Anant Ambani Visits Tirumala: ತಿಮ್ಮಪ್ಪನ ದರ್ಶನ ಪಡೆದು ಮುಡಿ ಅರ್ಪಿಸಿದ ಅನಂತ್ ಅಂಬಾನಿ; ತಿರುಮಲ ಶ್ರೀವಾರಿಗೆ ಭಾರೀ ದೇಣಿಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ!


Last Updated:

Anant Ambani Visits Tirumala: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ ಇಂದು ತಿರುಮಲ ಶ್ರೀವಾರಿ ದರ್ಶನ ಪಡೆದುಕೊಂಡಿದ್ದಾರೆ. ಬೆಳಗ್ಗೆ ಸುಪ್ರಭಾತ ಸೇವೆಯಲ್ಲಿ ಭಾಗಿಯಾಗಿದ್ದ ಅನಂತ್, ಮುಡಿ ಅರ್ಪಿಸಿ ಭಾರೀ ದೇಣಿಗೆ ಘೋಷಣೆ ಮಾಡಿದ್ದಾರೆ.

ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ!
ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ!

ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ (Reliance Industries) ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ (Anant Ambani) ಭಾನುವಾರ ಬೆಳಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ (Tirumala Tirupati Devasthanams) ಪಡೆದುಕೊಂಡಿದ್ದಾರೆ. ಸುಪ್ರಭಾತ ಸೇವೆಯಲ್ಲಿ ಭಾಗಿಯಾಗಿದ್ದ ಅನಂತ್ ಅಂಬಾನಿ ಅವರಿಗೆ, ದೇವಸ್ಥಾನದ ರಂಗನಾಯಕರ ಮಂಟಪದಲ್ಲಿ ವೇದಪಂಡಿತರು ವೇದಾಶೀರ್ವಚನ ನೀಡಿದ್ದಾರೆ. ದೇವಾಲಯದ ಅಧಿಕಾರಿಗಳು ಶ್ರೀವಾರಿ ತೀರ್ಥಪ್ರಸಾದ ಹಾಗೂ ರೇಷ್ಮೆ ವಸ್ತ್ರಗಳಿಂದ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸಲು ಟಿಟಿಡಿಗೆ (TTD) ಭಾರೀ ದೇಣಿಗೆ ಘೋಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡಿದ ಅನಂತ್ ಅಂಬಾನಿ ಅವರು, ಸುಮಾರು 27.5 ಕೋಟಿ ರೂಪಾಯಿ ಬೆಲೆಯ 25 ಎಲೆಕ್ಟ್ರಿಕ್ ಬಸ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಬಸ್ಗಳು ತಿರುಮಲದಲ್ಲಿ ಭಕ್ತರಿಗೆ ಸಾರಿಗೆ ಸೌಲಭ್ಯ ಒದಗಿಸಲು ಬಳಕೆ ಮಾಡಲಾಗುತ್ತದೆ. ಅಲ್ಲದೇ, ಈ ಬಸ್ ಗಳಿಗೆ ಅಗತ್ಯವಿರುವ 50 ಮಂದಿ ಚಾಲಕರ ಸಂಬಳ, ಭತ್ಯೆಗಳನ್ನು ಕೂಡ ಸಂಪೂರ್ಣವಾಗಿ ರಿಲಯನ್ಸ್ ಸಂಸ್ಥೆಯೇ ವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದು ಟಿಟಿಡಿ ಮೇಲಿನ ಆರ್ಥಿಕ ಭರವನ್ನು ಕಡಿಮೆ ಮಾಡಲಿದೆ. ಅಲ್ಲದೇ ಭಕ್ತರಿಗೆ ನೀಡುತ್ತಿರುವ ಸೇವೆಗಳು ಮತ್ತಷ್ಟು ಉತ್ತಮಗೊಳ್ಳಲು ಸಹಕಾರಿಯಾಗಲಿದೆ. ಈ ದೇಣಿಗೆಯನ್ನು ಟಿಟಿಡಿ ಅಧಿಕೃತ ಮೂಲಗಳು ಮತ್ತು ರಿಲಯನ್ಸ್ ಕಂಪನಿ ಪ್ರತಿನಿಧಿಗಳು ದೃಢಪಡಿಸಿದ್ದಾರೆ.

ತಿರುಮಲದಲ್ಲಿ ಎಲೆಕ್ಟ್ರಿಕ್ ಬಸ್ ಗಳ ಚಾರ್ಜಿಂಗ್ ಗಾಗಿ ಚಾರ್ಜಿಂಗ್ ಸ್ಟೇಷನ್ ಏರ್ಪಡಿಸಲು ಕೂಡ ಅನಂತ್ ಅಂಬಾನಿ ಅಂಗೀಕರಿಸಿದ್ದಾರೆ. ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ರಿಲಯನ್ಸ್ ಸಂಸ್ಥೆ ಸುಸ್ಥಿರ ಅಭಿವೃದ್ಧಿ, ಗ್ರೀನ್ ಇನಿಷಿಯೇಟಿವ್ಸ್ ಭಾಗವಾಗಿ ಈ ಕಾರ್ಯವನ್ನು ಮಾಡುತ್ತಿದೆ. ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಎಗ್ಜಿಗ್ಯೂಟಿವ್ ಡೈರೆಕ್ಟರ್ ಆಗಿ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ರಂಗಗಳಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ದೇಣಿಗೆಯೂ ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.

Anant Ambani Tirumala donation, Anant Ambani, Tirumala Tirupati Devasthanams, electric buses donation, Reliance Industries CSR, eco-friendly transport, sustainable development India, Tirumala pilgrims facilities, ಅನಂತ್ ಅಂಬಾನಿ ತಿರುಮಲ ದೇಣಿಗೆ, ಅನಂತ್ ಅಂಬಾನಿ, ತಿರುಮಲ ತಿರುಪತಿ ದೇವಸ್ಥಾನಗಳು, ವಿದ್ಯುತ್ ಬಸ್ಸುಗಳ ದೇಣಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಸಿಎಸ್ಆರ್, ಪರಿಸರ ಸ್ನೇಹಿ ಸಾರಿಗೆ, ಸುಸ್ಥಿರ ಅಭಿವೃದ್ಧಿ ಭಾರತ, ತಿರುಮಲ ಯಾತ್ರಿಕರ ಸೌಲಭ್ಯಗಳು,

ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ

ಈ ದರ್ಶನ, ದೇಣಿಗೆ ವಿಚಾರವಾಗಿ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇಂತಹ ದೇಣಿಗೆಗಳು ದೇವಾಲಯದ ಅಭಿವೃದ್ಧಿ, ಭಕ್ತರ ಸೌಲಭ್ಯಗಳನ್ನು ಮತ್ತಷ್ಟು ಮೆರುಗುಗೊಳಿಸುತ್ತವೆ ಎಂದು ಟಿಟಿಡಿ ಇವೋ ತಿಳಿಸಿದ್ದಾರೆ. ಈ ಹಿಂದೆಯೂ ಕೂಡ ಅಂಬಾನಿ ಕುಟುಂಬದ ಸದಸ್ಯರು ತಿಮ್ಮಪ್ಪನ ದರ್ಶನ ಪಡೆದುಕೊಂಡ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ತಿರುಮಲಕ್ಕೆ ನೆರವು ನೀಡಿದ್ದರು. ಅನಂತ್ ಅಂಬಾನಿ ಅವರು ಈ ಸಂದರ್ಭದಲ್ಲಿ ದೇವಾಲಯದಲ್ಲಿ ದರ್ಶನ ಪಡೆದುಕೊಂಡು, ಭಕ್ತರ ಸಮಸ್ಯೆಗಳು ಹಾಗೂ ಅಗತ್ಯತೆಗಳ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ನಡೆಸಿದ್ದಾರೆ. ಈ ಎಲೆಕ್ಟ್ರಿಕ್ ಬಸ್ ಗಳು ತಿರುಮಲ ಘಾಟ್ ಮಾರ್ಗ, ತಿರುಪತಿ-ತಿರುಮಲ ಮಾರ್ಗದಲ್ಲಿ ಸಂಚಾರ ಮಾಡುವ ಮೂಲಕ ಕಾರ್ಬನ್ ಎಮಿಷನ್ ಅನ್ನು ಕಡಿಮೆ ಮಾಡಿ, ಪರಿಸರ ಸಂರಕ್ಷಣೆಯಲ್ಲಿ ನೆರವು ನೀಡಲಿದೆ.

Anant Ambani Tirumala donation, Anant Ambani, Tirumala Tirupati Devasthanams, electric buses donation, Reliance Industries CSR, eco-friendly transport, sustainable development India, Tirumala pilgrims facilities, ಅನಂತ್ ಅಂಬಾನಿ ತಿರುಮಲ ದೇಣಿಗೆ, ಅನಂತ್ ಅಂಬಾನಿ, ತಿರುಮಲ ತಿರುಪತಿ ದೇವಸ್ಥಾನಗಳು, ವಿದ್ಯುತ್ ಬಸ್ಸುಗಳ ದೇಣಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಸಿಎಸ್ಆರ್, ಪರಿಸರ ಸ್ನೇಹಿ ಸಾರಿಗೆ, ಸುಸ್ಥಿರ ಅಭಿವೃದ್ಧಿ ಭಾರತ, ತಿರುಮಲ ಯಾತ್ರಿಕರ ಸೌಲಭ್ಯಗಳು,

ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ

ಅನಂತ್ ಅಂಬಾನಿ ಅವರು ದೇಶದ ಯುವ ಜನತೆಗೆ ಸ್ಪೂರ್ತಿಯಾಗಿದ್ದು, ರಿಲಯನ್ಸ್ ಸಂಸ್ಥೆ ಇಂತಹ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ತನ್ನ ಸಿಎಸ್ಆರ್ ಅನ್ನು ಮತ್ತಷ್ಟು ಬಲಪಡಿಸುತ್ತಿದೆ. ಟಿಟಿಡಿ ಈ ಬಸ್ ಗಳನ್ನು ಭಕ್ತರಿಗೆ ನೀಡುವ ಉಚಿತ ಸೇವೆಯಲ್ಲಿ ಬಳಕೆ ಮಾಡಲಿದ್ದು, ಈ ಕಾರ್ಯಕ್ರಮ ತಿರುಮಲದಲ್ಲಿ ಅತ್ಯಾಧುನಿಕ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಹೊಸ ಮಾರ್ಗವನ್ನು ಸೃಷ್ಟಿಸಿದೆ. ಭಕ್ತರು ಕೂಡ ಈ ದೇಣಿಗೆ ಬಗ್ಗೆ ಸಂತಸದಿಂದ ಸ್ವಾಗತ ಮಾಡಿದ್ದಾರೆ.

ಇದರೊಂದಿಗೆ ಅನಂತ್ ಅಂಬಾನಿ ಅವರ ತಿರುಮಲ ದರ್ಶನ ಕೇವಲ ಆಧ್ಯಾತ್ಮಿಕ ಕಾರ್ಯಕ್ರಮವಾಗಿ ಮಾತ್ರವಲ್ಲದೆ, ಸಾಮಾಜಿಕ ಸೇವಾ ಕಾರ್ಯಕ್ರಮವಾಗಿ ಬದಲಾಗಿದೆ. ಈ ದೇಣಿಗೆ ಮೂಲಕ ಟಿಟಿಡಿ ಸಾರಿಗೆ ವ್ಯವಸ್ಥೆ ಮತ್ತಷ್ಟು ಆಧುನಿಕರಣಗೊಂಡಿದ್ದು, ಪರಿಸರ ಸ್ನೇಹಿಯಾಗಿದೆ. ರಿಲಯನ್ಸ್ ಇಂಡಸ್ಟ್ರಿಸ್ ಟಿಟಿಡಿ ನಡುವೆ ಈ ಸಹಕಾರ ಭವಿಷ್ಯದಲ್ಲೂ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪೂರಕವಾಗಿರಲಿದೆ ಎಂದು ಆಶಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed