿ ಕಮ್ಮಿ ಖರ್ಚಿನಲ್ಲಿ ಓಡಾಟದ ಅವಕಾಶ ಕಲ್ಪಿಸಲಾಗಿದೆ. ತಿರುಪತಿ ದರ್ಶನ ಮತ್ತು ಹೋಟೆಲ್ ಬುಕಿಂಗ್ ಮಾಡಿಕೊಂಡಿರುವ ಪ್ರಯಾಣಿಕರು ಈ ಮಾರ್ಗ ಬದಲಾವಣೆಗೆ ತಕ್ಕಂತೆ ತಮ್ಮ ಯೋಜನೆ ಮರುಹೊಂದಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಇಲಾಖೆ ಕೋರಿದೆ. ಹೀಗಾಗಿ ಪ್ರಯಾಣಿಕರು ಈ ಮಾರ್ಪಾಡನ್ನು ಹೊರತುಪಡಿಸಿ ಈ ರೈಲ್ವೆ ಪ್ರಯಾಣವನ್ನು ಆರಾಮಾಗಿ ಮಾಡಬಹುದು ಹಾಗೆಯೇ ಇದು ಕುಟುಂಬ ಪ್ರವಾಸಕ್ಕೆ ಸೂಕ್ತ ಎಂಬುದು ನಮ್ಮ ಅಂಬೋಣ.
Chikmagalur,Chikmagalur,Karnataka
Jun 05, 2026 12:18 PM IST













