Balan: ಮಂಜುಮ್ಮೇಲ್ ಬಾಯ್ಸ್ ನಿರ್ದೇಶಕರಿಂದ ಮತ್ತೊಂದು ಸಿನಿಮಾ! ಟ್ರೆಂಡ್ ಆಗ್ತಿದೆ 22 ಕೋಟಿಯ ಮೂವಿ | Balan the boy movie making trend movie with 22 cr budget | | ACTPnews

ಬಾಲನ್


Last Updated:

Balan The Boy: ಬಾಲನ್ ದಿ ಬಾಯ್ ಎನ್ನುವಂತಹ ಒಂದು ಚಿಕ್ಕ ಬಜೆಟ್​​ನ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 22 ಕೋಟಿಯಲ್ಲಿ ರೆಡಿಯಾದ ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ.

ಬಾಲನ್
ಬಾಲನ್

ಮಾಲಿವುಡ್ (Mollywood) ಕಡಿಮೆ ಬಜೆಟ್​​ನಲ್ಲಿ ಒಳ್ಳೆಯ ಸಿನಿಮಾಗಳನ್ನು (Cinema) ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಹಲವಾರು ಸಿನಿಮಾಗಳು ಈ ರೀತಿಯಾಗಿ ಬಂದು ಬೇರೆ ರಾಜ್ಯಗಳಿಂದಲೂ ಅಪಾರ ಪ್ರೀತಿ ಗಳಿಸಿದ ಉದಾಹರಣೆಗಳಿವೆ. ಇದೀಗ ಮಂಜುಮ್ಮೇಲ್ ಬಾಯ್ಸ್ ಸಿನಿಮಾ ನಿರ್ದೇಶಿಸಿದ ಅದೇ ಡೈರೆಕ್ಟರ್ ಮತ್ತೊಂದು ಸಿನಿಮಾ ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಬಾಲನ್ ದಿ ಬಾಯ್ ಎನ್ನುವಂತಹ ಸಿನಿಮಾ ಕೇರಳ ಸಿನಿಮಾ ಪ್ರೇಕ್ಷಕರನ್ನು ಸಾಗರೋಪಾದಿಯಾಗಿ ಥಿಯೇಟರ್​ಗೆ ಸೆಳೆಯುತ್ತಿದೆ. ಅಪಾರ ಜನರು ಸಿನಿಮಾ ನೋಡೋಕೆ ಬರುತ್ತಿದ್ದಾರೆ. ಬಂದವರು ಕಣ್ಣೀರಿಡುತ್ತಾ ಹೋಗುತ್ತಿದ್ದಾರೆ.

ಚಿದಂಬರಂ ಅವರ ‘ಬಾಲನ್: ದಿ ಬಾಯ್’ ಮೂವಿ ಫಸ್ಟ್ ವೀಕೆಂಡ್​​ನಲ್ಲಿ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲಿಸಿದ ನಂತರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಫಸ್ಟ್ ವೀಕ್​ಗೆ ಎಂಟ್ರಿ ಕೊಟ್ಟಿದೆ. ಇತ್ತೀಚಿನ ಹಲವು ರಿಲೀಸ್​​ಗಳಂತೆ ವಾರದ ದಿನಗಳ ಟ್ರೆಂಡ್‌ಗಳು ಶುರುವಾಗಿದೆ.

ಸೋಮವಾರದಂದು ಬಾಲನ್ ಸಿನಿಮಾ ಕಲೆಕ್ಷನ್​ನಲ್ಲಿ ಕುಸಿತ ಕಂಡಿದೆ. 4ನೇ ದಿನದ ಕಲೆಕ್ಷನ್ ಕೂಡಾ ಶೇಕಡಾ 60.3 ರಷ್ಟು ಕುಸಿದಿದೆ. ಸಕ್ನಿಲ್ಕ್ ಪ್ರಕಾರ, ‘ಬಾಲನ್: ದಿ ಬಾಯ್’ ಚಿತ್ರವು 4ನೇ ದಿನದಂದು ಭಾರತದಲ್ಲಿ 1.15 ಕೋಟಿ ನಿವ್ವಳ ಕಲೆಕ್ಷನ್ ಮಾಡಿದೆ.

ಇತ್ತೀಚಿನ ಅಂಕಿ ಅಂಶವು ಭಾನುವಾರದ 2.90 ಕೋಟಿ ನಿವ್ವಳ ಕಲೆಕ್ಷನ್‌ನಿಂದ 60.3 ಪ್ರತಿಶತ ಕುಸಿತವನ್ನು ಪ್ರತಿನಿಧಿಸುತ್ತದೆ. ಸೋಮವಾರ ಈ ಚಿತ್ರವನ್ನು 1,143 ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಯಿತು. ಮಲಯಾಳಂ ವರ್ಷನ್ 1.12 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಶೇ. 27 ರಷ್ಟು ಗಳಿಕೆ ಕಂಡಿದೆ.

ತಮಿಳು ವರ್ಷನ್ ಶೇ. 10 ರಷ್ಟು ಗಳಿಕೆಯೊಂದಿಗೆ 1 ಲಕ್ಷ ರೂ.ಗಳನ್ನು ಗಳಿಸಿದ್ದರೆ, ತೆಲುಗು ವರ್ಷನ್ ಶೇ. 17 ರಷ್ಟು ಗಳಿಕೆಯೊಂದಿಗೆ 2 ಲಕ್ಷ ರೂ.ಗಳನ್ನು ಗಳಿಸಿದೆ. ಸಂಜೆ ಶೋಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಸೋಮವಾರ ಬಾಲನ್ ಮೂವಿ ಒಟ್ಟಾರೆಯಾಗಿ ಶೇ.24.17 ರಷ್ಟು ಪ್ರೇಕ್ಷಕರನ್ನು ದಾಖಲಿಸಿದೆ.

ಬೆಳಗಿನ ಶೋಗಳು ಶೇ.9.67 ರಷ್ಟು ಪ್ರೇಕ್ಷಕರನ್ನು ದಾಖಲಾಗಿವೆ. ಮಧ್ಯಾಹ್ನದ ಪ್ರದರ್ಶನಗಳು ಶೇ.20.58 ಕ್ಕೆ ಸುಧಾರಿಸಿವೆ. ಸಂಜೆ ಪ್ರದರ್ಶನಗಳು ಶೇ.25.17 ಕ್ಕೆ ಏರಿವೆ, ಆದರೆ ರಾತ್ರಿ ಪ್ರದರ್ಶನಗಳು ದಿನದ ಅತ್ಯಧಿಕ ಪ್ರೇಕ್ಷಕರನ್ನು ಕಂಡಿದ್ದು ಶೇ.32.58 ರಷ್ಟು ಆಡಿಯನ್ಸ್ ಬಂದಿದ್ದಾರೆ.

ನಾಲ್ಕು ದಿನಗಳು ಪೂರ್ಣಗೊಂಡಾಗ, ‘ಬಾಲನ್: ದಿ ಬಾಯ್’ ಭಾರತದ ಒಟ್ಟು ಕಲೆಕ್ಷನ್ 8.22 ಕೋಟಿ ರೂ.ಗಳಾಗಿದೆ. ಈಗ ಚಿತ್ರದ ಭಾರತದ ಒಟ್ಟು ಕಲೆಕ್ಷನ್ 9.53 ಕೋಟಿ ರೂ.ಗಳಷ್ಟಿದೆ.

ಚಿತ್ರದ ಒಟ್ಟಾರೆ ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸಿವೆ. 4 ನೇ ದಿನದಂದು, ಚಿತ್ರವು ವಿದೇಶಗಳಲ್ಲಿ 70 ಲಕ್ಷ ರೂ. ಒಟ್ಟು ಕಲೆಕ್ಷನ್ ಮಾಡಿತು. ಅಂದರೆ ಅದರ ಒಟ್ಟು ವಿದೇಶಗಳ ಒಟ್ಟು ಸಂಗ್ರಹ 8.00 ಕೋಟಿ ರೂ.ಗಳಿಗೆ ತಲುಪುತ್ತದೆ. ವಿಶ್ವಾದ್ಯಂತ ಒಟ್ಟು ಸಂಗ್ರಹವು ಈಗ 17.53 ಕೋಟಿ ರೂ.ಗಳಿಗೆ ತಲುಪಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed