Last Updated:
2026ರ ಏಷಿಯನ್ ಗೇಮ್ಸ್ ಕ್ವಾಲಿಫೈಯರ್‌ನ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ತಂಡವು ಡ್ರಾಗನ್ ದೇಶ ಚೀನಾವನ್ನು 221 ರನ್‌ಗಳ ಭಾರೀ ಅಂತರದಲ್ಲಿಸೋಲುಣಿಸಿ ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.
ಇಂದಿನಿಂದ ಸಿಂಗಪೂರ್‌ನಲ್ಲಿ ಆರಂಭವಾದ 2026ರ ಏಷಿಯನ್ ಗೇಮ್ಸ್ ಕ್ವಾಲಿಫೈಯರ್‌ನ (Asian Games Men’s T20I Qualifier, 2026) ಉದ್ಘಾಟನಾ ಪಂದ್ಯದಲ್ಲಿ ನೇಪಾಳ ತಂಡವು ಡ್ರಾಗನ್ ದೇಶ ಚೀನಾವನ್ನು (Nepal vs China) 221 ರನ್‌ಗಳ ಭಾರೀ ಅಂತರದಲ್ಲಿಸೋಲುಣಿಸಿ ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡಕ್ಕೆ ತಂಡದ ಆರಂಭಿಕ ಆಟಗಾರ ಕುಶಲ್ ಭುರ್ಟೆಲ್ ಅವರ ಅತ್ಯುತ್ತಮ ಬಿರುಸಿನ 129 (43) ಶತಕದ ಸಹಾಯದಿಂದ ನೇಪಾಳ ತಂಡವು ದಾಖಲೆಯ 313 ರನ್‌ಗಳಿಸಲು ಮುಖ್ಯವಾದ ಬುನಾದಿಯನ್ನು ಹಾಕಿಕೊಟ್ಟಿತ್ತು. ಇಷ್ಟಲ್ಲದೇ ಒಂದು ಓವರ್‌ನಲ್ಲಿ ಸತತ 6 ಸಿಕ್ಸ್‌ರ್ ಸಿಡಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದರು.
ನೇಪಾಳ ತಂಡವು 300 ರನ್ ಪೇರಿಸಿರುವುದು ಇದು ಮೊದಲೇನಲ್ಲಾ, ಇದಕ್ಕೂ ಮೊದಲು 2023 ರ ಸೆಪ್ಟೆಂಬರ್‌ನಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಮಂಗೋಲಿಯಾ ತಂಡದ ವಿರುದ್ಧ ಈ ದಾಖಲೆಯನ್ನು ಮಾಡಿತ್ತು. ಈ ದಾಖಲೆಯಿಂದಾಗಿ ಟಿ-ಟ್ವೆಂಟಿ ಇತಿಹಾಸದಲ್ಲಿ 300 ರನ್ ಪೇರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಮತ್ತೊಮ್ಮೆ 300ರ ಗಡಿ ದಾಟಿಸುವುದರ ಮೂಲಕ ಎರಡನೇ ಬಾರಿಗೆ 300ರ ಗಡಿ ದಾಟಿಸಿರುವ ಮೊದಲ ತಂಡವಾಗಿ ಹೊರಹೊಮ್ಮಿದೆ.
ಒಟ್ಟಾರೆಯಾಗಿ ಕೇವಲ 4 ತಂಡಗಳಷ್ಟೇ 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದೆ. ಅವುಗಳೆಂದರೆ ಜಿಂಬಾಬ್ವೆ, ನೇಪಾಳ, ಜರ್ಮನಿ, ಇಂಗ್ಲೆಂಡ್ ಈ ನಾಲ್ಕು ತಂಡಗಳು ಮಾತ್ರ ಚುಟುಕು ಮಾದರಿಯ ಟಿ – ಟ್ವೆಂಟಿ ಇತಿಹಾಸದಲ್ಲಿ 300 ರನ್‌ಗಳಿಗೂ ಅಧಿಕ ರನ್ ಗಳಿಸಿರುವ ತಂಡವಾಗಿದೆ.
313 ರ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಚೀನಾ ಆರಂಭಿಕ ಆಗಾತಕ್ಕೇ ಒಳಗಾಗಿತು. ನೇಪಾಳ ತಂಡದ ಬೌಲಿಂಗ್ ದಾಳಿಗೆ ಡ್ರಾಗನ್ ಪಡೆ ತತ್ತರಿಸಿ ದೂಳಿಪಟವಾಗಿತ್ತು. ಇದರ ನಡುವೆಯು ಚೀನಾದ ಶೆನ್ಜಿಯನ್ ಜೆ಼ಗ್ 15 ಎಸೆತಗಳಲ್ಲಿ 31ರನ್ ಗಳಿಸಿ ಟಾಪ್ ಸ್ಕೋರರ್ ಆದರು. ತಂಡದ 4 ಆಟಗಾರರು ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಚೀನಾ 19.2 ಓವರ್ರ್ಗಳಲ್ಲಿ 92 ರನ್‌ಗಳಿಗೆ ಸರ್ವಪತನಗೊಂಡಿತು. ಇದರಿಂದಾಗಿ ನೇಪಾಳ ತಂಡವು 221 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿಕೊಂಡಿದೆ. ಇದು ಟಿ- ಟ್ವೆಂಟಿ ಇತಿಹಾಸದಲ್ಲೇ 7ನೇ ಅತಿ ಹೆಚ್ಚು ಅಂತರದ ಗೆಲುವಾಗಿದೆ.
ಅತಿ ಹೆಚ್ಚು ಅಂತರದ ಗೆಲುವನ್ನ ಜಿಂಬಾಬ್ವೆ ಮುಡಿಯಲ್ಲಿದೆ. ಜಿಂಬಾಬ್ವೆ ತಂಡವು 2024ರ ಅಕ್ಟೋಬರ್‌ನಲ್ಲಿ ಗಾಂಬಿಯಾ ವಿರುದ್ಧ 290 ರನ್‌ಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದರೆ, 2023ರ ಸೆಪ್ಟೆಂಬರ್‌ನಲ್ಲಿ ನೇಪಾಳ ತಂಡವು ಮಂಗೋಲಿಯಾವನ್ನು 273 ರನ್‌ಗಳಿಂದ ಬಗ್ಗು ಬಡಿದು ಎರಡನೇ ಸ್ಥಾನದಲ್ಲಿದೆ.
ಜೂನ್ 4 ರಂದು ಇದೇ ಮೈದಾನದಲ್ಲಿ ನೇಪಾಳ ತಂಡ ತನ್ನ ಎರಡನೇ ಮತ್ತು ಕೊನೆಯ ಗ್ರೂಪ್ ಪಂದ್ಯವನ್ನು ಮಂಗೋಲಿಯಾ ವಿರುದ್ಧ ಆಡಲಿದೆ. ಇದಕ್ಕೂ ಮುಂಚೆ ಮಂಗೋಲಿಯಾ ತಂಡವು ಜೂನ್ 2 ರಂದು ಚೀನಾವನ್ನು ಎದುರಿಸಿ ಈ ಪಂದ್ಯವನ್ನುಆಡಲಿದೆ.
ಇದರಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಅವುಗಳೆಂದರೆ ನೇಪಾಳ, ಮಲೇಶಿಯಾ, ಕತಾರ್, ಚೀನಾ , ಹಾಂಗ್‌ಕಾಂಗ್, ಸಿಂಗಪೂರ್,ಒಮಾನ್,ಬಹ್ರೇನ್ ಇದಿಷ್ಟು ತಂಡಗಳು ಏಷಿಯನ್ ಗೇಮ್ಸ್nepal
Asian Games Men’s T20I Qualifier: 221 ರನ್‌ಗಳಿಂದ ಗೆದ್ದ ಟಿ20ಯಲ್ಲಿ ಹೊಸ ದಾಖಲೆ ಬರೆದ ನೇಪಾಳ! ಚುಟುಕು ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿ ವಿಶ್ವದ ಏಕೈಕ ತಂಡ













